ಸಣ್ಣಕಥೆ - "ಬೆಂಗಳೂರಿನ ಸಮಯ"

ಸಣ್ಣಕಥೆ - "ಬೆಂಗಳೂರಿನ ಸಮಯ"


 

ಮುಕುಂದನಿಗೆ ತನ್ನ ಆಫೀಸ್ ನಿಂದ ಅಂದು ಬೇಗ ಹೊರಡುವ ಯೋಜನೆಇತ್ತು . ಸಂಜೆ ಕಳುಹಿಸಬೇಕಾದ್ದ ವರದಿಗಳನ್ನು ಮಾರನೆಯ ದಿನ ಕಳುಹಿಸಲು ಅನುಮತಿ ಪಡೆದು ೪ ಗಂಟೆ ಸಮಯಕ್ಕೆತನ್ನ ಸಿಸ್ಟಮ್ ಸ್ವಿಚ್ ಆಫ್ ಹೊರಟಾಗ ಅವನ ಜೀಬಿನಲ್ಲಿದ್ದ ಮೊಬೈಲ್ ಫೋನ್ ಕಂಪಿಸತೊಡಗಿತು, ಯಾರ ಕರೆಯೋ, ಏನು ಕೆಲಸ ಬಂತೋ ಎಂದೇ ಫೋನ್ ತೆಗೆದಾಗ, ಪತ್ನಿ ಯ ಕರೆ ಕಂಡು ನೆಮದ್ದಿಯಿಂದ ಹಲೋ ಎಂದ ! ಮಲ್ಲೇಶ್ವರಂನ ಸಂಪಿಗೆ ರಸ್ತೆಯ ೮ನೇ ಅಡ್ಡರಸ್ತೆ ಬರಲು ಸೂಚಿಸಿದ ವಿದ್ಯಾ, ೫ ಗಂಟೆಯ ಹೊತ್ತಿಗೆ ಗ್ರಂಥಿಗೆ ಅಂಗಡಿಯ ಬಳಿ ಕಾಯುವುದಾಗಿ ತಿಳಿಸಿದಳು.

