ಡಾ ಎಚ್ ಎಸ್ ವೀಯವರ ಅಭ್ಯಾಸ ೧೪ ಪು ತಿ ನರಶಿಂಹಾಚಾರ್ ಅವರ ಗೋಕುಲ ನಿರ್ಗಮನ

ಡಾ ಎಚ್ ಎಸ್ ವೀಯವರ ಅಭ್ಯಾಸ ೧೪ ಪು ತಿ ನರಶಿಂಹಾಚಾರ್ ಅವರ ಗೋಕುಲ ನಿರ್ಗಮನ

ಡಾ ಎಚ್ ಎಸ್ ವೀಯವರ ಅಭ್ಯಾಸ ೧೪
೨೧.೦೮.೨೦೧೧ ರಂದು ಶ್ರೀಕಾಂತ್ ಉಡುಪರ ಮನೆಯಲ್ಲಿ
ಪು ತಿ ನರಶಿಂಹಾಚಾರ್ ಅವರ ಗೋಕುಲ ನಿರ್ಗಮನ

 

 

ಈ ಸಾರಿಯ ನಮ್ಮ ಅಭ್ಯಾಸ ನಿಜವಾಗಿಯೂ ಹತ್ತಿರದಲ್ಲಿಯೇ ಇದ್ದ ಕೃಷ್ಣಾಷ್ಟಮಿಯು ನಿಜವಾದ ಅರ್ಥದಲ್ಲಿ ನಮಗೆಲ್ಲರಿಗೂ ಅವಿಸ್ಮರಣೀಯವಾಗಿಯೇ ಪರಿಣಮಿಸಿತು.
ಕಾರಣ ಈ ಸಾರಿಯ ಅಭ್ಯಾಸದ ವಿಶಿಷ್ಟ ವಿಷಯವಾಗಿತ್ತು. ಶ್ರೀಯುತ ಶ್ರೀಕಾಂತ ಉಡುಪರ ಮಗಳು ಆವನಿಯ ಶ್ಲೋಕದಿಂದ( http://youtu.be/ZKkEUY-hBjI  ) ಅಭ್ಯಾಸ ಆರಂಭಗೊಂಡು,
ಶ್ರೀಯುತ ರಾಘವೇಂದ್ರ ಬಳ್ಳಾರಿಯವರ (  ಆಡುಬಾ, ಮುದವೂಡು ಬಾ ದಯತೋರು ಬಾ ಒಲವೇ ,  ಕೊಳನೂದು ಗೋವಿಂದ , ಮುಪ್ಪಿಗಾಗ ಲಾನಂದ : http://youtu.be/geG5nW9u5Ywhttp://youtu.be/ZTGi6yj8OTk ) ಹಾಗೂ ವೀಣಾ ಸತೀಶ್ ರವರ  ಸುಮಧುರ ಕೃಷ್ಣ ನ ಬಗೆಗಿನ ಅಪೂರ್ವ  ಗಾಯನಗಳು( http://youtu.be/HOXAY7X58DE  )  ಸರ್ವರ ಮನ ಸೂರೆಗೊಂಡು ಆ ವಾತಾವರಣವನ್ನೇ ಆಹ್ಲಾದಕರವನ್ನಾಗಿ ಮಾಡಿದ್ದುವು..

