ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯ ಕಿರು ಪರಿಚಯ 6-9-2011

ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯ ಕಿರು ಪರಿಚಯ 6-9-2011

 


ಭಾರತದ ಇತರೆಡೆಗಳಂತೆ ಕರ್ನಾಟಕದಲ್ಲೂ ಗ್ಯಾಸೆಟಿಯರ್ ಪ್ರಕಟಣೆಗೆ ಸುದೀರ್ಘ ಇತಿಹಾಸವಿದ್ದು ಅದನ್ನು ೧೮೭೦ರ ದಶಕದಷ್ಟು ಹಿಂದಕ್ಕೆ ಗುರುತಿಸಬಹುದಾಗಿದೆ. ಆ ಪರಂಪರೆಯ ಮುಂದುವರಿಕೆಯಾಗಿ ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ೧೯೫೮ರಲ್ಲಿ ಅಸ್ತಿತ್ವಕ್ಕೆ ಬಂದಂದಿನಿಂದಲೂ ಗ್ಯಾಸೆಟಿಯರ್ ಸಂಪುಟಗಳನ್ನು ನಿರಂತರವಾಗಿ ಪ್ರಕಟಿಸುವ ಮೂಲಕ ಜಿಲ್ಲಾ ಮಟ್ಟದ ಮಾಹಿತಿಯನ್ನು ಸಮಗ್ರವಾಗಿ ಒಂದೆಡೆ ನೀಡುವ ಕಾರ್ಯವನ್ನು ಮಾಡುತ್ತಿದೆ. ೧೯೯೦ರಷ್ಟು ಹಿಂದೆಯೇ ಅಂದಿನ ಎಲ್ಲಾ ೨೦ ಜಿಲ್ಲೆಗಳಿಗೂ ಜಿಲ್ಲಾ ಗ್ಯಾಸೆಟಿಯರ್‌ಗಳನ್ನು ಪ್ರಕಟಿಸಲಾಗಿದೆ. ಆನಂತರ ರಾಜ್ಯಸರ್ಕಾರದ ಭಾಷಾ ನೀತಿಯಂತೆ ಜಿಲ್ಲಾ ಗ್ಯಾಸೆಟಿಯರ್‌ಗಳ ಕನ್ನಡ ಪರಿಷ್ಕೃತ ಆವೃತಿಗಳನ್ನು ಪ್ರಕಟಿಸಲಾಗಿದ್ದು ಈವರೆಗೆ ಕೊಡಗುಧಾರವಾಡಗುಲ್ಬರ್ಗಾವಿಜಾಪುರಕೋಲಾರಮಂಡ್ಯದಕ್ಷಿಣ ಕನ್ನಡ ಜಿಲ್ಲಾ ಗ್ಯಾಸೆಟಿಯರ್‌ಗಳು ಪ್ರಕಟವಾಗಿದ್ದುನೂತನವಾಗಿ ರಚಿತಗೊಂಡಿರುವ ಉಡುಪಿ ಜಿಲ್ಲೆಗೆ ಸಂಬಂಧಿಸಿದ ಗ್ಯಾಸೆಟಿಯರ್‌ಅನ್ನು ಮಾನ್ಯ ಸಚಿವರು ಇಂದು ಬಿಡುಗಡೆ ಮಾಡಲಿದ್ದಾರೆ.

ಕನ್ನಡೇತರರಿಗೂ ಈ ಗ್ಯಾಸೆಟಿಯರ್‌ಗಳು ಲಭಿಸಬೇಕೆಂಬ ಉದ್ದೇಶದಿಂದ ಪರಿಷ್ಕೃತ ಜಿಲ್ಲಾ ಗ್ಯಾಸೆಟಿಯರ್‌ಗಳನ್ನು ಆಂಗ್ಲಭಾಷೆಯಲ್ಲಿ ಪ್ರಕಟಿಸಲು ರೂಪಿಸಿದ ಯೋಜನೆಯಂತೆಈವರೆಗೆ ಕೊಡಗುಧಾರವಾಡಗುಲ್ಬರ್ಗಮಂಡ್ಯವಿಜಾಪುರ ಜಿಲ್ಲಾ ಗ್ಯಾಸೆಟಿಯರ್‌ಗಳು ಪ್ರಕಟವಾಗಿದ್ದುಇಂದು ಬಿಡುಗಡೆಯಾಗಲಿರುವ ದಕ್ಷಿಣ ಕನ್ನಡ ಜಿಲ್ಲಾ ಗ್ಯಾಸೆಟಿಯರ್‌ನ ಆಂಗ್ಲ ಆವೃತ್ತಿ ಈ ಸರಮಾಲೆಗೆ ಸೇರಿದ್ದಾಗಿದೆ. ಪ್ರಸ್ತುತ ಉಡುಪಿ ಜಿಲ್ಲಾ ಗ್ಯಾಸೆಟಿಯರ್‌ನ ಆಂಗ್ಲ ಆವೃತ್ತಿಯ ಪ್ರಕಟಣಾ ಕಾರ್ಯ ಪ್ರಗತಿಯಲ್ಲಿದೆ.

