ಶ್ರೀ ಗುರವೇ ನಮಃ
"September 5, 2007 - 11:45am
ಮತ್ತೆ ಸೆಪ್ಟೆಂಬರ್ ೫ ಬಂತು.ಮಕ್ಕಳೆಲ್ಲಾ ನಿನ್ನೆನೇ ತಮ್ಮ ತಮ್ಮ ಟೀಚರ್ ಗೋಸ್ಕರ ತಂದ ಹೂ, ಕಾರ್ಡ್, ಉಡುಗೊರೆಗಳನ್ನು ಹಿಡಿದುಕೊಂಡು ಸ್ಕೂಲಿಗೆ ಹೊರಟಿದ್ದಾರೆ. ಈ ಮಕ್ಕಳ್ಳನ್ನು ನೋಡಿ ನನಗೆ ನನ್ನ ಶಾಲೆಯ ದಿನಗಳು ನೆನಪಿಗೆ ಬಂತು. ನಾವೆಲ್ಲಾ ಈಗಿನ ಮಕ್ಕಳ ಹಾಗೆ ನಮ್ಮ ಟೀಚರ್ ಗೆ ಏನೂ ತೆಗೆದುಕೊಂಡು ಹೋದ ನೆನಪಿಲ್ಲ ನನಗೆ! ಈಗಿನ ಮಕ್ಕಳ ಉತ್ಸಾಹ ನೋಡಿ ಸಂತೋಷವಾಗುತ್ತದೆ ಜೊತೆಗೆ ಆಶ್ಚ್ರರ್ಯವೂ ಆಗುತ್ತದೆ, ಈಗಿನ ಮಕ್ಕಳಿಗೆ ನಿಜವಾಗಿಯೂ ತಮ್ಮ ಟೀಚರ್ ಮೇಲೆ ಪ್ರೀತಿಯಿದೆಯೇ ಎಂದು.ನಮ್ಮ ಗುರುಗಳು ಹಾಗು ನಮ್ಮ ಮಧ್ಯೆಯಿದ್ದ ಆ ಸುಮಧುರ ಸಂಬಂಧ ಈಗಿನ ಮಕ್ಕಳು ಗುರುಗಳಲ್ಲಿಯಿದೆಯೇ? ಇದ್ದರೂ ಇರಬಹುದು......ಏನಿದ್ದರೂ ಈ ಮಕ್ಕಳು ನನ್ನಲ್ಲಿ ಸುಪ್ತವಾಗಿದ್ದ ನನ್ನ ಗುರುಗಳ ಮೇಲಿನ ಭಕ್ತಿ, ಗೌರವ ಹಾಗೂ ಕೃತಜ್ಞತೆಯನ್ನು ಈ ಮೂಲಕ ಅರ್ಪಿಸಲು ಪ್ರೇರಣೆಯಾಗಿದ್ದರೆ!
ಪ್ರಪಂಚದ ಎಲ್ಲಾ ಗುರುಗಳಿಗೆ ನನ್ನ ವಂದನೆಗಳು. ವಿಶೇಷವಾಗಿ ನನಗೆ ಕಲಿಸಿದ ಗುರುಗಳನ್ನು ನಾನು ಈ ದಿನ ಸ್ಮರಿಸಿ ನನ್ನ ಕೃತಜ್ಞತೆಯನ್ನು ಈ ಮೂಲಕ ತೋರಿಸಲು ಆಶಿಸುತ್ತೇನೆ.
