ಯಾವ ಗೀತೆಗೋ,ಯಾವ ಮಾತಿಗೋ
ಮರುಳಾಯಿತು ಮನ ಅರಿಯದೆ ಶಾಖೆ
ಕವಲು ದಾರಿಯಲಿ ವಿವೇಕ ಅಳಿದು
ಯಾವುದು ಎಂಬುದ ಇನಿತೂ ಅರಿಯೆ
ದಿನಬೆಳಗಿನ ಈ ಹುಡುಕಾಟದಲಿ
ಒದ್ದಾಟದಲಿ ಒಣಗಿದ ಶಾಖೆ
ದೂರಾಲೋಚನೆ ಹದ್ದು ಕೂತೊಡೆ
ಮುರಿದು ಬಿದ್ದಿತು ತಡೆಯದ ಶಾಖೆ
ಅರಿಯದ ಸತ್ಯದ ಹುಡುಕಾಟದಲಿ
ಅಲೆಯುವ ಅಂತರ್ಪಿಶಾಚಿಯಾದೆ
ಮುಕ್ತಿಗೆ ಹುಡುಕಿದೆ ಮತ್ತದೆ ಶಾಖೆ