ಇಡೀ ರಾಜ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಗ್ಯಾಸೆಟಿಯರ್ ಸಂಪುಟಗಳನ್ನು ಕನ್ನಡ-ಆಂಗ್ಲ ಭಾಷೆಗಳಲ್ಲಿ ಮೊದಲ ಬಾರಿಗೆ ೧೯೮೪ರಲ್ಲಿ ಹೊರತಂದ ಹೆಗ್ಗಳಿಕೆಯೂ ಕರ್ನಾಟಕ ರಾಜ್ಯ ಗ್ಯಾಸೆಟಿಯರ್ ಇಲಾಖೆಯದ್ದಾಗಿದೆ. ಅವುಗಳಿಗೆ ದಶವಾರ್ಷಿಕ ಪುರವಣಿಯನ್ನು ೧೯೯೫ರಲ್ಲಿ ಹೊರತಂದಿದ್ದುಪ್ರಸ್ತುತ ಅದನ್ನು ಪರಿಷ್ಕರಿಸಿ ಪ್ರಕಟಿಸುವ ಮಹತ್ವದ ಯೋಜನೆಯಲ್ಲಿ ಇಲಾಖೆಯು ತೊಡಗಿದೆ.

ಇಲಾಖೆಯ ವಿಶೇಷ ಪ್ರಕಟಣೆಯಾಗಿ ೧೯೯೬ರಲ್ಲಿ ಪ್ರಕಟವಾದ ಕರ್ನಾಟಕ ಕೈಪಿಡಿಂ ಊಚಿಟಿಜ ಃooಞ oಜಿ ಏಚಿಡಿಟಿಚಿಣಚಿಞಚಿ ಕರ್ನಾಟಕ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಗ್ರಂಥವೆಂದು ಪರಿಗಣಿಸಲ್ಪಟ್ಟಿದ್ದು೨೦೧೦ರಲ್ಲಿ ಅದರ ೪ನೆಯ ಪರಿಷ್ಕೃತ ಆವೃತ್ತಿ ಪ್ರಕಟವಾಗಿದೆ. ಅದರ ಕನ್ನಡ ಆವೃತ್ತಿಯನ್ನು ೧೯೯೬ರಲ್ಲಿ ಪ್ರಕಟಿಸಲಾಗಿತ್ತು. ಇಂದು ಸನ್ಮಾನ್ಯ ಸಚಿವರಿಂದ ಬಿಡುಗಡೆಗೊಳ್ಳಲಿರುವ ಕರ್ನಾಟಕ ಕೈಪಿಡಿ-೨೦೧೧ ಗ್ರಂಥವು ಬಹುವರ್ಣೀಯ ಸಂಪುಟವಾಗಿದೆ.

ಸ್ವಾತಂತ್ರ್ಯಪೂರ್ವದಲ್ಲಿ ಪ್ರಕಟಗೊಂಡಿದ್ದ ಗ್ಯಾಸೆಟಿಯರ್ ಸಂಪುಟಗಳು ದುರ್ಲಭವಾಗಿದ್ದು ವಿದ್ವತ್ ಲೋಕದಲ್ಲಿ ಅದಕ್ಕಿದ್ದ ಮಹತ್ವದಿಂದಾಗಿ ಅದರ ಮರುಮುದ್ರಣಕ್ಕೆ ಮುಂದಾದ ಇಲಾಖೆಯು ಈವರೆವಿಗೂ ಧಾರವಾಡಕೆನರಾಬಿಜಾಪುರಬೆಳಗಾಂದಕ್ಷಿಣ ಕನ್ನಡ ಹಾಗೂ ಬಳ್ಳಾರಿಮತ್ತು ರೈಸ್ ಸಂಪಾದಿತ ಮೈಸೂರು ಮತ್ತು ಕೂರ್ಗ್ ಗ್ಯಾಸೆಟಿಯರ್ ಸಂಪುಟಗಳನ್ನು ಪುನರ್ ಮುದ್ರಿಸಿ ಸಾರ್ವಜನಿಕರಿಗೆ ಸುಲಭ ಬೆಲೆಗೆ ಲಭಿಸುವಂತೆ ಮಾಡಿದೆ. ಇಂದು ಸನ್ಮಾನ್ಯ ಸಚಿವರು ಬಿಡುಗಡೆ ಮಾಡಲಿರುವ ಫ್ರಾನ್ಸಿಸ್ ಬುಕನನ್ ನ A Journey from Madras through the Countries of Mysore, Canara and Malabar by Sir Francis Buchanan 1807/reprint (three volumes) ಗ್ರಂಥವೂ ಅಷ್ಟೇ ಉಪಯುಕ್ತವಾಗಿದೆ.

ಜಿಲ್ಲಾ ಗ್ಯಾಸೆಟಿಯರ್‌ಗಳ ಜೊತೆಗೆ ತಾಲೂಕು ಗ್ಯಾಸೆಟಿಯರ್ ಗಳನ್ನು ಸಂಪಾದಿಸಿ ಪ್ರಕಟಿಸುವ ಮಹತ್ವದ ಯೋಜನೆಯನ್ನು ಕೈಗೊಂಡ ಇಲಾಖೆಯು ಪ್ರಯೋಗಾರ್ಥವಾಗಿ,ಮೈಸೂರು ಜಿಲ್ಲೆಯ ೭ ತಾಲೂಕುಗಳ ಗ್ಯಾಸೆಟಿಯರ್‌ಗಳ ಪ್ರಕಟಣೆಗೆ ಮುಂದಾಯಿತು. ಆ ಸಂಪುಟಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ವಿದ್ವಾಂಸರಾದ ಡಾ:ಮಂಜುಳಾ ಹುಲ್ಲಹಳ್ಳಿ (ನಂಜನಗೂಡು)ಬಿ.ಶ್ಯಾಮಸುಂದರ್ (ಹುಣಸೂರು)ಡಾ:ಪಿ.ಕೆ.ರಾಜಶೇಖರ್ (ಪಿರಿಯಾಪಟ್ಟಣ)ಶ್ರೀ ತೇ.ಸಿ.ವಿಶ್ವೇಶ್ವರ (ಕೃಷ್ಣರಾಜಪುರ)ಡಾ:ಚಿಕ್ಕಮಾದಯ್ಯ (ಮೈಸೂರು) ಹಾಗೂ ಶ್ರೀ ಎನ್.ಗಿರಿಗೌಡ (ಹೆಗ್ಗಡದೇವನಕೋಟೆ) ಅವರು ರಚಿಸಿದ್ದಾರೆ. ಟಿ;ನರಸೀಪುರ ತಾಲೂಕು ಗ್ಯಾಸೆಟಿಯರ್‌ಅನ್ನು ಇಲಾಖೆಯ ಸಂಪಾದಕರಾದ ಶ್ರೀ ಎಸ್.ರಾಜೇಂದ್ರಪ್ಪ ರಚಿಸಿದ್ದಾರೆ. ಈ ಸಂಪುಟಗಳನ್ನು ಇಂದು ಸನ್ಮಾನ್ಯ ಸಚಿವರು ಬಿಡುಗಡೆ ಮಾಡಲಿದ್ದಾರೆ. ಸಾರ್ವಜನಿಕರ ಅಭಿಪ್ರಾಯವನ್ನಾಧರಿಸಿ ಉಳಿದ ತಾಲೂಕುಗಳಿಗೂ ಗ್ಯಾಸೆಟಿಯರ್ ಸಂಪುಟಗಳನ್ನು ಹೊರತರುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ಉದ್ದೇಶ ಇಲಾಖೆಯದ್ದಾಗಿದೆ.

ಇವುಗಳ ಜೊತೆಗೆ ಇಲಾಖೆಯು ಈಗಾಗಲೇ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ಯ್ರೋತ್ತರ ಅವಧಿಯಲ್ಲಿ ಪ್ರಕಟಗೊಂಡಿರುವ ಗ್ಯಾಸೆಟಿಯರ್ ಸಂಪುಟಗಳನ್ನೊಳಗೊಂಡಂತೆ ಅನೇಕ ಮಹತ್ವದ ಕೃತಿಗಳನ್ನು ಒಳಗೊಂಡ ಸಿ.ಡಿಯನ್ನುಹೊರತಂದಿದೆ. ಅಲ್ಲದೆ ಗ್ಯಾಸೆಟಿಯರ್ ಅಂತರ್ಜಾಲ ತಾಣದಲ್ಲಿ ಗ್ಯಾಸೆಟಿಯರ್ ಗಳು ಸುಲಭವಾಗಿ ದೊರೆಯುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಹೀಗೆ ಇಲಾಖೆಯು ಪ್ರಾದೇಶಿಕ ವಿಷಯ ಕೋಶ ಸ್ವರೂಪದ ಜಿಲ್ಲಾ ಗ್ಯಾಸೆಟಿಯರ್ ಮತ್ತು ತಾಲೂಕು ಗ್ಯಾಸೆಟಿಯರ್‌ಗಳನ್ನು ನೀಡುವ ಕಾರ್ಯದಲ್ಲಿ ತೊಡಗಿದ್ದುಅದಕ್ಕೆ ತಮ್ಮೆಲ್ಲರ ಸಹಕಾರ ಸದಾಕಾಲ ಇರುತ್ತದೆ ಎಂಬ ಆಶಯ ಇಲಾಖೆಯದ್ದಾಗಿದೆ

Rating
Average: 5 (1 vote)

Comments