"ಕದಳೀ ವಿವಾಹ"
ಗಣೇಶ ಹಬ್ಬದ ಪ್ರಯುಕ್ತ ಬಾಳೆಕಂದು ತರಲು ಗಾಂಧೀ ಬಜಾರ್ ಗೆ ನಾನು ನನ್ನ ಮಡದಿ ಹೋಗಿ ಅಂಗಡಿ ಬೀದಿಯಲ್ಲಿ ನಡೆಯುತ್ತಿದ್ದೆವು. ಇದ್ದಕ್ಕಿದ್ದಂತೆ ನನ್ನ ಮಡದಿ ಒಂದು ಪ್ರಶ್ನೆ ಕೇಳಿದಳು. ನೀವು ಬಾಳೆ ಕಂಬವನ್ನು ಮದುವೆ ಆಗಿದ್ದೀರಾ ಎಂದು. ನನಗೆ ಅಲ್ಲಿನ ಟ್ರಾಫಿಕ್ ನಲ್ಲಿ ಸರಿಯಾಗಿ ಕೇಳಿಸಲಿಲ್ಲ. ಮತ್ತೊಮ್ಮೆ ಏನೆಂದು ಕೇಳಿದಾಗ ಅದೇ ಪ್ರಶ್ನೆ ಕೇಳಿದಳು. ನಾನು ಅದೇನು ಈಗ ಕೆಳುತ್ತಿದ್ದೀಯ ಎಂದೇ. ಅವಳು ಏನಿಲ್ಲ ಬಾಳೆ ಕಂಬ ನೋಡಿದ ತಕ್ಷಣ ಕೇಳಬೇಕು ಎನಿಸಿತು ಕೇಳಿದೆ ಅಷ್ಟೇ ಅಂದಳು. ನಾನು ಹೌದು ಮದುವೆಯೂ ಆಯಿತು ಅದನ್ನು ಕತ್ತರಿಸಿಯೂ ಆಯಿತು ಎಂದೆ. ಮತ್ತೊಂದು ಪ್ರಶ್ನೆ ಬಂತು. ಏತಕ್ಕೆ ಬಾಳೆ ಕಂಬವನ್ನು ಮದುವೆ ಆಗುವುದು? ಮತ್ತೆ ಅದಕ್ಕೆ ತಾಳಿ ಕೂಡ ಕಟ್ಟಿದಿರ?. ನಾನು ಕೇಳಿದೆ ಏತಕ್ಕೆ ಬಾಳೆಕಂಬವನ್ನು ಮದುವೆ ಆಗುತ್ತಾರೆ ಎಂದು ಗೊತ್ತಿಲ್ಲದೇ ನಿನಗೆ ಹೇಗೆ ಗೊತ್ತು. ಅದಕ್ಕವಳು ನಾನು ಎಲ್ಲೋ ಒಂದು ಕಡೆ ನೋಡಿದ್ದೇ ಅದಕ್ಕೆ ಕೇಳಿದೆ ಎಂದಳು. ಅದಕ್ಕೆ ಅವಳಿಗೆ ವಿವರವಾಗಿ ತಿಳಿಸಿದೆ.ಮದುವೆಗೆ ಮುಂಚೆ ಜಾತಕ ತೋರಿಸಲು ಕೊಟ್ಟಾಗ ನನ್ನ ಜಾತಕದಲ್ಲಿ ಎರಡು ಮದುವೆ ಯೋಗ ಇರುವುದಾಗಿ ತಿಳಿಸಿದರು. ಇದಕ್ಕೆ ಪರಿಹಾರವೇನೆಂದು ಕೇಳಿದಾಗ "ಕದಳೀ ವಿವಾಹ" ಮಾಡಿಸಿ ಸರಿಹೋಗುತ್ತದೆ ಎಂದರು. ಕದಳೀ ವಿವಾಹವೇ ಹಾಗೆಂದರೇನು ಎಂದು ಕೇಳಿದಾಗ ನೋಡಿ ಈ ರೀತಿ ಎರಡು ಮದುವೆ ಯೋಗ ಇರುವವರು ಈ ಕದಳೀ ವಿವಾಹವನ್ನು ಮಾಡಿಸುತ್ತಾರೆ. ಅದು ಹೇಗೆಂದರೆ ಮೊದಲು ಒಂದು ಬಾಳೆ ಕಂಬದ ಜೊತೆ ಮದುವೆಯ ಶಾಸ್ತ್ರ ಮಾಡಿ ಅದಕ್ಕೆ ತಾಳಿ ಕಟ್ಟಿಸಿ ನಂತರ ಅದನ್ನು ಕತ್ತರಿಸಿ ಬಿಡುವುದು. ಅಲ್ಲಿಗೆ ಮೊದಲನೇ ಹೆಂಡತಿ ಸತ್ತು ಹೋದಂತೆ. ನಂತರ ನೀವು ಅಸಲೀ ಮದುವೆ ಆಗಬಹುದು ಎಂದರು. ಮೊದಲಿಗೆ ಇದು ಹಾಸ್ಯಮಯವಾಗಿ ಕಂಡರೂ ಹಿಂದೊಮ್ಮೆ ನಾವು ಕುಕ್ಕೆಗೆ ಹೋಗಿದ್ದಾಗ ಅಲ್ಲಿ ಮಠದಲ್ಲಿ ಒಂದು ಕುಟುಂಬದವರು ಈ ಕದಳೀ ವಿವಾಹವನ್ನು ಮಾಡಿಸುತ್ತಿದ್ದನ್ನು ನೋಡಿದ್ದೇ. ಆದರೆ ಅದರ ಹಿಂದಿನ ಉದ್ದೇಶ ತಿಳಿದಿರಲಿಲ್ಲ. ಈಗ ಅದರ ಉದ್ದೇಶ ಗೊತ್ತಾಗಿ ಎಲ್ಲಿ ಮಾಡಿಸಬೇಕು ಈ ಕದಳೀ ವಿವಾಹವನ್ನು ಎಂದು ಕೇಳಿದಾಗ ಎಲ್ಲಿ ಬೇಕಾದರೂ ಮಾಡಿಸಬಹುದು ಅದು ನಿಮ್ಮ ಇಷ್ಟ ಎಂದು ಹೇಳಿದರು. ನಂತರ ವಿದ್ಯಾಪೀಠ ಸರ್ಕಲ್ ನಲ್ಲಿರುವ ವಿದ್ಯಾಪೀಠದಲ್ಲಿ ಒಂದು ದಿನ ನಿಗದಿ ಮಾಡಿ "ಕದಳೀ ವಿವಾಹ" ಶಾಸ್ತ್ರ ಮಾಡಿ ಬಾಳೆ ಕಂಬದ ಜೊತೆ ಮದುವೆ ಮಾಡಿ ಅದಕ್ಕೆ ತಾಳಿ ಕಟ್ಟಿ ನಂತರ ಅದನ್ನು ಕತ್ತರಿಸಿ ಬಿಟ್ಟೆ ಎಂದು ಹೇಳಿದೆ.ನನ್ನ ಮಡದಿ ಬಿಟ್ಟ ಬಾಯಿ ಬಿಟ್ಟಂಗೆ ನಾನು ಹೇಳುವುದನ್ನು ಕೇಳುತ್ತ ನಿಂತಿದ್ದಳು. ಆಮೇಲೆ ಏನಾಯಿತು ಎಂದಳು. ಆಮೇಲೆ ಏನಿಲ್ಲ ಅಷ್ಟೇ ನಡಿ ಬಾಳೆ ಕಂಬ ತೆಗೆದುಕೊಂಡು ಹೋಗೋಣ ಎಂದಿದ್ದಕ್ಕೆ ಮತ್ತೆ ನನ್ನ ಸವತಿಯನ್ನು ತೆಗೆದುಕೊಳ್ಳುತ್ತಿದ್ದೀರ ಎನ್ನುವುದೇ....
Comments
ಉ: "ಕದಳೀ ವಿವಾಹ"
In reply to ಉ: "ಕದಳೀ ವಿವಾಹ" by manju787
ಉ: "ಕದಳೀ ವಿವಾಹ"
In reply to ಉ: "ಕದಳೀ ವಿವಾಹ" by manju787
ಉ: "ಕದಳೀ ವಿವಾಹ"
ಉ: "ಕದಳೀ ವಿವಾಹ"
In reply to ಉ: "ಕದಳೀ ವಿವಾಹ" by Chikku123
ಉ: "ಕದಳೀ ವಿವಾಹ"
In reply to ಉ: "ಕದಳೀ ವಿವಾಹ" by manju787
ಉ: "ಕದಳೀ ವಿವಾಹ"
In reply to ಉ: "ಕದಳೀ ವಿವಾಹ" by Jayanth Ramachar
ಉ: "ಕದಳೀ ವಿವಾಹ"
In reply to ಉ: "ಕದಳೀ ವಿವಾಹ" by manju787
ಉ: "ಕದಳೀ ವಿವಾಹ"
In reply to ಉ: "ಕದಳೀ ವಿವಾಹ" by ಗಣೇಶ
ಉ: "ಕದಳೀ ವಿವಾಹ"
In reply to ಉ: "ಕದಳೀ ವಿವಾಹ" by Chikku123
ಉ: "ಕದಳೀ ವಿವಾಹ"
ಉ: "ಕದಳೀ ವಿವಾಹ"
In reply to ಉ: "ಕದಳೀ ವಿವಾಹ" by santhosh_87
ಉ: "ಕದಳೀ ವಿವಾಹ"
ಉ: "ಕದಳೀ ವಿವಾಹ"
In reply to ಉ: "ಕದಳೀ ವಿವಾಹ" by savithru
ಉ: "ಕದಳೀ ವಿವಾಹ"
In reply to ಉ: "ಕದಳೀ ವಿವಾಹ" by Jayanth Ramachar
ಉ: "ಕದಳೀ ವಿವಾಹ"
ಉ: "ಕದಳೀ ವಿವಾಹ"
In reply to ಉ: "ಕದಳೀ ವಿವಾಹ" by partha1059
ಉ: "ಕದಳೀ ವಿವಾಹ"
In reply to ಉ: "ಕದಳೀ ವಿವಾಹ" by Jayanth Ramachar
ಉ: "ಕದಳೀ ವಿವಾಹ"
In reply to ಉ: "ಕದಳೀ ವಿವಾಹ" by partha1059
ಉ: "ಕದಳೀ ವಿವಾಹ"
ಉ: "ಕದಳೀ ವಿವಾಹ"