ಲೂಟಿ

ಲೂಟಿ

ಕವನ

ಅಂದೆಂದೋ ಅರಬ್ಬರು
ಅಮೇಲೆ ಬಿಳಿಯರು
ಇಂದು ನಮ್ಮವರೇ
ಕರಿಯರು!
ತಡೆಯಿಲ್ಲದೆ ನಡೆಸಿಹರು
ಬಂಗಾರದ ಹಕ್ಕಿ
ಭಾರತದ ಲೂಟಿ!
 
ಅಂದು ರಾಣಶಿವಾಜಿ
ಮತ್ತೆಂದೋ ಗಾಂಧೀ
ಇಂದು ನಮ್ಮೊಳಗೇ
ಹಜಾರೆ ಅಣ್ಣ!
ತಡೆಯಾಗಿ ಬಂದಿಹರು
ಬಂಗಾರದ ಹಕ್ಕಿ
ಭಾರತದ ಲೂಟಿಗೆ!
 
ಅವರೆಲ್ಲ ತಡೆಯಿಟ್ಟರು
ಗುಂಡಿಗೆ ಎದೆ ಕೊಟ್ಟರು
ನೆತ್ತರ ಕಾರಿದರು
ನಿಲ್ಲಲಿಲ್ಲ ಲೂಟಿ!
ಅಂದೂ, ಇಂದೂ
ಬಂಗಾರದ ಹಕ್ಕಿ
ಭಾರತದ ಲೂಟಿ!
 
ನಿಲ್ಲದಿದ್ದರೆನಂತೆ ಲೂಟಿ
ನಿಲ್ಲದಿರಲಿ ತಡೆ
ಎದ್ದು ನಿಲ್ಲೋಣ
ನಾವೆಲ್ಲರೊಂದಾಗಿ!
"ಅಂಜಿದ ಬಾಳಿಗಿಂತ
ಸತ್ತು ಬಾಳುವುದೊಳಿತು"
ಒಕ್ಕೊರಲಿನ ಕೂಗು
ಮುಗಿಲಿಗೇರಲಿ
ಅಣ್ಣನ ಜೊತೆಗೂಡಿ!!

ಕುಮಾರಸ್ವಾಮಿ.ಕಡಾಕೊಳ್ಳ
 

Comments