ಗೊಲ್ಲರ ಹುಡುಕಾಟ
ಕವನ
ಗೊಲ್ಲರ ಹುಡುಕಾಟ
ಎಲ್ಲಿಹನೋ ಕನ್ನಯ್ಯ
ಬಹಳ ತಡವೇ ಆಯಿತು |
ಮಲ್ಲಣ್ಣ ಕೆಂಪಣ್ಣ ರಾ
-ಮಣ್ಣ ನೀವ್ ಬನ್ನಿರೋ ||ಪ||
ಕುಡಿಗೋಲು ಕಂಬಳಿ
ದೊಣ್ಣೆಯನ್ನು ತನ್ನಿರೋ |
ಕುಡಿಯಲು ಕೆನೆಹಾಲು
ಕೃಷ್ಣಂಗೆ ನೀವ್ ತನ್ನಿರೋ ||೧||
ಬೆಣ್ಣೆಯ ಮೆಲುತಾನೆಂದು
ಕುಡಿಕೇಲಿ ತಂದಿವ್ನಿ |
ಕನ್ನಯ್ಯಂಗೆ ಕಾಣದಂಗೆ
ಕಂಬ್ಳೀಲಿ ಮುಚ್ಚೀವ್ನಿ ||೨||
ಬರ್ಲಿ ಅವನ ಮುದ್ದು ಮಾಡಿ
ಆಮ್ಯಾಲೇ ಕೊಡ್ತೀನಿ |
ಯಾರು ಕೇಳಬ್ಯಾಡ್ರಿ ಮತ್ತೆ
ಸಿಟ್ಟು ಮಾಡಿ ಬಿಡ್ತೀನಿ ||೩||
- ಸದಾನಂದ
ಎಲ್ಲಿಹನೋ ಕನ್ನಯ್ಯ
ಬಹಳ ತಡವೇ ಆಯಿತು |
ಮಲ್ಲಣ್ಣ ಕೆಂಪಣ್ಣ ರಾ
-ಮಣ್ಣ ನೀವ್ ಬನ್ನಿರೋ ||ಪ||
ಕುಡಿಗೋಲು ಕಂಬಳಿ
ದೊಣ್ಣೆಯನ್ನು ತನ್ನಿರೋ |
ಕುಡಿಯಲು ಕೆನೆಹಾಲು
ಕೃಷ್ಣಂಗೆ ನೀವ್ ತನ್ನಿರೋ ||೧||
ಬೆಣ್ಣೆಯ ಮೆಲುತಾನೆಂದು
ಕುಡಿಕೇಲಿ ತಂದಿವ್ನಿ |
ಕನ್ನಯ್ಯಂಗೆ ಕಾಣದಂಗೆ
ಕಂಬ್ಳೀಲಿ ಮುಚ್ಚೀವ್ನಿ ||೨||
ಬರ್ಲಿ ಅವನ ಮುದ್ದು ಮಾಡಿ
ಆಮ್ಯಾಲೇ ಕೊಡ್ತೀನಿ |
ಯಾರು ಕೇಳಬ್ಯಾಡ್ರಿ ಮತ್ತೆ
ಸಿಟ್ಟು ಮಾಡಿ ಬಿಡ್ತೀನಿ ||೩||
- ಸದಾನಂದ