ಬಾಲವಾಡಿಯಿಂದ ೫ನೇ ತರಗತಿಯವರೆಗೆ ಕಲಿಸಿದ ಸುಶೀಲಾ, ರತ್ನ ಟೀಚರ್ ಇವರಿಂದ ಕಲಿತ ಪಾಠ ಪ್ರೈಮರಿ ತರಗತಿಯಲ್ಲಿ ಕಳೆದ ಕಾಲವನ್ನು ಇನ್ನೂ ಹಸಿಯಾಗಿಡಲು ಕಾರಣವಾಯಿತು. ಇವರಿಬ್ಬರ ಜೊತೆಗೆ ನನಗೆ ಹೈಸ್ಕೂಲಿನಲ್ಲಿ ಕಲಿಸಿದ ಮುಕ್ತಾ, ರಾಧ, ದಮಯಂತಿ, ಶಾರ್ಲೆಟ್, ರಾಮಪ್ಪ, ನಾರಾಯಣ ತಂತ್ರಿ,ಮೊದಲಾದವರೂ ನನ್ನ ಮುಂದಿನ ಶಿಕ್ಷಣಕ್ಕೆ ಹಾಕಿಕೊಟ್ಟ ಅಡಿಪಾಯವನ್ನು ನಾನೆಂದಿಗೂ ಮರೆಯಲಾರೆ. ಪಿಯುಸಿ ಹಾಗು ಕಾಲೇಜಿನಲ್ಲಿ ಕಲಿಸಿದ ಬಾಲಚಂದ್ರ ರಾವ್, ಚಂದ್ರಶೇಖರ್, ಶೆಣೈ ಸರ್, ಸ್ವರ್ಣಾ ಮೇಡಮ್, ಮುಡಿತಾಯಾ ಸರ್, ಆಚಾರ್ಯ ಸರ್, ....... ಇನ್ನೂ ಪ್ರತ್ಯೇಕ್ಷವಲ್ಲದೇ ಅನೇಕ ಪರೋಕ್ಷ ಗುರುಗಳನ್ನು ಸ್ಮರಿಸಿ, ಈ ದಿನವನ್ನು ಶಿಕ್ಷರಿಗೆ ಅರ್ಪಿಸಿದ ರಾಧಾಕೃಷ್ಣರಿಗೆ ನನ್ನ ಹಾರ್ಧಿಕ ಅಭಿನಂದನೆಗಳನ್ನು ಮತ್ತು ಕೃತಜ್ಞತೆಯನ್ನು ಆರ್ಪಿಸುತ್ತೇನೆ!
ಗುರು--- ಈ ಶಬ್ದಕ್ಕೆ ಎಷ್ಟು ಮಹತ್ವವಿದೆಯಲ್ಲವೇ? ಗು ಅಂದರೆ ಕತ್ತಲೆ, ರು ಅಂದರೆ ಕತ್ತಲೆಯನ್ನು ದೂರಮಾಡುವವ. ಅಂದರೆ ಬೆಳಕನ್ನು ತೋರಿಸುವವ. ತಾಯಿಯ ನಂತರ ಪ್ರತಿಯೊಬ್ಬರ ಬಾಳಿನಲ್ಲಿ ಪ್ರಮುಖವಾದ ಪಾತ್ರವನ್ನು ಗುರು ವಹಿಸುತಾನೆ! ನಮ್ಮ ಮುಂದಿನ ಜೀವನಕ್ಕೆ ನಾಂದಿಯನ್ನು ಹಾಕುತ್ತಾನೆ. ಭದ್ರವಾದ ಅಡಿಪಾಯವಾದರೆ ಮುಂದಿನ ಜೀವನದಲ್ಲಿ ಬರುವ ಎಲ್ಲಾ ಅಡೆಚಡೆಗಳನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡುತ್ತದೆ. तस्मै श्री गुरुभ्यॊ नमः ....ಇದು ನನ್ನ ೨೦೦೭ರ ಬರಹ....
