ಪ್ರಳಯ

ಪ್ರಳಯ

ಕವನ

ನಿಧಿಯ ಶೋಧನೆಯ

ಭುವಿಯ ಭಾರ್ಘವನ

ಆರ್ಭಟಕ್ಕೆ,

ಜಗವೆಲ್ಲ

ಮಧು ಪಾತ್ರೆ,

ಸುಖದ ಹೇರಿಳಿತಕ್ಕೆ,

ಭೂಮಿಯ ನರಳಾಟ,

ಆಕ್ರಮಣಕ್ಕೆ

ಆಗಸ ರಾಜನ 

ಮನೆಯ ಮೇಲ್ಛಾವಣಿಗೆ

ತೊತು ಬಿದ್ದು 

ಆತನ ನಿಟ್ಟುಸಿರಿನ 

ಬಿಸಿಗೆ  ಕ್ಷುದ್ರಗೊ೦ಡ ಜೀವರಾಶಿ

ಸಮುದ್ರೆಯ ಮೇಲೀತನ

ಅತ್ಯಾಚಾರಕ್ಕೆ

ಈಗಾಕೆ ಗರ್ಭದರಿಸಲೆದರಿ

ಬ೦ಜೆ!,

ಆಗಸದಲ್ಲಿ ಮತ್ತೆ

ಮೋಡಗಳ 

ಓಡಾಟ,

ಭೂವಿಯ ಒಡಲೊಳಗೆ

ಕೆ೦ಗುಲಾಬಿ

ಹಚ್ಚ ಹಸಿರು

ಮಲ್ಲಿಗೆಯ 

ಪರಿಮಳ, 

ಸಮುದ್ರೆಯ ಗ೦ಭೀರ 

ನಿರ್ಮಲ ವಿಶ್ರಾ೦ತಿ...

ಮತ್ತೆ !

ಯಾವಾಗ?..

ಈತನ ಅಸ್ತಮ

ಹೊಸ ಸೊರ್ಯನುಗಮ