ಗೃಹಿಣಿ

ಗೃಹಿಣಿ

 

        ಸಂಬಳ ಕೇಳದ, ನಿವೃತ್ತಿ ಇಲ್ಲದ, ವಾರದ ರಜೆ ಇಲ್ಲದ, ದಿನದ ಇಪ್ಪತ್ತನಾಲ್ಕು ಗಂಟೆಯೂ ದುಡಿಮೆಯ ಸಮಯವೆಂದು ತಿಳಿದಿರುವ, ಬೋನಸ್ ಬೇಡದ, ಅತಿ ಜವಾಬ್ಡಾರಿಯ ಕಾರ್ಯವನ್ನು ನಿರ್ವಹಿಸುವ, ಅತಿ ವಿಶಾಲವಾದ ಕಾರ್ಯವ್ಯಾಪ್ತಿ ಹೊಂದಿದ, ಯಾವುದೇ ಕಾರ್ಮಿಕ ಸಂಘಟನೆಗೂ ಸೇರಿರದ, ಪ್ರತಿಯೊಂದು ಮನೆಗೂ ಅತಿ ಆವಶ್ಯಕವಾಗಿ ಬೇಕಾದ ಕೆಲಸದವಳಾಗಿರುವವಳೇ ಗೃಹಿಣಿ.

      "ಗೃಹಿಣಿ ಗೃಹಮುಚ್ಯತೆ" ಎಂಬ ಸಂಸ್ಕೃತ ನಾಣ್ಣುಡಿಯಂತೆ ಗೃಹಕ್ಕೆ ಗೃಹಿಣಿಯಿದ್ದರೆ ಅದು ಉತ್ತಮ ಗೃಹವೆನಿಸುತ್ತದೆ. ಗೃಹಿಣಿಯ ಕಾರ್ಯಗಳೇನು? ಅವಳ ದುಡಿಮೆಯ ಬೆಲೆ ಎಷ್ಟು? ದುಡಿಮೆಯ ಸಮಯವೆಷ್ಟ್ಟು? ಎಂದು ಯಾರಿಂದಲೂ ತಿಳಿಯಲು ಸಾಧ್ಯವಿಲ್ಲ ಇಂಥಹ ಉದ್ಯೋಗ ಮಾಡುವವಳೇ ಗೃಹಿಣಿ. ಇಂಥಹ ಉದ್ಯೋಗ ಮಾಡುವ ಗೃಹಿಣಿಯನ್ನು ಅಸಡ್ಡೆಯಿಂದ ಕಾಣುವುದಾಗಲಿ ಮತ್ತು ಅವಳ ಕೆಲಸವನ್ನು ಹೀಗೆಳೆಯುವುದಾಗಲಿ ಸರಿಯೆ?

       ಇಂದಿನ ಕೆಲವು ಮಹಿಳೆಯರು ಮನೆಯ ಕೆಲಸದ ಜೊತೆಗೆ ಹೊರಗಿನ ಉದ್ಯೋಗವನ್ನೂ ಹೊಂದಿರುತ್ತಾರೆ. ಅವರ ಹೊರಗಿನ ಉದ್ಯೋಗಕ್ಕೆ ನಿಗದಿತ ಸಂಬಳ, ರಜೆ ಇತ್ತ್ಯಾದಿಗಳಿರುತ್ತವೆ. ಆದ್ದರಿಂದ ಮನೆಯ ಇತರ ಸದಸ್ಯರು ಅವಳಿಗೆ ಮನೆಕೆಲಸದಲ್ಲಿ ಸಹಾಯ ಮಾಡುತ್ತಾರೆ. ಆದರೆ ಮನೆಯಲ್ಲಿ ಮಾತ್ರ ಕೆಲಸ ಮಾಡುವ ಗೃಹಿಣಿಗೆ ಮನೆಗೆಲಸದಲ್ಲಿ ಯಾರೂ ಸಹಾಯ ಹಸ್ತ ನೀಡುವುದಿಲ್ಲ ಮತ್ತು ಅವಳಿಗೆ ಹಾಯಗಿ ಮನೆಯಲ್ಲಿ ಇರುವವಳು ಅಂತ ಮೂದಲಿಕೆಯ ಮಾತೂ ಬರುತ್ತದೆ. ಗೃಹಿಣಿಯ ದುಡಿಮೆಗೆ ಊಟ, ತಿಂಡಿ, ಬಟ್ಟೆ, ಚಿನ್ನ ಇತರೆ ಮನೋರಂಜನೆ ಸಿಗುವುದಿಲ್ಲವೇ ಎಂದು ಹೇಳುತ್ತಾರೆ ಆದರೆ ಇವೆಲ್ಲವೂ ಮನೆಯ ಇತರ ಸದಸ್ಯರಿಗೂ ಸಿಗುವುದರಿಂದ ಇವಳಿಗಾಗಿ ಸಿಗುವ ವಿಶೇಷ ಪ್ರತಿಫಲವಲ್ಲ.

