ಮನದಿ ತಲ್ಲಣವೆಂದು

ಮನದಿ ತಲ್ಲಣವೆಂದು

ಕವನ

 ಮನದಿ ತಲ್ಲಣವೆಂದು ಕಂಡಲ್ಲಿ ಕಕ್ಕದಿರು
ಕಡುಕೋಪವೆಂದು ಕಿಡಿ ಕಾರುತ್ತ ಸಾಗದಿರು
ಇದು ಒಂದೇ ದಿನ, ಉಳಿದಿಹುದು ಜನುಮ
ಎಲ್ಲರನು ನೋಯಿಸುವುದೇ ನಿನ್ನ ಕರ್ಮ?
ನೋವುಂಟು, ನಲಿವುಂಟು ನವಿರಾದ ಬಾಳಿನಲಿ
ಇದಕೆಲ್ಲಾ ಅಂಜದಿರು ನುಂಗಿ ನುಗ್ಗು ಮುಂದೆ
ಗಾಯಗಳ ತಣಿಸುವ ಸಮಯ ಔಷಧವಾಗಿ
ಕಾಣಿಸುವ ತನಕವೂ ಬೆದರದಿರು, ಮಿಟುಕದಿರು
ಮಣ್ಣಿನಲ್ಲೇ ಹುಡುಕು,ಮತ್ತೆ ಕಾಣುವೆ ನೀನು ಕಳೆದ ಹಿಡಿಯ
ಮನದ ಲೇಖನಿಯ ಆ ಬೆಳ್ಳಿ ಹಿಡಿಯ

Comments