ಚಲೊ ಮಲ್ಲೇಶ್ವರ...೮

ಚಲೊ ಮಲ್ಲೇಶ್ವರ...೮

ರಾಮಮೋಹನವ್ರಿಗೆ ಕನ್ನಡಕ ಕೊಡಿಸಿ ಹೊರಗಡೆ ಕರ್ಕೊಂಡು ಬಂದ್ಮೇಲೆ ಅವ್ರಿಗೆ ಹೊಸ ಪ್ರಪಂಚ ಕಂಡ ಹಾಗೆ. ಗಣೇಶಣ್ಣ ಕನ್ನಡಕದ ಆಸಾಮಿಗೆ ನಾವೆಲ್ಲಾ ಈಗ ಗಂಡಸ್ರು ತರ ಕಾಣುಸ್ತೀವಾ ಅಂದಾಗ, ರಾಮಮೋಹನ್ವರು 'ಈಗ ಸರ್ಯಾಗಿ ಕಾಣ್ಸತ್ತೆ, ಸದ್ಯ ನೀವು ನನಗೆ ಸಿಕ್ಕಿದ್ದು ಒಳ್ಳೇದೆ ಆಯ್ತು ಇಲ್ಲಾನ್ದಿದ್ರೆ ಸಿಗೋ ಹೆಣ್ಮಕ್ಳು ನಂಗೆ ಗೊತ್ತು ಅಂತ ಮಾತಾಡ್ಸೋಕೆ ಹೋಗಿ, ಕೆ ಸಿ ಜನರಲ್ ಹಾಸ್ಪಿಟಲ್ನಲ್ಲಿ ಟ್ರೀಟ್ ತಗೊಂಡು ಆಮೇಲೆ ಪಕ್ಕದಲ್ಲೇ ಇರೋ ಮಾವನ ಮನೆಗೆ ಕಳ್ಸ್ತಿದ್ರು, ಆಮೇಲೆ ಮಂಜಣ್ಣನೆ ಬಂದು ನನ್ನನ್ನ ಬಿಡ್ಸ್ಬೇಕಾಗ್ತಿತ್ತು. ಜಯಂತ್ ಆಗ 'ಇರ್ಲಿ ಬಿಡಿ ಕಷ್ಟಕ್ಕೆ ಆಗದೆ ಇನ್ಯಾವಾಗ ಆಗೋಕಾಗತ್ತೆ' ಅಂದ್ರು. ನಾನು 'ಸಾಗರ್ ಹೋಟೆಲ್ಗೆ ಹೋಗಿ ಒಂದು ಕಾಫಿ ಕುಡಿಯೋಣ ನಡೆಯಿರಿ' ಅಂದಾಗ ಎಲ್ರೂ ಜೈ ಅಂದ್ರು. ಎಲ್ರಿಗೆ ೨ ಬೈ ೪ ಕಾಫಿ ಹೇಳಿದ್ವಿ. ಕಾಫಿ ಕುಡಿದು ಹೊರಗೆ ಬಂದಾಗ ಜಯಂತ್ 'ಗಣೇಶಣ್ಣ, ಅಮ್ಮಣ್ಣಿ ಕಾಲೇಜ್ ಹತ್ರ ದೇವಸ್ಥಾನ ಇದೆಯಲ್ಲ ಅಲ್ಲಿ ಹೋಗಿಬರೋಣ' ಅಂದಾಗ ಗಣೇಶಣ್ಣ 'ನಂಗೆ ಇಲ್ಲೇ ೮ನೇ ಕ್ರಾಸಲ್ಲಿ ಸ್ವಲ್ಪ ಕೆಲಸ ಇದೆ ರಾಮಮೋಹನ್ ಮತ್ತೆ ಚಿಕ್ಕು ಜೊತೆ ಹೋಗಿ!' ಅಂದ್ರು. ಆಗ ನಾನು 'ಇಲ್ಲ, ನಾನೂ ಗಣೇಶಣ್ಣನ ಜೊತೆ ಹೋಗ್ತೀನಿ!!! ನಂಗೂ ಸ್ವಲ್ಪ ಏನೋ ಕೊಳ್ಳೋದಿದೆ, ನಾವು ಮುಗಿಸ್ಕೊಂಡು ಸ್ಯಾಂಕಿ ಟ್ಯಾಂಕ್ ಹತ್ರ ಬಂದಿರ್ತೀವಿ, ನೀವು ಅಲ್ಲಿಗೆ ಬನ್ನಿ' ಅಂದಾಗ ಆಯ್ತು ಅಂತ ಅವ್ರಿಬ್ರೂ ಹೊರಟ್ರು. ನಾವು ೮ನೇ ಕ್ರಾಸಲ್ಲಿ ಕೆಲಸ ಮುಗಿಸ್ಕೊಂಡು ಹಾಗೆ ಹೋಗ್ತಿರ್ವಾಗ ಎದರುಗಡೆಯಿಂದ ಮಂಜಣ್ಣ ಗೋಪಾಲವ್ರ ಜೊತೆ ಬರ್ತಿದ್ರು. ನಾನು 'ಏನು ಮಂಜಣ್ಣ ಈಕಡೆ?' 