ಮೋಡ ಕವಿದ ರಾತ್ರಿ. ಕವಿತನ್ನ ಮನೆಯಲ್ಲಿದ್ದಾನೆ ಮರೆಯಲ್ಲಿ ಗೊಲ್ಲ ಹುಡುಗರು ಊದುವ ಕೊಳಲ ನಾದವು ಕೇಳಿಬರುತ್ತದೆ, ಅದೇ ಹಿನ್ನೆಲೆಯಲ್ಲಿಯೇ ಇಡೀ ವಾತಾವರಣವೇ ಬೆಳದಿಂಗಳ ಹೊನಲಲ್ಲಿ ಬೃಂದಾವನವಾಗಿ ಬದಲಾಗಿ ಗೋಪಿಯರು,  ( ಸಂಸಾರ ದೂರ ಬಿನದವೇ ನೇರ, ಇನ್ನು ನಮಗೀ ಗಾನಕೆ- ಬೇಗ ಬಾ ಸಖಿ) ನಂತರ ಗೋಪಾಲಕರು ಹಾಡುತ್ತಾ ನರ್ತಿಸುತ್ತಾ ನಮ್ಮಿದಿರು ಬಂದು ಕಥೆ ಆರಂಭವಾಗುತ್ತದೆ.

ಏನು ಚೋದ್ಯಮಿದಯ್ಯ ತಾಮಸಿಯ ಕಾಳೆದೆಯೋ-
ಳನುರಾಗವುದಿಸಿದೊಲು ತಿಂಗಳಿನ ಬೆಳಕಾಯ್ತು
ಬಯಲೊಳಗೆ ಬನವಾಯ್ತು ನೆಲಲೊಳಗೆ ರೂಪಾಯ್ತು
ಕಾಲ ಹಿಮ್ಮೊಗ ಹರಿದು ಗೋಕುಲವೇ ಕಣ್ಣಿಗಾಯ್ತು!




ಈ ನೃತ್ಯ ನಾಟಕವನ್ನು ಪು ತಿ ನ ಅವರು ೧೯೪೫ ರಲ್ಲಿ ಬರೆದಿದ್ದರು .
ಈ ಅನನ್ಯ ನಾಟಕವನ್ನು ಬರೆಯಲೇ ಬೇಕಾದ ತುಡಿತವನ್ನೂ ಅವರ ಮಾತಿನಿಂದಲೇ ಕೇಳೋಣ ಬನ್ನಿ.



ನಾನು ಕೇಳಿದ ಹಲವಾರು ಸಂಗೀತಗಳ ಸುಖ, ನೋಡಿದ ನೃತ್ಯಾಭಿನಯಗಳ ಸೊಗಸು, ಮನನ ಮಾಡಿದ ಕಾವ್ಯಗಳ ರಸರುಚಿ ಮತ್ತು ಇವುಗಳೆಲ್ಲದರಲ್ಲೂ ಪಟ್ಟ ಒಂದು ತೆರದ ಅತೃಪ್ತಿ, ಹಲವಾರು ಚಂದಸ್ಸುಗಳು ನನ್ನ ಮನಸ್ಸನ್ನು ತೂಗುಯ್ಯಾಲೆಯಾಡಿಸಿದ ಬಗೆ ನನ್ನಹೃದಯಕ್ಕೆ ಅತೀ ಸಮೀಪವಾಗಿ ಸ್ನೇಹದಂತಿರುವ ಒಂದು ತರದ ಅಲೌಕಿಕ ವಿಷಾದ, ಅದರ ಸುತ್ತಿನ ಹಂಬಲಗಳು. ಹೀಗೆ ನಾನು ಜಾಗ್ರತ್ ಸ್ವಪ್ನಾವಸ್ಥೆಗಳಲ್ಲಿ ಪಟ್ಟ ನೂರಾರು ತೀವ್ರಾನುಭೂತಿಗಳು ನನ್ನಲ್ಲಿಯೇ ಮುಗಿಯುವದೆಂತು? ಇವೆಲ್ಲಾ ಪುಷ್ಪ ಪರಾಗಗಳು ದುಂಬಿಗೆ ಕಾದಿರುವಂತೆ ನನ್ನ ಚೇತನದಲ್ಲಿ ಪಕ್ವ ದೆಸೆಯಲ್ಲಿದ್ದಿರಬೇಕು. ಬೃಂದಾವನದಲ್ಲಿ ಹಿಂದೆ ಅಂದು ಗೋಪ ಗೋಪಿಯರ ಬಾಳಿನಲ್ಲಿ ಪ್ರಾದುರ್ಭವಿಸಿದ ಮಹದನುಭವವೊಂದು ಪುನರ್ಭವಕ್ಕೆಕಾಮಿಸುತ್ತಾ ಈಗ ಏಳು ವರ್ಷಗಳ ಹಿಂದೆ ನಾನು ಕೇಳಿದ ಗೊಲ್ಲ ಹುಡುಗನ ಕೊಳಲಿನ ನಾದದ ಮೂಲಕೈಂತು ಸುಸಂಸ್ಕೃತವಾದನನ್ನ ಹೃದಯವನ್ನು ಹೊಕ್ಕು ಕಾಲಕ್ರಮೇಣ ಭಗವದನುಗ್ರಹರೂಪವಾಗಿಯೂ, ಭಗವದ್ಭರೂ ಭಾಗವತ ಪ್ರಿಯರೂ ಆದ ನನ್ನ ತೀರ್ಥರೂಪರ ಆಶೀರ್ವಾದರಊಪವಾಗಿಯೂ ಈ ಕೃತಿ ಜನಿಸಿರ ಬೇಕು.

