ಬಾಣಂತನ ಅಥವಾ ಬಾಣಂತಿ ಆರೈಕೆ

ಬಾಣಂತನ ಅಥವಾ ಬಾಣಂತಿ ಆರೈಕೆ

ಓದುಗರ ಗಮನಕ್ಕೆ: ಈ ಬರಹ ನನ್ನದಲ್ಲ, ಇದು ಒಂದು ಮಾಹಿತಿ ಸಂಗ್ರಹ. ಹಲವಾರು ಲೇಖನ ಹಾಗು ವೆಬ್ಸೈಟ್  ಗಳಿಂದ ಸಂಗ್ರಹಿಸಿದ್ದು.
 
ಬಾಣಂತನ ಅಥವಾ ಬಾಣಂತಿ ಆರೈಕೆ - ಈ ಲೇಖನದ ಉದ್ದೇಶ - ಓದುಗರಿಗೆ ಬಾಣಂತನದ ಹಳೆಯ ಪದ್ಧತಿಗಳ ಒಂದು ಪಟ್ಟಿ ಒದಗಿಸುವ ಪ್ರಯತ್ನ. ವೈಜ್ಞಾನಿಕ / ಅವೈಜ್ಞಾನಿಕ ಸರಿ/ತಪ್ಪು ಎಂಬುದರ ಬಗ್ಗೆ ಚರ್ಚೆ ಇಲ್ಲಿ ಬೇಡವೆಂದು ವಿನಂತಿಸುತ್ತೇನೆ.
 