ತನ್ನ ಆಫೀಸ್ ನಿಂದ ಅಲ್ಲಿಗೆ ಸುಮಾರು ೪೫ ನಿಮಿಷದ ರಸ್ತೆ ಎಂದು, ತನ್ನ ಮಾರುತಿ ಜೆನ್ ಕಾರಿನಲ್ಲಿ ಹೊರಟ. ಎಫ್.ಎಂ. ನಲ್ಲಿ ರೇಡಿಯೋ ಜಾಕಿಯ ತಲೆಹರಟೆ, ಸ್ವಲ್ಪ ಹಾಡು ಮತ್ತು ಮಣಗಟ್ಟಲೆ ಜಾಹಿರಾತುಗಳು ಮುಕುಂದನ ಕಿವಿಗೆ ಹೊಡೆಯಹತ್ತಿದವು ! ಕಿರಿಕಿರಿ ಉಂಟು ಮಾಡುತಿದ್ದ ರೇಡಿಯೋ ಶಬ್ದ ಕಡಿಮೆ ಮಾಡಿದ ಮುಕುಂದ ತನ್ನ ಕೆಲಸದ ಬಗ್ಗೆ ಯೋಚನೆಯಲ್ಲಿ ತೊಡಗಿದ್ದ, ತಯಾರಾಗಿರದ ವರದಿ, ಬದಿಗಿಟ್ಟ ಪರಿಶೀಲನೆ ಕೆಲಸ, ಸ್ಥಿರೀಕರಿಸುವಿಕೆಗೆ ಕಾದಿರುವ ಕೋಡ್ ಎಲ್ಲ ನೆನಪಿಸಿಕೊಂಡು ತಲೆ ಗಿರ್ರ್ ಎಂದಿತು. ಮಾರನೆಯದಿನ ಸ್ವಲ್ಪ ಬೇಗ ಬರುವ ಯೋಚನೆಯಲ್ಲಿದ್ದಾಗ, ಜೇಬಿನಲ್ಲಿದ್ದ ಮೊಬೈಲ್ ಫೋನ್ ಮತ್ತೆ ಕಂಪಿಸತೊಡಗಿತು -ಸ್ನೇಹಿತ ಚರಣ್ ನ ಕರೆ - "ಡ್ರೈವ್ ಮಾಡ್ತಿದಿನಿ ಮಗಾ, ಏನಾದ್ರು ಅರ್ಜೆಂಟ್ ಇತ್ತಾ ?" "ಸರಿ ಫೋನ್ ಮಾಡ್ತೀನಿ ಸಂಜೆ " ಎನ್ನುತ ಧಿಡೀರನೆ ಬ್ರೇಕ್ ಹಾಕಿದ. ೩೫ ರುಪಾಯಿ ಟೋಲ್ ಕೊಟ್ಟು ELEVATED ಹೈವೆ ಮೇಲೆ ಬಂದರೂ ಈ TRAFFIC ಗೋಳು ತಪ್ಪಲಿಲ್ಲ ಎನುತ್ತಾ, ಕಿಟಕಿ ಏಳಿಸಿ ಮುಂದೆ ಇಣುಕಿ ನೋಡಿ, ಇಲ್ಲೂ ಜಾಮ್ ಅ ಅಂತ ಸೀಟ್ನಲ್ಲಿ ಒರಗಿ ಕೂತ. ಎಫ್. ಎಂ ವಾಲ್ಯುಮ್ ಜಾಸ್ತಿ ಮಾಡಿದ. "ಹೊಡಿ ಮಗ ಹೊಡಿ ಮಗ ಎಂಬ ಅರಚು ಗೀತೆ !! ಇರುಸು ಮುರುಸು ಗೊಂಡು ರೇಡಿಯೋ ಚಾನೆಲ್ ಬದಲಿಸಿದ... "ನಮೂರ ಮಂದಾರ ಹೂವೆ......" ಹಳೆಯ ಚಿತ್ರಗೀತೆ ಅವನ ಇರುಸು ಮುರುಸಿಗೆ ಔಷದಿಯ ಕೆಲಸ ಮಾಡಿತ್ತು ....ನಂತರ ಬಂದ "ಒಲವೆ ಜೀವನ ಸಾಕ್ಷಾತ್ಕಾರ....." ಗೀತೆಯು ಮನಿಸ್ಸಿಗೆ ಮುದನೀಡಿತು ....೧೦೧.೩ ಯ ಹಿರಿಯ ಮಹಿಳೆಯ ಧ್ವನಿ ಹಾಗು ಪ್ರೋಗ್ರಾಮ್ ನಡೆಸಿಕೊಡುವ ರೀತಿ ಮೆಚ್ಹಿದ ಮುಕುಂದ ಈ ಬೇರೆ ಚಾನೆಲ್ RJ ಗಳಿಗೆಲ್ಲ ಈ ಮಹಿಳೆಯಿಂದ ಕೋಚಿಂಗ್ ಕೊಡಿಸಬೇಕು ಎಂದು ಯೋಚಿಸತೊಡಗಿದ್ದ !!...."ರವಿ ನೀನು ಆಗಸದಲ್ಲಿ...." ಎಂದು ರೇಡಿಯೋ ಜೊತೆಯಲ್ಲೇ ಹಾಡತೋಡಗಿದ್ದ, ಹೆಂಡತಿಯ ಫೋನ್ ಕರೆ ಬಂದಾಗಲೇ ಅವನು ವಾಸ್ತವಕ್ಕೆ ಬಂದದ್ದು ....