ಈಗ ನೆನೆದು ಕೊಂಡರೆ ಆ ಕೊಳಲಿನಲ್ಲಿ ಅಷ್ಟು ಇಂಪಿರಲಿಲ್ಲ. ಅದಕ್ಕಿಂತ ಎಷ್ಟೋ ಸುಸಂಸ್ಕೃತವೂ ಕುಶಲವೂ ಆದ ಮುರಳೀ ಗಾನವನ್ನು ಅನೇಕ ಸಾರಿ ಕೇಳಿದ್ದೇನೆ. ಆದರೆ ಅಂದಿನ ಕನಸನ್ನು ಮಿಕ್ಕವು ತರಲಿಲ್ಲ. ಶಿಕ್ಷಿತವಾದ ಜಾತ್ಯಶ್ಯವನ್ನು ಏರಿದರೆ ಆಗುವ ಸುಖ ಒಂದುತರದ್ದು, ಪಳಗದಿರುವ ಕಾಡುಕುದುರೆಯನ್ನೇರಿದರೆ ಅದರ ನಡೆ ವಿಚಿತ್ರವಾಗಿರುತ್ತದೆ, ಅದರ ವೇಗಕ್ಕೆ ಗುರಿಯಿಲ್ಲ., ಅದು ನಿಂತೆಡೆ ನಾವು ಇಳಿಯಬೇಕು. ಹಾಗೆ ಈ ಕಾಡುಗೊಲ್ಲನ ಕೊಳಲಿನ ದನಿ ನನ್ನನ್ನು ಈ ಬೃಂದಾವನದ ಕಾಡಿನಲ್ಲಿಳಿಸಿ ಹೊರಟು ಹೋಯಿತು.. ಅಂದು ಗೋಕುಲಕ್ಕೆ ಅಕ್ರೂರ ಬಂದಿದ್ದ. ಆತ ಬರುವ ವೇಳೆ ರಾಮಕೃಷ್ಣಾದಿಗಳು ರಾಧೆ ಗೋಪಿಯರೂ ಹುಣ್ಣಿಮೆಯಾಟಕ್ಕೆ ಬೃಂದಾವನದಲ್ಲಿ ನೆರೆದಿದ್ದರು. ಅಂದು ಕೃಷ್ಣ ಕೊಳಲೂದುವ ಅಂತಿಮ ರಾತ್ರಿ. ಮರುದಿನವೇ ಆತ ಬಲಭದ್ರನೊಡಗೂಡಿ ಮಥುರೆಗೆ ತೆರಳುವನಿದ್ದಾನೆ. ಆ ರಾತ್ರೆ ಮಿಕ್ಕೆಲ್ಲ ದಿನಕ್ಕಿಂತಲೂ ಇಂಪಾಗಿ ಕೊಳಲಿನ ಸ್ವರಗಳು ಗೋಕುಲದ ಎಲ್ಲರ ಮನವನ್ನೂ ಸೆಳೆಯುತ್ತಾ ಹೃದಯದಲ್ಲಿ ನರ್ತಿಸುತ್ತಾ ಬಗೆಬಗೆಯ ರಸವನ್ನು ಇಳಿಸುತ್ತಿವೆ. ಇಂತಹ ಕೃಷ್ಣ ತನಗೆ ದಕ್ಕುತ್ತಾನೆಯೇ ಎಂದು ರಾಧೆಗೆ ಆತಂಕ. ಕೃಷ್ಣನಿಗೋ ತಾನು ಇನ್ನೇನು ಮುರಳಿಯನ್ನೆಸೆದು, ರಾಧೆಯನ್ನು ತೊರೆದು, ಗೋಕುಲವನ್ನುಳಿದು, ನಂದನದ ತೀರವನ್ನು ಬಿಡುವ ಗಂಗೆಯಂತೆ ಲೋಕಕ್ಕೆ ಹೊರಡುತ್ತೇನೆ ಎಂಬ ಅರಿವೂ ಇಲ್ಲ, ಆದರೆ ಈ ಇರುಳಿನಲ್ಲಿ ಇದೆಲ್ಲ ನಡೆದು ಹೋಗುತ್ತದೆ. ಕೃಷ್ಣಹೊಳಲಿನ ತುಯ್ತಕ್ಕೆ ಸಿಕ್ಕಿದ,"ಲೋಕಕೆ ಬೆಳೆವನ ಗೋಪೀ ಜನ್ಮನ ಒಳಕೊಳ್ಳಲು ಬಹುದೇ" ಎಂದು ಈ ರೂಪಕದಲ್ಲಿ ಹೇಳಿಕೊಳ್ಳುವಂತೆ , ಆ ರಾತ್ರೆ ನಂದ ಕುಮಾರ ವಾಸುದೇವನಾಗುವುದಕ್ಕಾಗಿ ಅಕ್ರೂರ ಪ್ರೇರಣೆಯಿಂದ ಗೋಕುಲವನ್ನು ಬಿಟ್ಟು ಮಧುರೆಗೆ ಹೊರಡಲು ಮನಸ್ಸು ಮಾಡುತ್ತಾನೆ.ಬೃಂದಾವನ್ನುಳುಲಿದ ಮೇಲೆ ಕೃಷ್ಣನ ಕೊಳಲು ನಮಗೆ ತಿರುಗಿ ಕೇಳಿಬರುವುದಿಲ್ಲ. ಆತನ ಪಾಂಚಜನ್ಯ ಧ್ವನಿಯೂ ಚಕ್ರಸ್ವಿಷ್ಕಾರವೂ ನಾಡ ತುಂಬಾ ಮೊಳಗಾಡುತ್ತಾ ಅಲೆಯುತ್ತದೆ. ಆತ ಇನ್ನೂ ಮುಗ್ಧ ಭಾವದಲ್ಲಿರುವಾಗಲೇ ಕೊಳಲು ಅವನ್ ಕೈಯಿಂದ ಜಾರಿ ಹಳ್ಳಿಯ ಹೊನಲು ಬನದಲ್ಲಿ ಬಿದ್ದು ಹೋಯಿತು.- ನನ್ನಂಥ ಮುಗ್ಧರ ಮನಸ್ಸಿನಲ್ಲಿ ಆಗಾಗ ಮೊಳಗಿಡುವುದಕ್ಕೆ. ಆದರೆ ಗೋಕುಲದ ಜನ ಮಾತ್ರ ಆತನ ಅಪ್ರಮೇಯ ಮಹಿಮೆಯನ್ನರಿತವರಂತೆ ಆತನ ಮಧುರ ಮುರುಳೀಗಾನದಲ್ಲಿ ಆತನ ಆತ್ಮಪ್ರಭೆಯ ಪ್ರೇಮ ಪ್ರಚುರವರ್ಣವನ್ನೂ ಕಂಡರು. ಮಿಕ್ಕ ಲೋಕ, ಪಾಂಡವರೂ ಸೇರಿಈ ಮಧುರ ಭಾವವನ್ನು ಇಷ್ಟು ಸ್ಪಷ್ಟವಾಗಿ ಕಂಡಿತೇ ಎಂದು ನನಗೆ ಸಂಶಯ. ಮಧುರೆಗೆ ತೆರಳಿದ ಬಳಿಕಕೃಷ್ಣ ರಾಧೆಯನ್ನು ಮರೆತನೋ ಏನೋ- ಕೃಷ್ಣನನ್ನುಳಿದ ರಾಧೆಯ ಪಾಡು ತಾನೇ ಏನಾಯಿತೋ-ಇದನ್ನರಿತುಕೊಳ್ಳುವುದಕ್ಕೂ ನಮ್ಮ ಮನಸ್ಸು ಕುತೂಹಲಗೊಳ್ಳದು. ರಾಧಾ ಶ್ಯಾಮರ ಪ್ರಣಯವನ್ನು ಮಾತ್ರ ನಾವು ಮರೆತಿಲ್ಲ. ಅವರ ಬಾಳಿನಲ್ಲಿ ಮೂಡಿದ ಆ ಅನುಭವ ಅಪೂರ್ವ ಅಮೋಘ - ಅದುದರಿಂದಲೇ ಅದು ಪದೇ ಪದೇ ನಮ್ಮ ಹೃದಯದಲ್ಲಿ ಅನೇಕ ರೀತಿಯಾಗಿ ಬಾಳುಗೊಳುತ್ತದೆ. ಆ ಮಹದನುಭವಕ್ಕೆ ಇಂಬುಕೊಟ್ಟು ನಾನು ಒಂದು ಬಗೆಯ ಧನ್ಯತಾ ಭಾವವನ್ನು ಪಡೆದೆ. ಹಿಂದೆ ಎಲ್ಲೋ ನಾನು ಗೋಕುಲದಲ್ಲಿ ಗೊಲ್ಲತಿಯಾಗಿ ಹುಟ್ಟಿರಬೇಕು. "ಮಳೆಯು ನಾಡ ತೊಯ್ಯುತಿರೆ" ಈ ಪದ್ಯ ಬರೆದಾಗಲೂ " ನವೋದಯಂ" ಎಂಬುದನ್ನು ಬರೆದಾಗಲೂ ಈ ಸ್ಮೃತಿ  ಜಾಗೃತಿಯಾಯಿತು. " ಗೋಕುಲ ನಿರ್ಗಮನ"ದಲ್ಲಿ  ಇದು ಪೂರ್ಣರೂಪವನ್ನು ಪಡೆದಿದೆ.








೧.    ಸ್ವಾಗತಾರಂಭ:  http://youtu.be/-K_Ifx9jzn0
೨.  ಶರಣೆನುವೆವು ಬೃಂದಾವನ ಚರಚರಣಕೆ ನಾಂ:   http://youtu.be/oq3khU-Tkrk
೩.   ಎದೆಗೆ ಬರುತಿದೆ ಜಗದ ಮುದ  : http://youtu.be/Q2OXu5hcwCQ
೪.  http://youtu.be/ditAfz9S2XA
೫.  ಸನಿಹದೊಳೇ ಕೊಳಲಿಂಪನು ಪಡೆವ  http://youtu.be/8CbPMSxCfHQ

  ವೇಣು ವಿಸರ್ಜನ : ೧. http://youtu.be/GX4lEmZGQ24,    ೨.  http://youtu.be/1RDIj_YP5fU,  ೩ .http://youtu.be/ZCna2ZCQ2GE

Comments