ನವಿಲೇ ನವಿಲೇ ಓ ನವಿಲೇ

ನವಿಲೇ ನವಿಲೇ ಓ ನವಿಲೇ

ಕವನ

ನವಿಲೇ ನವಿಲೇ ಓ ನವಿಲೇ

ಏನು ಅಂದ ಏನು ಚಂದ ನಿನ್ನದು

ಎಲ್ಲಿ ಹೋಗಿದ್ದೆ ಓಕುಳಿ ಆಡಲು..

 

ಹಸಿರು ನೀಲಿ ಬಣ್ಣದ ಓಕುಳಿ ಆಡಿ  

ಮೈಯೆಲ್ಲಾ ರಂಗು ರಂಗಾಗಿ

ಮಾಡಿಕೊಂಡಿರುವೆಯಲ್ಲ..

 

ನಿನ್ನ ಬಣ್ಣವ ಗರಿಗಳಿಗೂ ಹಚ್ಚಿ

ಸಿದ್ಧವಾಗಿ ಮಳೆಗಾಗಿ 

ಕಾದು ಕುಳಿತಿರುವೆಯ...  

 

ಹನಿ ಹನಿ ಮಳೆಹನಿ ಮೈ ಮೇಲೆ

ಬಿದ್ದಂತೆ ಗರಿಗೆದರಿ  ಸಂತೋಶದಿ

ನೃತ್ಯ ಮಾಡುತಿರುವೆಯ..

 

ನಿನ್ನಂದಕೆ ಸಾಟಿ ಯಾರು,

ನಿನ್ನ ವೈಯಾರಕೆ ಸಾಟಿ ಯಾರು

ನಿನಗೆ ನೀನೆ ಸಾಟಿ ಓ ನವಿಲೇ

ಚಿತ್ರ ಕೃಪೆ : ಅಂತರ್ಜಾಲ