" ಹಲೋ .....ವಿದ್ಯಾ ಒಂದು ೧೫-೨೦ ನಿಮಿಷ ಲೇಟ್ ಆಗಬಹುದು ನಾನು ಅಲ್ಲಿಗೆ ಬರೋದು, ಹಾಳು ಟ್ರಾಫಿಕ್" ಎಂದ. ವಿದ್ಯಾ "ಎಲ್ಲಿದ್ದೀರ ನೀವೀಗ" ಎನ್ನಲು, ಇನ್ನೂ ELEVATED ಹೈವೆ ಮೇಲೆ ಇದೀನಿ"  ಎಂದು ಹೇಳಿದಕ್ಕೆ, ಆ ಕಡೆಯಿಂದ "ಯಾವಾಗಲೂ ಇದೆ ಆಯಿತು, ಬೇಗ ಹೊರಡಿ ಅಂದ್ರೆ ಕೇಳೋಲ್ಲ" ಎಂದು ಫೋನ್ ಕಟ್ ಆಗಲು FM ನಲ್ಲಿ ಬರುತಿದ್ದ "ಮನೆಯೇ ಮಂತ್ರಾಲಯ ......"ಹಾಡು ಈಗ ರುಚಿಸದೆ ಹೋಗಿ ರೇಡಿಯೋ OFF ಆಗಿತ್ತು !...ಕೈ ಗಡಿಯಾದಲ್ಲಿ ಸಮಯ ೪.೨೮, ಆಮೆಯ ವೇಗದಲ್ಲಿ ತನ್ನ ಕಾರ್ ಓಡಿಸುತಾ " ಹಾಳು ಊರು ಗುರು, ಬರೀ TRAFFIC ಜೊತೆ ಹೊಡೆದಾಡೋದೇ ಜೀವನ ಆಗಿದೆ" ಎಂದುಕೊಂಡು ಹಾರನ್ ಮೇಲೆ ಕೈ ಹಾಕಿದ ! ...ಸುಮಾರು ೧೫ ನಿಮಿಷದ ನಂತರ ELEVATED ಹೈವೆ ಜಾಮ್ ಕ್ಲಿಯರ್ ಆಗಿತ್ತು, ನಿಟ್ಟುಸಿರು ಬಿಡುತ್ತಾ ಸಾದ್ಯವಾದಷ್ಟು ವೇಗವಾಗಿ ಗಾಡಿ ನಡೆಸುತ್ತಾ ವಿದ್ಯಾಳಿಗೆ ಕರೆ ಮಾಡಿದ  "ಹಲೋ ..ವಿದ್ಯಾ ....ಶಾಂತಿ ನಗರದತ್ತಿರ ಇದೀನಿ ಇನ್ನೊಂದು ೧೫ ನಿಮಿಷದಲ್ಲಿ ಅಲ್ಲಿರುತ್ತೇನೆ" ಎಂದು ಹೇಳುವಷ್ಟರಲ್ಲಿ,  ಕಾರಿನ ಮುಂದಿದ್ದ ಪೋಲಿಸ್ ಕಾರನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸುವ ಸೂಚನೆ ಮಾಡಿದ್ದರು ! ...

