ಕನ್ನಡ ರತ್ನ ರಾಜರತ್ನಂ ನೆನಪಿನಲ್ಲಿ...
ಶ್ರೀ ಜಿ. ಪಿ. ರಾಜರತ್ನಂ ಅವರು ನಿಜವಾಗಿಯೂ ಕನ್ನಡದ ಒಂದು ರತ್ನವೆ ಸರಿ, `ರತ್ನನ್ ಪದಗಳ` ಬಗ್ಗೆ ಗೊತ್ತಿಲ್ಲದ ಕನ್ನಡಿಗನೇ ಇಲ್ಲ. ಜೊತೆಗೆ ಅವರ ಪದಜೋಡಣೆಯೂ ಒಂದು ವಿಶೇಷವೆ. ಅದನ್ನು ಮೆಲುಕು ಹಾಕುತ್ತಾ, ಅವರದೆ ನೆನಪಿನಲ್ಲಿ ಮೂಡಿ ಬಂದ ಈ ಸಾಲುಗಳನ್ನು ತಮ್ಮ ಮುಂದಿಡುತ್ತಿದ್ದೇನೆ
ಚಿತ್ರ ಕೃಪೆ - ಅಂತರ್ಜಾಲ
-ತಮ್ಮವ,
-ರಾಮಮೋಹನ.
ಎಂಡ ಎಂಡ್ತಿ ಪದ್ಗೊಳ್ ಬರ್ದ
ರತ್ನಂ ಕನ್ನಡ ರತ್ನ
ಪದಗಳ್ ಮಾಡ್ತವೆ ಕನ್ನಡ
ಮನದಲಿ ಅಭಿಮಾನ ಬೆಳ್ಸೊ ಯತ್ನ
ಊರ್ಹೊಗಿದ್ದ ಆಂಗ್ಲ ಮಾತ್ಗೊಳ್
ಅಡ್ಗೆ ಮನೇನೂ ಸೇರ್ತು
ಆದಂಗಾಗ್ಲಿ ಅಂತ ಇದ್ರೆ
ಚಟ್ನಿ ಗೊಜ್ನೂ ನುಂಗ್ತು
ನಮ್ಮನೆನಾಗೆ ನಂಗೋಳ್ ಮಧ್ಯೆ
ಭಾಷೆ ವ್ಯಾಜ್ಯ ತಂತು
ಶಾಲೆಗೆ ಮಕ್ಳನ್ ಸೇರ್ಸೊವಾಗ
ಆಂಗ್ಲ ಕಾನ್ಮೆಂಟ್ ಗೆಲ್ತು
ಅಪ್ಪ ಅಮ್ಮ ಪದಗಳ್ ಹೋಯ್ತು
ಮಮ್ಮಿ ಡ್ಯಾಡಿ ಬಂತು
ಚಿಕ್ಕಪ್ಪ ದೊಡ್ಡಪ್ಪ ಅಕ್ಕ ಅಣ್ಣ
ಮಕ್ಳಿಗೆ ಮರ್ತೆ ಹೋಯ್ತು.
ಎದ್ದೇಳ್ರಪ್ಪ ಕನ್ನಡ ಜನ್ಗೊಳ್
ಒಂದಾಗ್ ಒಟ್ಟಗ್ ನಿಲ್ರಿ
ಏನೆ ಆದ್ರೂ ಕನ್ನಡ ಬಿಡ್ದಂಗೆ
ಪಟ್ ಹಾಕ್ ಬಾಳ್ನಲ್ ಗೆಲ್ರಿ
Rating
Comments
ಉ: ಕನ್ನಡ ರತ್ನ ರಾಜರತ್ನಂ ನೆನಪಿನಲ್ಲಿ...
ಉ: ಕನ್ನಡ ರತ್ನ ರಾಜರತ್ನಂ ನೆನಪಿನಲ್ಲಿ...
ಉ: ಕನ್ನಡ ರತ್ನ ರಾಜರತ್ನಂ ನೆನಪಿನಲ್ಲಿ...
In reply to ಉ: ಕನ್ನಡ ರತ್ನ ರಾಜರತ್ನಂ ನೆನಪಿನಲ್ಲಿ... by kavinagaraj
ಉ: ಕನ್ನಡ ರತ್ನ ರಾಜರತ್ನಂ ನೆನಪಿನಲ್ಲಿ...
ಉ: ಕನ್ನಡ ರತ್ನ ರಾಜರತ್ನಂ ನೆನಪಿನಲ್ಲಿ...
ಉ: ಕನ್ನಡ ರತ್ನ ರಾಜರತ್ನಂ ನೆನಪಿನಲ್ಲಿ...