ಜಂಭದಿಂದ ಬೀಗುತಿಹೆನು
ಕವನ
ಮುಂಜಾನೆಯ ಮಂಜಲ್ಲಿ ಸಖಿ ನಿನ್ನ ಕೈ ಹಿಡಿದು
ಹೂ ಹಾಸಿದ ದಾರಿಯಲ್ಲಿ ನಡೆಯುತಿರಲು..
ನಿನ್ನಂದವ ಕಂಡ ಗಿಡಮರಗಳು
ತಣ್ಣನೆ ಗಾಳಿಯ ಚಾಮರವ ಬೀಸುತಿರಲು...
ಮುತ್ತಿನಂತೆ ಜೋಡಿಸಿಟ್ಟ ಮಂಜಿನ ಹನಿಗಳು
ಪನ್ನೀರ ಸಿಂಚನವ ಮಾಡಿಸಿರಲು
ಆಗಸದಿ ರವಿಯು ನಿನ್ನಂದವ ನೋಡಲು
ಮೋಡದ ಹೊದಿಕೆಯ ಸರಿಸಿ
ನಿದ್ದೆಯಿಂದ ಎದ್ದು ಕಣ್ಣುಜ್ಜಿ ಕುಳಿತಿರಲು
ಹಕ್ಕಿಗಳು ತಂಡವ ಕಟ್ಟಿಕೊಂಡು
ಸಂಗೀತ ಕಚೇರಿ ಶುರು ಮಾಡಿರಲು
ಅವಸರವಸರವಾಗಿ ಮೊಗ್ಗುಗಳು ಹೂವಾಗಿ
ಅರಳಿ ಸಿದ್ಧವಾಗಿವೆ ನಿನ್ನ ಮುಡಿಗೇರಲು
ಜಂಭದಿಂದ ಬೀಗುತಿಹೆನು
ನೀ ನನ್ನ ಸಖಿಯಾಗಿರಲು
ಚಿತ್ರ ಕೃಪೆ : ಅಂತರ್ಜಾಲ
Comments
ಉ: ಜಂಭದಿಂದ ಬೀಗುತಿಹೆನು
In reply to ಉ: ಜಂಭದಿಂದ ಬೀಗುತಿಹೆನು by ನಂದೀಶ್ ಬಂಕೇನಹಳ್ಳಿ
ಉ: ಜಂಭದಿಂದ ಬೀಗುತಿಹೆನು
ಉ: ಜಂಭದಿಂದ ಬೀಗುತಿಹೆನು
In reply to ಉ: ಜಂಭದಿಂದ ಬೀಗುತಿಹೆನು by manju787
ಉ: ಜಂಭದಿಂದ ಬೀಗುತಿಹೆನು
ಉ: ಜಂಭದಿಂದ ಬೀಗುತಿಹೆನು
In reply to ಉ: ಜಂಭದಿಂದ ಬೀಗುತಿಹೆನು by Chikku123
ಉ: ಜಂಭದಿಂದ ಬೀಗುತಿಹೆನು