೧. ನವಜಾತ ಶಿಶುವನ್ನು ಬೆಳಗಿನ ಬಿಸಿಲಿಗೆ ಹಿಡಿಯುವುದು - ಮಗುವಿನ ಚರ್ಮಕ್ಕೆ ಹಾಗು ತ್ವಚೆಗೆ ಒಳ್ಳೆಯದು ಎಂಬ ಕಾರಣದಿಂದ.  
೨. ಬಾಣಂತಿಯರು  ಹೆರಿಗೆಯಾದ ೨೦ / ೩೦ ದಿನ ನೀರನ್ನು ಕುಡಿಯಬಾರದು, ಆತಿ ಹೆಚ್ಚು ಎಂದರೆ ದಿನಕ್ಕೆ ಒಂದು ಲೋಟಕ್ಕೆ ಸೀಮಿತಗೊಳಿಸಬೇಕು 
೩.  ಬಾಣಂತಿಯರು  ಹಾಸಿಗೆಯ / ದಿಂಬಿನ ಅಡಿಯಲ್ಲಿ ಪೊರಕೆ ಕಡ್ಡಿ ಇಟ್ಟರೆ ದುಷ್ಟಶಕ್ತಿಗಳಿಂದ ರಕ್ಷೆ ಎಂಬ ನಂಬಿಕೆ
೪. ಮಗುವಿಗೆ ದೊಡ್ಡದಾಗಿ ಅಥವಾ ವಿಕಾರವಾಗಿ ಕಾಡಿಗೆ ಬೊಟ್ಟು ಇಟ್ಟರೆ ದೃಷ್ಟಿ ಆಗುವುದಿಲ್ಲ ಎಂಬ ನಂಬಿಕೆ
೫. ಹಸಿ ಬಾಣಂತಿ ತಿಂಗಳವರೆಗೆ ನೆಲದ ಮೇಲೆ ಕೂರುವಾಗ ಸುಖಾಸನದಲ್ಲಿ (ಚಕ್ಕ್ಲಮ್ಬಕ್ಲು) ಕೂರಬಾರದು
೬. ಬಾಣಂತಿ ಓದಬಾರದು, ಬರೆಯಬಾರದು, ಹೊಲಿಯಬಾರದು, ಯಾವುದೇ ಕಸೂತಿ ಕೆಲಸ ಮಾಡಬಾರದು - ಕಣ್ಣಿಗೆ ಹಾಗು ಮನಸ್ಸಿಗೆ ವಿಶ್ರಾಂತಿ ಬೇಕೆಂಬ ಕಾರಣದಿಂದ
೭. ಹೆರಿಗೆಯಾಗಿ ಎರಡು / ಮೂರು ವಾರಗಳ ವರೆಗೆ ಬಾಣಂತಿ ಅವಶ್ಯಕ ಕೆಲಸಗಳಿಗೆ ಹೊರತಾಗಿ, ಜಾಸ್ತಿ ನಡೆದಾಡಬಾರದು
೮. ಮಗುವಿಗೆ ಹಾಲುಡಿಸುವ ಸಮಯವಲ್ಲದೆ ಜಾಸ್ತಿ ಕೂತಿರಬಾರದು, ಮಲಗಿರುವುದು ಉತ್ತಮ ( ಬೆನ್ನು ನೋವು ಬರಬಹುದೆಂಬ ಕಾರಣದಿಂದ)
೯. ಬಾಣಂತಿ ಕೋಣೆಯಲ್ಲಿ ಬೆಳಕು ಕಮ್ಮಿ ಇರುವ ಹಾಗೆ ವ್ಯವಸ್ತೆ ಮಾಡಿದರೆ ಒಳಿತು - ವಿಶ್ರಾಂತಿಗೆ ಅನುಕೂಲ ಅನ್ನುವುದು ಕಾರಣ 
೧೦. ಬಾಣಂತಿಯರು ಸುಮಾರು ಒಂದೂವರೆ  ತಿಂಗಳ ತನಕ ಉಪ್ಪುಖಾರ ಗಳನ್ನು ಸೇವಿಸಬಾರದು 
೧೧. ಬಾಣಂತಿಯರು ತೆಂಗಿನಕಾಯಿ ತಿನ್ನಬಾರದು 
೧೨. ಬಾಣಂತಿಯರು ಹೊಟ್ಟೆ ಕಟ್ಟಿಕೊಳ್ಳಬೇಕು - ಹೊಟ್ಟೆ ಉಬ್ಬಿರುವುದನ್ನು ಕಡಿಮೆ ಮಾಡಲು ಸಹಾಯವಾಗುವುದು ( ಹಳೆಯ ಸೀರೆ ಯನ್ನು ಸುತ್ತಿಕೊಳ್ಳಬಹುದು, ಇಲ್ಲದಿದ್ದರೆ ಇಗ BELT ಕೂಡ ದೊರೆಯುವುದು )
೧೩. ತುಂಬಾ ಮುಖ್ಯ - ಬೆಂಡೇಕಾಯಿ ತಿನ್ನಬಾರದು  - ಶೀತ ಆಗಬಹುದೆಂದು
೧೪.   ಹೆರಿಗೆಯಾಗಿ ೩೦ ದಿನ ತರಕಾರಿ ಬಳಕೆ ಮಾಡಬಾರದು - ಮೆಣಸಿನ ಸಾರು, ಸೊಪ್ಪಿನ ಸಾರು ( ದೊಡ್ದಿಪತ್ರೆ, ವಂದಲಗ ಇಂತ ಹಲವಾರು ಸೊಪ್ಪು ಒಳ್ಳೆಯದು)
೧೫. ಬಾಣಂತಿಯರಿಗೆ ಹೆಚ್ಚು ಕರಿಬೇವಿನ ಉಪಯೋಗ ಒಳ್ಳೆಯದು - ಕರಿಬೇವು ಚಟ್ನಿಪುಡಿ, ಕರಿಬೇವು ಚಟ್ನಿ ....
೧೬. ಬಾಣಂತಿ ಹಸಿಮೆಣಸಿನಕಾಯಿ ಹಾಕಿ ಮಾಡಿದ ಯಾವುದೇ ಆಹಾರ ಉಪಯೋಗಿಸಬಾರದು 
 
ಸ್ನೇಹಿತರೇ, ಇವುಗಳಲ್ಲದೆ ನಿಮಗೆ ತಿಳಿದಿರುವ - ನೀವು ಕೇಳಿರುವ ಬಾಣಂತಿ ಆರೈಕೆಯ ವಿಷಯಗಳನ್ನು ಈ ಪಟ್ಟಿ ಗೆ ಸೇರಿಸಿ ! 

Comments