ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಕನ್ನಡಿಯ ಸೂರ್ಯ 2

ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಕನ್ನಡಿಯ ಸೂರ್ಯ 2

 

 

ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಕನ್ನಡಿಯ ಸೂರ್ಯ-  2

(  ಮೊದಲ ಬಾಗದಿಂದ ಮುಂದುವರಿದುದು )

ಕನ್ನಡಿಯ ಸೂರ್ಯ    ಎಚೆಸ್ವೀಯವರ ಇತ್ತೀಚೆಗಿನ ಕವನ ಸಂಕಲನ
 

          

 

"ಕವಿಯ ಅಳಲು" ಕವಿತೆಯಲ್ಲಿ  ಕವಿ ಸಮಕಾಲೀನರ ಬರ ಮತ್ತು ತನ್ನ ಏಕಾಂತತೆಯನೇ ಕುರಿತಾಗಿ ಹೇಳಿಕೊಳ್ಳುತ್ತಿದ್ದಂತಿದೆ .
ಎತ್ತ ಹೋದರೂ ಕಾಡುವ ಹಳೆಯ ನೆನಪುಗಳ ಸುತ್ತಗಟ್ಟುವಿಕೆ, ಅವುಗಳನ್ನು ಹೇಗೆ ಹಿಡಿತದಲ್ಲಿ ತರಬಹುದೆಂಬ ಪ್ರಯತ್ನದ ಹಸಿವು ಮಹಾಭಾರತದ ಹಿನ್ನೆಲೆಯ ಕವನ  "ಕಲ್ಲ ದೋಣಿಯ ನೀರು".
ಬೇಕಾದಷ್ಟೇ ಒಳಕ್ಕೆ ಬಿಟ್ಟು ಬೇಡವಾದದ್ದ ಬಾಗಿಲ ಬಳಿಯೇ ತಡೆವ ತಡೆಗೀಲ
ವ್ಯವಸ್ಥೆ ದಕ್ಕುವ ತನಕ ನೀರು ಬಗ್ಗಡ, ಗಾಅಳಿ ಕಟ್ಟುಗ್ರ ಧುರ್ಗಂಧ ಧೂಮ್ರ ಲಿಪ್ತ
ಬೆಂಕಿಗುವರಿಗೆ ಮೈಸುತ್ತ ಕಬ್ಬೊಗೆ ಚಿಂದಿ ಆಕಾಶದೋಂಕಾರವನ್ನ ಧಸಭಸ ಹೊಸಕಿ
ಮಳೆ ಮುಗಿಲ ಸೀಳೀ ಹಾಯುವ ರಾಕೆಟ್ಟ ರೌದ್ರಾವೇಶ, ಬಗಿ ಬಗಿದು ಗರ್ಭಸ್ಥ
ಪಿಂಡವನ್ನೆತ್ತಿ ಹೊರಕ್ಕೆಳೆವ ರಕ್ಕಸ ವೃತ್ತಿ - ತಾನೇ ಹೆತ್ತ ಮಕ್ಕಳಿಗೆ. ತಂಬೂರಿ ಶೃತಿ ಮೇಲೆ
ನಿರ್ಲಜ್ಜ ಡಾಕಿಣಿ ಕುಣಿತ-ತೈಲಧಾರೆಯ ನಿದ್ದೆ ಕದಲಿ ಮಡುಗುವ ಹಾಗೆ ರಂಗನಾಥ.

"ಸಂಡೂರಿನಲ್ಲಿ" ಕವಿತೆ ಮನುಷ್ಯ ಪ್ರಕೃತಿಯನ್ನು ವಿಕೃತಿ ಮಾಡುವ ಅದರ ಭೀಕರ ಪರಿಣಾಮಗಳನ್ನು ನಮ್ಮೆದುರಲ್ಲಿ ಬಿಚ್ಚಿಡುತ್ತದೆ ಹಂತಹಂತವಾಗಿ, ನಮ್ಮ ಅಸಹಾಯಕತೆಯೊಂದಿಗೆ
ಪರ್ವತಾವಳಿಮೇಲೆ ನಡೆದು ನಿರ್ದಯ ದಾಳಿ , ಕೊರೆಯಲು ತೊಡಗಲು
ತೊಡೆಯ ವಜ್ರ ಗುಂಗಿ ಹಸ್ತ, ಮೈಜಲಿಸಿತತ್ತರ ನಡುಕ, ಎಡೆಬಿಡದೆ
ನಡೆದೇ ನಡೆಯುವುದು ರಕ್ತಾಭಿಷೇಕ... ಕಾಯಬೇಕೇ ತಟಸ್ಥ
ದಕ್ಷಧ್ವಂಸಕ ರುದ್ರ ಬರುವ ತನಕ?