'ಇಲ್ಲೇ ಸೇವಾಸದನದಲ್ಲಿ ಒಂದು ಭರತನಾಟ್ಯ ಇತ್ತು ಅಲ್ಲಿಗೆ ಹೋಗೋಣ ಅಂತ ಬಂದ್ವಿ, ನೀವೆಲ್ಲಿಗೆ?' ನಾವು ಎಲ್ಲ ವಿಷ್ಯ ಹೇಳಿದ್ಮೇಲೆ ಗೋಪಾಲವ್ರು 'ನಡೀರಿ ನಾವೂ ನಿಮ್ಜೊತೆ ಬರ್ತೀವಿ, ದೇವಸ್ಥಾನದ ಹತ್ರನೇ ಹೋಗೋಣ' ಅಂದಾಗ ಎಲ್ರೂ ಆ ಕಡೆ ಹೆಜ್ಜೆ ಹಾಕ್ತಿದ್ವಿ. ದೇವಸ್ಥಾನದ ಎದ್ರುಗಡೆ ರಾಮಮೋಹನವ್ರು ಕೂತಿದ್ದಾರೆ. ಗಣೇಶಣ್ಣ 'ಅಲ್ರೀ ದೇವ್ರು ದರ್ಶನ ಮಾಡೋದರ ಬದ್ಲು ಅಮ್ಮಣ್ಣಿ ಕಾಲೇಜ್ ಹುಡ್ಗೀರ್ನಾ ನೋಡ್ತಾ ಕೂತಿದ್ದೀರಲ್ರೀ?, ಆ ವಯ್ಯ ಎಲ್ಲಿ?' ಅಯ್ಯೋ ಹುಡ್ಗೀನು ಇಲ್ಲ ಏನೂ ಇಲ್ಲ 'ಜಯಂತ್ ಜೊತೆ ಹೋಗಿ ನಾನು ದೇವರಿಗೆ ೩ ರೌಂಡ್ ಹೊಡೆದೆ ಆದ್ರೆ ಆ ಆಸಾಮಿ ಇನ್ನೂ ರೌಂಡ್ ಹೊಡೀತಾನೆ ಇದ್ರು, ನಾನು ಕಾದು ಕಾದು ಸಾಕಾಗಿ, ಏನೋ ಹರಕೆ ಹೊತ್ಕೊಂಡಿರ್ಬೇಕು ಅಲ್ಲಿವರೆಗೆ ಕಾಯೋಣ ಅಂತ ಇಲ್ಲಿ ಬಂದು ಕೂತೆ' ಅಂದಾಗ ಎಲ್ರೂ ಅಲ್ಲೇ ಕೂತ್ವಿ. ಕಾಲು ಗಂಟೆ ಆದ್ಮೇಲೆ ಜಯಂತ್ ಹೊರಗೆ ಬಂದ್ರು. ಗೋಪಾಲವ್ರು 'ಏನ್ರೀ ಜಯಂತ್ ನೀವು ದೇವ್ರನ್ನ ಹಿಂಗೆ ಸುತ್ತಿದಕ್ಕೆ ಮಲ್ಲೇಶ್ವರಂನಲ್ಲಿರೋ ಎಲ್ಲ ದೇವರಿಗೂ ತಲೆ ಸುತ್ತು ಬಂದಿದೆಯಂತೆ?!'. ಜಯಂತ್ 'ಚಿಕ್ಕುಗಂತೂ ಮದ್ವೆಯಾಗಿಲ್ಲ ಗೊತ್ತಾಗಲ್ಲ, ಗೋಪಾಲವ್ರೆ ನಿಮ್ಗೂ ನಮ್ಮ ಕಷ್ಟ ಗೊತ್ತಾಗಲ್ವ?' ಅಂದಾಗ ಮಂಜಣ್ಣ 'ಹೌದು ಜಯಂತ್, ನಿಮ್ಮಾತು ಸರಿ, ನೀವೀಗ ಮದ್ವೇಯಾಗಿದೀರಾ ಅದ್ಕೆ ದೇವ್ರು ಸುತ್ತುತಿದೀರಾ ಆಮೇಲೆ ನೀವೇ ಸುತ್ತು ಹೊಡೆಯೋ ವಸ್ತು ಸಿಗತ್ತೆ, ಎಲ್ಲ ಅನುಭವ, ಇರ್ಲಿ ಬಿಡಿ ಎಲ್ಲ ಹೊರಡೋಣ' ಅಂದು ಅಲ್ಲಿಂದ ಎಲ್ರೂ ಹೆಜ್ಜೆ ಹಾಕಿದ್ವಿ. (ವಿ ಸೂ: ಇದರ ಹಿಂದಿನ ಕಂತುಗಳು ಸಂಪದದಲ್ಲಿವೆ ಓದಿ ಎಂಜಾಯ್ ಮಾಡಿ )
Rating
No votes yet

Comments