ತ್ರಿಗುಣಗಳ ಮಾಯೆ- (ಶ್ರೀ ನರಸಿಂಹ-5)

ತ್ರಿಗುಣಗಳ ಮಾಯೆ- (ಶ್ರೀ ನರಸಿಂಹ-5)

ದೇವನ ಸೃಷ್ಠಿಯಿದು ತ್ರಿಗುಣಗಳಾದೀನ   

ತಾಮಸಿಕ, ರಾಜಸ, ಸಾತ್ವಿಕದ ಮಿಶ್ರಣ

ತಮಕಿಂತ ಉತ್ತಮ ರಾಜಸಿಕವಹುದು

ಇವಕಿಂತ ಮಿಗಿಲು ಸಾತ್ವಿಕತೆ ಎಂಬುದು

 

ತಾಮಸಿಕ ಎಂಬುದದು ರಾಕ್ಷಸಿ ಪ್ರಭಾವ

ರಾಜಸಿಕ ಎಂಬುದು ವ್ಯಾವಹಾರಿಕ ಭಾವ

ಸಾತ್ವಿಕತೆಯದುವೆ ಸಮಾನತೆಯ ಸ್ವಭಾವ

ಜಗಕೆ ಬೇಕಿಹುದಿಂದು ಸಾತ್ವಿಕದ   ಸದ್ಬಾವ

 

ತ್ರಿಗುಣಗಳ ತ್ಯಜಿಸಿ ನೀ  ಜ್ಞಾನಿಯೆಂದೆನಿಸು,  ಜ್ಞಾನಿಯಾಗಲು

 ನೀ ಶ್ರೀ ನರಸಿಂಹನ  ಸೋದರಿ ಮಹಿಷಮರ್ಧಿನಿಯ ಸ್ತುತಿಸು
Rating
No votes yet

Comments