ಗಣೇಶ ಸೃಷ್ಟಿ !

ಗಣೇಶ ಸೃಷ್ಟಿ !

ಗಣೇಶ ಸೃಷ್ಟಿ !
ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು !

ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಪಾರ್ವತಿ ಮಾಯೆಯ ಮಗನಾಗಿ
ಜನಿಸಿದ ಗಣಪತಿ ಶಿವಯೋಗಿ

ಸ್ನಾನವ ಮಾಡುವೆ ಎಳೆ ಮಗನೆ
ಒಳಗಡೆ ಯಾರನು ಬಿಡಬೇಡ
ಎಂದಳು ಪಾರ್ವತಿ ಮಗನಿಗೆ
ಬಾಗಿಲಲಿ ನಿಂತನು ಗಣಪತಿಯು

ಶಿವಪ್ಪ ಬಂದನು ಮನೆಕಡೆಗೆ
ಗಣಪ್ಪ ತಡೆದನು ಹೊಸಿಲೊಳಗೆ
ಚೋಟುದ್ದ ಎಳೆ ಪೊರೆ ನೀನ್ಯಾರೋ
ಯಾರಾದರೇನಂತೆ ಹೊರನಿಲ್ಲೋ

ಮಾತಿಗೆ ಮಾತನು ಬೆಳಸಿದರು
ಗಗನದಿ ಮಳೆಯನು ಸುರಿಸಿದರು
ಕೋಪದಿ ಈಶ್ವರ ಮೈಮರೆತ
ಹೊಡೆದಾ ಗಣಪಗೆ ಬಿಗಿಹೊಡೆತ

ರುಂಡವು ಚದುರಿತು ಬಾಗಿಲೊಳು
ಮುಂಡವು ಉದುರಿತು ದೂರದೊಳು
ಸ್ನಾನವು ಮಾಡಿದ ಪಾರ್ವತಿಯು
ಅಯ್ಯೋ ಎಂದು ಚೀರಿದಳು

ನಿನ್ನಯ ಮಗನನು ಬದುಕಿಸುವೆ
ಉತ್ತರ ದಿಕ್ಕಿನಲ್ಯಾವುದೇ ಪ್ರಾಣಿಯು ಮಲಗಿರಲಿ
ಅದರ ರುಂಡವ ಕತ್ತರಿಸಿ ತನ್ನಿರಿ ಎಂದನು ಈಶ್ವರನು
ತಂದರು ಆನೆಯ ಮುಖವನ್ನು

ಹಿಡಿಯಿರಿ ಪಾರ್ವತಿ ಪಾಪನಿಗೆ
ಜೀವವು ಬಂದಿತು ಗಣಪತಿಗೆ.

 

Rating
No votes yet

Comments