ನರಕವೂ ಸ್ವರ್ಗವೇ.....
ಒಬ್ಬ ಮನುಷ್ಯ ಸತ್ತು ನರಕಕ್ಕೆ ಹೋಗ್ತಾನೆ.
ಅಲ್ಲಿ ಪ್ರತಿಯೊಂದು ದೇಶಕ್ಕೂ ಅದರದೆ ಆದ ನರಕವಿರುತ್ತದೆ.
ಯಾವುದಾದರೊಂದು ಕಡಿಮೆ ಶಿಕ್ಷೆಯಿರುವ ನರಕವನ್ನು ಆಯ್ದುಕೊಳ್ಳುವುದೆಂದು ನಿರ್ಧರಿಸಿ ಮುಂದುವರಿಯುತ್ತಾನೆ.
ಆತ ಮೊದಲು ಜರ್ಮನಿ ದೇಶದ ನರಕದ ಬಳಿ ಹೋಗಿ, " ಇಲ್ಲಿ ಏನು ಮಾಡ್ತಾರೆ ?" ಎಂದು ಕೇಳ್ತಾನೆ.
" ಇಲ್ಲಿ ಮೊದಲು ಎಲೆಕ್ಟ್ರಿಕ್ ಕುರ್ಚಿ ಮೇಲೆ ಒಂದು ತಾಸು ಕೂರಿಸ್ತಾರೆ, ನಂತರ ಮತ್ತೊಂದು ತಾಸು ಮುಳ್ಳಿನ ಹಾಸಿಗೆ ಮೇಲೆ ಮಲಗಿಸ್ತಾರೆ. ನಂತರ ಜರ್ಮನಿ ಸೈತಾನ ಬಂದು ಇಡೀ ದಿನ ನಿನ್ನನ್ನು ಹೊಡೆಯುತ್ತಾನೆ " ಎಂದು ತಿಳಿಸಲಾಗುತ್ತದೆ.
ಆ ಮನುಷ್ಯನಿಗೆ ಇದು ಯಾಕೊ ಇಷ್ಟ ಆಗ್ದೆ ಮುಂದುವರಿಯುತ್ತಾನೆ.
ಅಮೇರಿಕ ದೇಶದ ನರಕ, ರಷ್ಯಾ ದೇಶದ ನರಕ ಹಾಗು ಇತರೆ ದೇಶಗಳ ನರಕಗಳನ್ನು ಪರೀಕ್ಷಿಸುತ್ತಾನೆ. ಎಲ್ಲವೂ ಜರ್ಮನಿ ದೇಶದ ನರಕದ ಹಾಗೆ ಇವೆಯೆಂದು ತಿಳಿಯುತ್ತದೆ.
ನಂತರ ಭಾರತದ ನರಕದ ಬಳಿ ಬರುತ್ತಾನೆ. ಮನುಷ್ಯರ ದೊಡ್ಡ ಸಾಲಿರುವುದನ್ನು ಕಾಣುತ್ತಾನೆ.
ಆಶ್ಚರ್ಯದಿಂದ ಕೇಳುತ್ತಾನೆ "ಇಲ್ಲಿ ಏನು ಮಾಡ್ತಾರೆ ?"
" ಇಲ್ಲಿ ಮೊದಲು ಎಲೆಕ್ಟ್ರಿಕ್ ಕುರ್ಚಿ ಮೇಲೆ ಒಂದು ತಾಸು ಕೂರಿಸ್ತಾರೆ, ನಂತರ ಮತ್ತೊಂದು ತಾಸು ಮುಳ್ಳಿನ ಹಾಸಿಗೆ ಮೇಲೆ ಮಲಗಿಸ್ತಾರೆ. ನಂತರ ಭಾರತೀಯ ಸೈತಾನ ಬಂದು ಇಡೀ ದಿನ ನಿನ್ನನ್ನು ಹೊಡೆಯುತ್ತಾನೆ " ಎಂದು ತಿಳಿಸಲಾಗುತ್ತದೆ.
" ಇದು ಬೇರೆ ದೇಶದ ನರಕಗಳ ಹಾಗೆ ಇದೆ, ಆದರೂ ಯಾಕೆ ಇಷ್ತೊಂದು ಜನ ಕಾಯುತ್ತಿದ್ದಾರೆ..?" ಎನ್ನುತ್ತಾನೆ.
" ಏಕೆಂದರೆ, ಇಲ್ಲಿನ ವಿದ್ಯುತ್ ಮಂಡಳಿ ಕರೆಂಟ್ ಇಲ್ಲದೆ ಬಹಳ ಬಳಲುತ್ತಿದೆ, ಹಾಗಾಗಿ ಎಲೆಕ್ಟ್ರಿಕ್ ಕುರ್ಚಿ ಉಪಯೋಗಿಸೋಕೆ ಆಗ್ತಾ ಇಲ್ಲ.
ಮೊಳೆಗಳನ್ನು ತರಲು ಹಣ ಸಂದಾಯವಾಗಿದೆ ಆದರೆ, ಇನ್ನು ಬಂದಿಲ್ಲ. ಹಾಗಗಿ ಈ ಹಾಸಿಗೆ ಸುಪ್ಪತ್ತಿಗೆ ಹಾಗೆ ಇದೆ ಮಲಗೋಕೆ.
ಎಲ್ಲದಕ್ಕೂ ಹೆಚ್ಚಾಗಿ, ಇಲ್ಲಿನ ಸೈತಾನ, ಸರ್ಕಾರಿ ನೌಕರ. ಆತ ಸಂಬಳದಲ್ಲಿ 18% ಹೆಚ್ಚಾಗುವವರೆವಿಗೂ ಕೆಲಸಕ್ಕೆ ಬರೋದಿಲ್ಲ, ಆದರೆ ಅದೂ ಯಾವ್ದೆ ಕಾರಣಕ್ಕೂ ನಡೆಯದ ಮಾತು.... "