ಮುಕುಂದ ಕಿಟಕಿ ಇಳಿಸಿ " ಏನ್ ಸರ್" ಎಂದಿದಕ್ಕೆ, ಆತ "ಗಾಡಿ ಸೈಡ್ಗೆ ಹಾಕಿ ಅಲ್ಲಿ ಸಾಹೇಬರು ಇದ್ದಾರೆ ಅವರ ಹತ್ರ ಮಾತಾಡಿ" ಎಂಬ ಉತ್ತರ ಕೊಟ್ಟು, ತನ್ನ ಹಿಂದಿನ ಗಾಡಿಯವನ ಬಳಿ ಹೋದ .  ಆ ಸಾಹೇಬರ ಬಳಿ ತನ್ನೆಲ್ಲಾ  ವಾಗ್ಚತುರ್ಯ ವೈಫಲ್ಯಗೊಂಡು, ಗಾಡಿ ಓಡಿಸುವಾಗ ಫೋನ್ ಬಳಸಿದ್ದಕ್ಕೆ ೨೦೦ ಹಾಗು ಸಿಗ್ನಲ್ ಪಾಲಿಸದಿದಕ್ಕೆ ೧೦೦ ತೆತ್ತು, ತನ್ನ  ಆ ಸಾಹೇಬರ ಬಳಿ ತನ್ನೆಲ್ಲಾ  ವಾಗ್ಚತುರ್ಯ ವೈಫಲ್ಯಗೊಂಡು, ಗಾಡಿ ಓಡಿಸುವಾಗ ಫೋನ್ ಬಳಸಿದ್ದಕ್ಕೆ ೨೦೦ ಹಾಗು ಸಿಗ್ನಲ್ ಪಾಲಿಸದಿದಕ್ಕೆ ೧೦೦ತೆತ್ತು, ತನ್ನ ಕಾರಿನಲ್ಲಿ ಬಂದು ಕುಳಿತ.ಎಲ್ಲಾ ಇದರಿಂದಲೇ ಎನುತಾ ಫೋನ್ ನೋಡಿದವಿದ್ಯಾ  ಕರೆಗಳನ್ನ ನೋಡಿ ತಿರುಗಿ ಕರೆ ಮಾಡಿದರೆ ಆಕೆಸ್ವೀಕರಿಸುತ್ತಿಲ್ಲ !! ಮುಕುಂದನ ಸಿಟ್ಟು ತಾರಕಕ್ಕೇರಿತ್ತು, .....ಆ ಪೊಲೀಸರನ್ನು ಮನಸಲ್ಲೇಕೆಟ್ಟ ಪದಗಳಿಂದ ಬೈದುಕೊಳುತ್ತಾ ಕಾರ್ ಡ್ರೈವ್ ಮಾಡಿಕೊಂಡು ಸುಮಾರು ೫ ನಿಮಿಷಗಳಲ್ಲಿಮಲ್ಲೇಶ್ವರಂ ನ ಮಂತ್ರಿಮಾಲ್ ನ ಸಿಗ್ನಲ್ ತಲುಪಿದ. ಪುನಃ ವಿದ್ಯಾಳಿಗೆ ಕರೆ ಮಾಡಲು ಪ್ರಯತ್ನಿಸಿದ, ಅಷ್ಟರಲ್ಲಿ ಸಿಗ್ನಲ್ ಹಸಿರಾಯಿತು, ಆಗತಾನೇ ಕಟಿದ್ದ "ದಂಡ" ನೆನಪಿಸಿಕೊಂಡು, ಫೋನ್ ಬದಿಗಿಟ್ಟ. ಬಹಳ ಪರಿಶ್ರಮದ ನಂತರ ೮ ನೇ ಕ್ರಾಸ್ ನ ಬಳಿ ಪಾರ್ಕ್ ಮಾಡಲು ಒಂದು ಸ್ಥಳಸಿಕ್ಕಿತು ! ಅಂತು ಇಂತು ವಿದ್ಯಾ ಹೇಳಿದಗ್ರಂಥಿಗೆ ಅಂಗಡಿಯ ಬಳಿಗೆ ತಲುಪಿದ. ಅಲ್ಲೆಲ್ಲೂ ವಿದ್ಯಾ ಕಾಣದಿದ್ದಾಗ ತನ್ನ ಜೀಬಿಗೆ ಕೈ ಹಾಕಿ ಫೋನ್ ಹೊರತೆಗೆದ ಸಮಯದಲ್ಲೇ SMS ನ ಟೋನ್ ಮೊಳಗಿತು. ಅದರಲ್ಲಿದ್ದ ಸಂದೇಶ ಹೀಗಿತ್ತು - " I hv fnshd wrk & rchd home"

ಅವಕ್ಕಾದ ಮುಕುಂದ ತನ್ನ ಕೈ ಗಡಿಯಾರ ನೋಡಿದಾಗ ಸಮಯ೬.೪೦  !! ವಿದ್ಯಾಳಿಗೆ ಕರೆ ಮಾಡಿ ನಡೆದ ವಿಷಯಗಳನ್ನ ಹೇಳುವ ಪ್ರಯತ್ನದಲ್ಲಿದ್ದಾಗ ಆಕೆ "ನಾನು ಹೇಳಿದ್ದನ್ನು ನೀವು ಯಾವತ್ತಾದ್ರು ಕೇಳಿದ್ದೀರಾ ? ಸ್ವಲ್ಪ ಮುಂಚೆನೇ ಆಫೀಸ್ ಬಿಟ್ಟಿದ್ರೆ ಏನ್ ಕಳಕೊತ್ತಿದ್ದಿರಿ ? "ಎಂದಳು....ಸಿಟ್ಟಿನಿಂದ ಫೋನ್ ಕಟ್ ಮಾಡಿದ  ಮುಕುಂದ, ಒಂದು ಒಳ್ಳೆ ಕಾಫಿನಾದರು ಕುಡಿಯೋಣ ಎಂದು ಅಲ್ಲೇ ಹತ್ತಿರ ಇದ್ದ ವೆಂಕಟೇಶ್ವರ ಕ್ಯಾಂಟೀನ್ ನ ಕಡೆಗೆ ನಡೆಯಲಾರಂಬಿಸಿದ !!

  

 

Comments