ಕಾಣುತಿಹುದೆಲ್ಲೆಲ್ಲೂ.. ಕೇಳುತಿಹುದೆಲ್ಲೆಲ್ಲೂ

ಕಾಣುತಿಹುದೆಲ್ಲೆಲ್ಲೂ.. ಕೇಳುತಿಹುದೆಲ್ಲೆಲ್ಲೂ

ಕವನ
 
 
 
 
 
 
 
 
  
 
 
ಕಾಣುತಿಹುದೆಲ್ಲೆಲ್ಲೂ  ತ್ರಿವರ್ಣ ಧ್ವಜ ಹಿಡಿದ ಕೈಗಳು
ಕೇಳುತಿಹುದೆಲ್ಲೆಲ್ಲೂ ನ್ಯಾಯ ಬೇಕೆಂಬ ಕೂಗುಗಳು
 
ಕಾಣುತಿಹುದೆಲ್ಲೆಲ್ಲೂ ಫಲಕ ಹಿಡಿದ ಕೈಗಳು
ಕೇಳುತಿಹುದೆಲ್ಲೆಲ್ಲೂ ಭ್ರಷ್ಟಾಚಾರದ ವಿರುದ್ಧ ಕೂಗುಗಳು
 
ಕಾಣುತಿಹುದೆಲ್ಲೆಲ್ಲೂ ಅಣ್ಣಾ ಹಜಾರೆಯ ಚಿತ್ರಗಳು
ಕೇಳುತಿಹುದೆಲ್ಲೆಲ್ಲೂ ಅಣ್ಣನಿಗೆ ಜೈಕಾರಗಳು
 
ಕಾಣುತಿಹುದೆಲ್ಲೆಲ್ಲೂ ಪ್ರತಿಭಟನೆಯ ಮೆರವಣಿಗೆಗಳು
ಕೇಳುತಿಹುದೆಲ್ಲೆಲ್ಲೂ ನವಭಾರತ ನಿರ್ಮಾಣದ ಕೂಗುಗಳು
 
ಕಂಡರೂ ಕಾಣಿಸದಂತಿರುವರು ಗದ್ದುಗೆಯಲ್ಲಿ ಕುಳಿತಿರುವವರು
ಕೇಳಿದರು ಕೇಳಿಸದಂತಿರುವರು  ಭ್ರಷ್ಟ ರಾಜಕಾರಣಿಗಳು
 
ಚಿತ್ರ ಕೃಪೆ : ಅಂತರ್ಜಾಲ

Comments