ನೆನಪುಗಳು

ನೆನಪುಗಳು

ಕವನ
ನೆನಪುಗಳೇ ಹಾಗೆ ನೆರಳಿನಂತೆ ಒಮ್ಮೆ ಹಿಂದೆ ಮತ್ತೊಮ್ಮೆ ಮುಂದೆ ಮಗದೊಮ್ಮೆ ಜೊತೆಜೊತೆಗೆ ನೆನಪುಗಳೇ ಹಾಗೆ ಮಳೆಯಂತೆ ಒಮ್ಮೆ ಧೋ ಎಂದು ಭೋರ್ಗರೆತ ಮತ್ತೊಮ್ಮೆ ನಿಧಾನವಾಗಿ ಸುರಿವಂತೆ ಮಗದೊಮ್ಮೆ ಬಿಟ್ಟು ಬಿಟ್ಟು ಬರುವಂತೆ ನೆನಪುಗಳೇ ಹಾಗೆ ಚಂದಿರನಂತೆ ಒಮ್ಮೆ ಸಂಪೂರ್ಣ ಮತ್ತೊಮ್ಮೆ ಅರ್ಧ ಮಗದೊಮ್ಮೆ ಅಪೂರ್ಣ ನೆನಪುಗಳೇ ಹಾಗೆ ಸಮುದ್ರದಂತೆ ಒಮ್ಮೆ ಅಲೆಅಲೆ ಮತ್ತೊಮ್ಮೆ ಶಾಂತ ಮಗದೊಮ್ಮೆ ಸುನಾಮಿ

Comments