ಸರಯೂ:

.............ಹರಿದಾಗ ಮಾತ್ರ
ಗುರಿ ಗೂಟ ಬಡಕೊಂಡು ನಿಂತೇವೋ ನಿಂತಲ್ಲೇ
ಆದೇವು ಸ್ಥಾವರ. ಪರಿಣಾಮ ಕಲ್ಲಿಗೊಂದೊಂದು ಗುಡಿ.


ನೀರ ದೇವರು ಮಾತ್ರ ಕರಗುವನು
ಹರಿಯುವನು ತಪ್ಪಲುದ್ದಕ್ಕೂನು ನೀರ ಜಡೆ ಬಿಚ್ಚಿ
ಶ್ರೀರಾಮ ನಿಂತಾನೇ ಕಲ್ಲಲ್ಲಿ? ಹಾಯುವನು ಇರುಳಲ್ಲೂ
ಸರಬರ ಹರಿವ ತೊರೆಯಾಗಿ, ತೊರೆದು ಗರ್ಭಾಂಕವನು
ಸೇರಿ ಸರಯೂ ನದಿಯ ಹಾಯುತ್ತಿದ್ದಾನಾತ ಹಾಯಿ ಬಿಚ್ಚಿ-

ಮೌನಸ್ಥಲ:
ಎಚ್ಚೆಸ್ವೀಯವರೆನ್ನುತ್ತಾರೆ: ಸಾಹಿತ್ಯದ  ಹಿಮಾಲಯದಲ್ಲಿ ಹಾದಿಗಳಿಲ್ಲ , ಸಾಹಿತ್ಯವೆನ್ನುವುದು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಗಾಡಿಬಿಡುವುದಲ್ಲ, ಬದಲು ತಮ್ಮ ತಮ್ಮ ದಾರಿಯನ್ನು ನಾವೇ ಕಡಿದುಕೊಳ್ಳುವುದು.ದಾರಿಗಳು ಕಿಕ್ಕಿರಿದಿರುವ ವಸತಿ ಪ್ರದೇಶಗಳಲ್ಲಿ ಮಹಾಕಥನವನ್ನು ಹುಟ್ಟಿಸ ಬೇಕೆಂದರೆ ದಾರಿ ಮರೆಸುವ ಇರುಳಿನ ಹರಕೆಯಾದರೂ ನಮಗೆ ಅಗತ್ಯವೆನ್ನಿಸೀತು.ಅದಕ್ಕೊಂದು ನಮ್ಮ ಮನದ ನಡುವೆಯೇ ಧ್ಯಾನಕ್ಕೊಂದು ಬೇಕೇ ಬೇಕು ಮೌನಸ್ಥಲ
...............
ರಣ ಕಹಳೆ ಡೊಳ್ಳು ಢಕ್ಕೆಯ ನಡುವೆ ಅಬ್ಬರದುಬ್ಬಟೆ ನಡುವೆ ನಡುಗಡ್ಡೆಯಲ್ಲಿ
ಮುರಲೀನಾದ, ಬೇಕೇ ಬೇಕು ಜಗನ್ನಾಶಕ ಮಹಾಪೂರದ ನಡುವೆ
ನಿಲ್ಲಲಿಕ್ಕೊಂದು ಸಣ್ನ ನಡುಗುಡ್ಡೆ, ಜೀವಾನುಕಂಪೆ ತುಂಬಿದ ಮಾಧವ ದ್ವೀಪ
ಗಾರುಗದ್ದಲದ ನಡುವೆಯೇ ಒಂದು ಹೃದ್ಗೀತೆ.