ಮತ್ತೆ ಬಂದಿದೆ ಗುರುಗಳ ದಿನ! ನನ್ನಲ್ಲಿ ನನ್ನ ಗುರುಗಳ ಬಗ್ಗೆಯ ಕೃತಜ್ಞತಾ ಭಾವ ಇನ್ನು ಇನ್ನು ಹೆಚ್ಚಾಗುತಿದೆಯೇ ಹೊರತು ಒಂಚೂರು ಕಮ್ಮಿಯಾಗಿಲ್ಲ. ಕಾರಣ ನನ್ನ ಇಂದಿನ ಏಳಿಗೆಗೆಯ ಸಂಪೂರ್ಣ ಶ್ರೇಯ ನನ್ನ ಗುರುಗಳಿಗೇ ಸಲ್ಲುತ್ತದೆ. ಮತ್ತೆ ಗುರು ಚರಣಗಳಿಗೆ ನನ್ನ ದೀರ್ಘ ಪ್ರಣಾಮಗಳು! ಅದರಲ್ಲೂ ಬಿ. ಜಿ. ಮೊಹಮ್ಮದ್ ಮಾಸ್ಟ್ರು ಅತ್ಯಂತ ಅಲ್ಪ ಸಮಯದಲ್ಲಿ ಚಿತ್ರಕಲೆಯ ರಹಸ್ಯವನ್ನು ತಿಳಿಸಿ ಅವರಿಗೆ ಚಿರಋಣಿಯಾಗಿರುವಂತೆ ಮಾಡಿದ್ದಾರೆ. ಇಂದು ನಾನು ಅವರದೇ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದ್ದೇನೆ. ಚಿತ್ರ ಕಲೆಯನ್ನು ಕಲಿಸುವ ರೀತಿ ಅವರಿಗೆ ಚೆನ್ನಾಗಿ ಕರಗತವಾಗಿತ್ತು.....ಎಷ್ಟೋ ಮಂದಿ ಸೂಪರ್ ಪೈಂಟಿಗ್ ಮಾಡುತ್ತಾರೆ...ಆದರೆ ಕಲಿಸಲು ಬರುವುದಿಲ್ಲ...ನನಗೆ ತಿಳಿದ ಹಾಗೆ ಅವರು ಅಜಾತ ಶತ್ರುಗಳಾಗಿದ್ದರು...ಬಹಳ ಜನಪ್ರಿಯರಾಗಿದ್ದರು...ಎಂದಿಗೂ ಪ್ರಶಸ್ತಿಗಳಿಗಾಗಿ ಲಾಬಿ ಮಾಡಿರಲಿಲ್ಲ...ಅದರಿಂದ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಮಾನ ಸಮ್ಮಾನಗಳು ದೊರಕಿಲ್ಲ....ಆದರೂ ಅವರ ಶಿಷ್ಯರು ಅವರಿಗೆ ತಮ್ಮ ಚಿತ್ರಗಳ ರೂಪದಲ್ಲಿ ನ್ಯಾಯ ಸಲ್ಲಿಸಿದ್ದಾರೆ...ಸಲ್ಲಿಸುತ್ತಿದ್ದಾರೆ... ಮತ್ತು ಸಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ...ಅವರ ಜೀವಿತದ ಕೊನೆಯ ಕಾಲದಲ್ಲಿ ರಾಜ್ಯೋತ್ಸವ ಪ್ರಶಸ್ತಿ ದೊರೆಯಿತು.
ಮಷ್ಟ್ರಾ ನಮಸ್ಕಾರು!!!! ಕೃತಜ್ಞತೆಯನ್ನು ನನ್ನ ಈ ಚಿತ್ರದ ಮೂಲಕ ಸಲ್ಲಿಸುತ್ತೇನೆ.
Comments
ಉ: ಶ್ರೀ ಗುರುವೇ ನಮಃ
In reply to ಉ: ಶ್ರೀ ಗುರುವೇ ನಮಃ by NarsimhaMurthy…
ಉ: ಶ್ರೀ ಗುರುವೇ ನಮಃ
In reply to ಉ: ಶ್ರೀ ಗುರುವೇ ನಮಃ by ksnayak
ಉ: ಶ್ರೀ ಗುರುವೇ ನಮಃ
In reply to ಉ: ಶ್ರೀ ಗುರುವೇ ನಮಃ by ಗಣೇಶ
ಉ: ಶ್ರೀ ಗುರುವೇ ನಮಃ
ಉ: ಶ್ರೀ ಗುರುವೇ ನಮಃ
In reply to ಉ: ಶ್ರೀ ಗುರುವೇ ನಮಃ by sunilkgb
ಉ: ಶ್ರೀ ಗುರುವೇ ನಮಃ
In reply to ಉ: ಶ್ರೀ ಗುರುವೇ ನಮಃ by ksnayak
ಉ: ಶ್ರೀ ಗುರುವೇ ನಮಃ