        ಈ ರೀತಿಯ ತಾರತಮ್ಯದಿಂದಲೇ ಇಂದಿನ ಹುಡುಗಿಯರು ನಾಲ್ಕು ಅಕ್ಷರ ಕಲಿತರೂ ಸಾಕು  ಸಣ್ಣ ಪುಟ್ಟ ಕೆಲಸವಾದರೂ ಸರಿ ಹೊರಗೆ ದುಡಿಯಲು ಇಚ್ಹಿಸುತ್ತಾರೆ. ಮನೆ ಕೆಲಸ ಹೇಗಾದರೂ ನದೆಯುತ್ತದೆ ತಮ್ಮ ಆರ್ಥಿಕ ಸ್ವಾತಂತ್ರ್ಯ, ಗ್ಗೌರವ, ಪ್ರತಿಷ್ಟೆ ಹೊರಗೆ ದುಡಿಯುವುದರಿಂದ ಸಿಗುತ್ತದೆ ಎಂದು ಭಾವಿಸುತಿದ್ದಾರೆ.ಅಲ್ಲದೆ ತಮ್ಮ ಸಂಬಳದಿಂದ ಸಂಸಾರ ಉತ್ತಮ ರೀತಿಯಲ್ಲಿ ನಡೆಸಲು ಸಹಾಯವಾಗುತ್ತದೆ ಎಂದೂ ಹೇಳುತ್ತಾರೆ. ಮತ್ತು ತಾವು ಹೊರಗೆ ದುಡಿಯುವುದರಿಂದ ತಮ್ಮ ವಿದ್ಯೆಗೆ ಬೆಲೆ ಬರುತ್ತದೆ ಮತ್ತು ಕಲಿತ ವಿದ್ಯೆ ವ್ಯರ್ಥವಾಗುವುದಿಲ್ಲ ಎನ್ನುತ್ತಾರೆ.

         ಶಿಕ್ಷಣ ಪಡೆಯುವ ಪ್ರಥಮ ಹಂತದಲ್ಲೇ " ಹಣ ಹಣ ಹಣ ಜೇಬು ತುಂಬ ಹಣ ....." ಎಂದು ಕಲಿಯುವ ನಮಗೆ ಶಿಕ್ಷಣ ಪಡೆಯುವುದು ಹಣ ಸಂಪಾದನೆಗೆ, ಪ್ರತಿಭಾ ಪ್ರದರ್ಶನಕ್ಕೆ ಎಂದು ತಿಳಿದಿದ್ದೇವೆ. ಆದರೆ ನಿಜವಾಗಿಯು ಶಿಕ್ಷಣ ಪಡೆಯುವುದು ನಮ್ಮ ತನ ಬೆಳೆಸಿಕೊಳ್ಳುವುದಕ್ಕೆ , ನಮ್ಮ ಆತ್ಮೋದ್ಧಾರಕ್ಕೆ, ಜ್ನಾನದಾಹ ತಣಿಸಿಕೊಳ್ಳುವುದಕ್ಕೆ ಎಂಬುದನ್ನು ಮರೆತಿದ್ದೇವೆ.

         ಸಮಾಜ, ಮನೆಯ ಇತರ ಸದಸ್ಯರು ಗೃಹಿಣಿಯ ಕರ್ತವ್ಯಕ್ಕೆ ಮಾನ್ಯತೆ, ಗೌರವ ಕೊಡಬೇಕು. ಶಿಕ್ಷಣದ ಸರಿಯಾದ ಅರ್ಥ ಅರಿಯಬೇಕು. ಸರಳ ಜೀವನಕ್ಕೆ ಆದ್ಯತೆ  ನೀಡಿ ಆಡಂಬರದ ಜೀವನವನ್ನು ಉದಾಸೀನದಿಂದ ನೋಡುವಂತಹ  ದೃಷ್ಟಿ ಬೆಳೆಸಿಕೊಳ್ಳಬೇಕು. ಆಗ ಪ್ರತೀ ಕ್ವುಟುಂಬವೂ ಸುಖೀ ಕುಟುಂಬವಾಗಬಹುದು. ನಮ್ಮ ಸಮಾಜದ ವ್ಯೆಶಿಷ್ಟ್ಯ ವಾಗಿರುವ "ಗೃಹಿಣಿ" ಎಂಬ ಪದವಿ ಶಾಶ್ವತವಾಗಿದ್ದು, ಅದರ ಹಿರಿಮೆ ಗರಿಮೆ ಹೆಚ್ಹುವುದು. ಇದು ಇಂದಿಗೂ ಅವಶ್ಯವಾಗಿದ್ದು ಅದು ಪ್ರಬುದ್ಧ ಮಹಿಳೆಯ ಕ್ಯೆಯಲ್ಲಿದೆ. 

Comments