ನಮ್ಮ ನೋವನ್ನೂ ಮರೆಯುವಂತಿರ ಬೇಕು ಕವಿತೆ ಎನ್ನುವುದು ಇನ್ನೊಂದು ರಂಗವಲ್ಲಿ ಯಲ್ಲಿ
ಮಕ್ಕಳಿರಲವ್ವಾ ಮಕ್ಕಳಾಗಿ ಯಲ್ಲಿ
ಪುನಃ ಮಹಾಭಾರತದಲ್ಲಿನ ಪಾಂಡವರು ಕೌರವರ ಬಾಲ್ಯದಾಟದ ಗಮ್ಮತ್ತನ್ನು ನಮ್ಮ ಸಮಕಾಲೀನ ಅಂಗಣದ  ಮಕ್ಕಳಾಟದಂತೆ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ.ಅವರೇ ನೂ ಪ್ರಾಚೀನರಲ್ಲಾ ನಮ್ಮವರೇ ಅನ್ನುವ ಭಾವನೆಯೊಂದು ಸರಿದಾಡುತ್ತದೆ ಈ ಕವನದುದ್ದಕ್ಕೂ, ಕೊನೆಯಲ್ಲಿ ಪ್ರಶ್ನೆಯೊಂದನ್ನು ಹುಟ್ಟುಹಾಕಿ ನಮ್ಮ ಭಾವನೆಯನ್ನೇ ಪ್ರತ್ಯೇಕಿಸಿ ಯೋಚಿಸುವಂತೆ ಮಾಡುತ್ತದೆ.

ಘಟು ಭೀಮನಿಗೆ  ಕವಿತೆಯಲ್ಲಿ ನಮ್ಮ ಈಗಿನ ಸಮಾಜದ ಹುಳುಕು ಸಾಮ್ಯ ಮತ್ತು ವ್ಯತ್ಯಾಸ ಈಗಿನ ಕಲಿತವರು ಕಲಿಯದವರ ಅಥವಾ ಇದ್ದವರು ಇಲ್ಲದವರ ಸಂಭಂಧಗಳ ಪ್ರತಿಕೃತಿಯಾಗಿಸುತ್ತಾ, ಮಹಾಭಾರತದಲ್ಲೂ ಅದೇ ನಡೆದದ್ದು ಎನ್ನುವಂತಹ ದ್ವಂದ್ವ ಯಾ ಮುಖಾಮುಖಿಯಾಗಿಸುತ್ತದೆಪ್ರಾಚೀನ ಅರ್ವಾಚೀನವನ್ನು.
ಪುನರಾಗಮನದಲ್ಲಿ
ತನ್ನ ಪ್ರೀತಿ ಪಾರ್ತವಾದ ವ್ಯಕ್ತಿಯ ಬಗೆಗಿನ ನಿರ್ವಾತ,ಕಾಡುವ ಪ್ರೀತಿ ಒರತೆಯ ಸ್ಮೃತಿ  ಮನದಾಳಕ್ಕಿಳಿದು ಹೃದಯ ದೃವಿಸಿ ಕಣ್ಣಾಲಿಯನ್ನೂ ತುಂಬಿಸಿ ಬಿಡುತ್ತದೆ ಕವಿತೆಯ ಜತೆಜತೆಗೆ ಸಾಗುತ್ತಲಿರುವ ನಮ್ಮನ್ನೂ.
ಮೂಲಮೂರ್ತಿಗೆ ಮೊರೆಯಲ್ಲಿ
ಮೂರ್ತಿ ಇಲ್ಲದೇ ನಮಗೆಷ್ಟು ನಷ್ಟವಾಗಿದೆಯೋ ಅಷ್ಟೇ ಮೂರ್ತಿಗೂ ಸಹಾ ಅನ್ನುವುದನ್ನು ವಿವರಿಸುತ್ತಾ  ಮನದಾಳದಲ್ಲಿ ಹಂಪೆಯ ಅಂದಿನ ಭವ್ಯತೆಯನ್ನು ಹೇಗಾದರೂ ಮಾಡಿ ಪುನಸ್ಥಾಪಿಸಬೇಕೆನ್ನುವ ತುಡಿತ ನಮ್ಮಲ್ಲೂ ಮೂಡಿಸಿ ಬಿಡುತ್ತದೆ.
ಮತ್ತೆ ಎದ್ದಿದ್ದೇನೆ ಕವಿತೆಯಲ್ಲಿ ಮನಸ್ಸಿನ ಯಾವುದೋ ಕಾಡುವ ನೋವಿನ ಪ್ರತೀಕದ ಉತ್ಕಂಠತೆ ಮತ್ತು ಬದುಕಿನ ಕಡೆಗಿನ ನಿರ್ಲಿಪ್ತತೆ ಎದ್ದು ಕಾಣುತ್ತದೆ.
ಒಂದು ಬಗೆಯ ನಿರ್ಲಿಪ್ತತೆ ಮತ್ತು ನೀರಸತೆ ಯ ನಡುವೆ ತನ್ನ ಕರ್ತವ್ಯ ಪಾರಾಣತೆಯ ಭಂಗಿಯಲ್ಲಿ ದೆ ಕಾಶಿಯಲ್ಲಿ ಜ್ಯೋತಿರ್ಲಿಂಗ ಕವಿತೆ ಜೀವನದ ಆಗು ಹೋಗುಗಳ ಪರಿಸ್ಥಿತಿ, ಮತ್ತು ನಮ್ಮ ದೈನಂದಿನ ಜೀವನದ ಜೀವದ ಆವಶ್ಯಕಥೆ ಮತ್ತು ಅವುಗಳನ್ನು ಕರ್ತವ್ಯದಂತೆ ನಿರ್ವಹಿಸುವುದರಲ್ಲಿಯ ಕರ್ತವ್ಯ ಪರತೆ. ಸದ್ಯದ ಆಧುನಿಕತೆ ಮತ್ತು ಮನುಷ್ಯರ ಆಸೆ ಬುರುಕತನಹಾಗೂ ನಿರ್ಲಜ್ಜತೆ,ತೀರ್ಥ ಕ್ಷೇತ್ರಗಳಲ್ಲಿನ ಕೊಳಕು ಕಣ್ಣಿಗೆ ಕಟ್ಟುವಂತಿದ್ದು ನಾವೆಲ್ಲರೂ, ಹೇಗೆ ಅದಕ್ಕೂ ಹೊಂದಿಕೊಂಡು ಸಾಗುತ್ತಿರುವ ಮಾರ್ಮಿಕ ಕಾಳಜಿ,
ಮಹಾ ನಿರ್ಣಯ ದಲ್ಲಿ ಮಹಾಭಾರತ ಯುದ್ಧದ ಸ್ತಿತಿಯನ್ನು ತಮ್ಮದೇ ಆದ ಅನೂಹ್ಯ, ಅತೀ ವಿಶಿಷ್ಟ ರಿತಿಯಲ್ಲಿ ಪ್ರಜಾಪ್ರಭುತ್ವವನ್ನೇ ಪ್ರತಿಸ್ಟಾಪಿಸಿ ಬಿಡುತ್ತ ಅದಕ್ಕೊಂದು ವಿಚಿತ್ರ ಅಂತ್ಯವನ್ನೂ ಪ್ರತಿಪಾದಿಸುತ್ತಾರೆ.
ಅಕ್ಕಮಹಾದೇವಿಯ ಮನಸ್ಥಿತಿಯನ್ನು ಬಿಂಬಿಸುವ ಚೆನ್ನಮಲ್ಲ
ಹೇಗೆ ಕಂಡೀತು ನನ್ನ ಕನಸ ಕಾಣದವರಿ
ಗೆನ್ನ ಮನಸು.... ಎನ್ನುತ್ತಾ
............ ಅಂತರಂಗದಲ್ಲೇ ಕುಂತವನೆ ಎನ್ನುತ್ತಾರೆ
ಬಲ್ಲ ಮಂದಿ. ನನ್ನೊಳಗೇ ಅವನಿದ್ದರೆ ನಾನವನ
ಕಾಡು ಮೇಡಲ್ಲಂಡಲೆದು ಹುಡುಹುಡುಕಿ ಹೈರಾಣವಾಗಬೇಕಿತ್ತಾ? ಎಂದು ಕೇಳುತ್ತಾ
ನಾನೊಂದು ಮಾರ್ಗಣ ಅವನೆನ್ನ
ಮಾರ್ಗ, ನಾನೊಂದು ಕಿರಣ. ಅವನೆನ್ನ
ಕಿರಣ ಹಾಯುವ ನಿರಾವರಣ.
ಇವರ ನುಡಿಗಳು ಅವರ ಕಾವ್ಯದ ಹಾಗೆಯೇ ....    ಎಷ್ಟು ಸರಳ ಮತ್ತು ಎಷ್ಟು ಸಾಂದ್ರ
ಆಗುಂಬೆ ಸೂರ್ಯಾಸ್ತದಲ್ಲಿ ಎಚ್ಚೆಸ್ವೀ ಹೀಗೆನ್ನುತ್ತಾರೆ

ಮುಳುಗಿದರೆ ಮುಳುಗಬೇಕೀರೀತಿ- ಹತ್ತು ಜನ
ನಿಂತು ನೋಡುವ ಹಾಗೆ ಗೌರವ ಬೆರೆತ ಬೆರಗಲ್ಲಿ
ಸೂರ್ಯ ಮುಳುಗುವ ಮುನ್ನ, ಓಡೋಡಿ ಬರುವ ಜನ
ಕೈಮುಗಿವ ಹಾಗೆ ಮುಳುಗಲ್ಲಿ ಮುಳುಗಿ
 

(ಮುಂದುವರಿದುದು)