ಸೀರೆ ಉಡುವುದು ತಪ್ಪೇ?

ಸೀರೆ ಉಡುವುದು ತಪ್ಪೇ?

ಸೀರೆ ಉಡುವುದು ತಪ್ಪೇ? ಇದೇನಪ್ಪ ಭಾರತದಲ್ಲಿ ಅದು ಕರ್ನಾಟಕದಲ್ಲಿ ಇಂಥಹ ಪ್ರಶ್ನೆ ಕೇಳುತ್ತಿದ್ದಾನಲ್ಲ ಎಂದುಕೊಳ್ಳುತ್ತಿದ್ದೀರಾ.  ಹೌದು ಸ್ವಾಮಿ ಅದಕ್ಕೊಂದು ಕಾರಣ ಇದೆ. ನನ್ನಾಕೆ ಮದುವೆಯ ನಂತರ ಸೀರೆ ಬಿಟ್ಟು ಬೇರೆ ಬಟ್ಟೆ ತೊಡುವುದಿಲ್ಲ ಎಂದು ನಿರ್ಧರಿಸಿದ್ದಳು ಹಾಗೆಯೇ ನಡೆದುಕೊಳ್ಳುತ್ತಿದ್ದಾಳೆ ಕೂಡ. ಅದು ನನ್ನನ್ನು ಸೇರಿ ನನ್ನ ತಂದೆ ತಾಯಿಗೆ ಕೂಡ ಸಂತೋಷದ ವಿಷಯ. ಆದರೆ ನೆರೆಹೊರೆಯವರು, ಇತರೆ ಸಂಬಂಧಿಗಳು ಎಲ್ಲೇ ಹೋದರು ಅವಳನ್ನು ವಿಚಿತ್ರವಾಗಿ ನೋಡುತ್ತಾರೆ ಹಾಗೆಯೇ ಅದೇನೋ ದೊಡ್ಡ ಅಪರಾಧವೆಂಬಂತೆ ವರ್ತಿಸುತ್ತಾರೆ. ಜೊತೆಯಲ್ಲಿ ಯಾಕೆ ಸೀರೆ ಉಡುತ್ತೀಯ ನಿನಗಿನ್ನೂ ಚಿಕ್ಕ ವಯಸ್ಸು ಚೂಡಿದಾರ್ ಹಾಕಿಕೊಳ್ಳಬಹುದಲ್ಲವೇ? ಎಂದು ಉಚಿತ ಸಲಹೆ ನೀಡುತ್ತಾರೆ. ನೆನ್ನೆ ಒಂದು ಕಡೆ ಹೋಗಿದ್ದಾಗ ಆಕೆಯ ಗೆಳತಿ ಕೇಳಿದಳಂತೆ ನೀನು ಸೀರೆ ಉಡುತ್ತೀಯಲ್ಲ ನಿನ್ನನ್ನು ವಿಚಿತ್ರವಾಗಿ ನೋಡುತ್ತಾರಲ್ಲ ನಿನಗೆ ಬೇಸರವಾಗುವುದಿಲ್ಲವೇ ಎಂದು ಕೇಳಿದಳಂತೆ. ಅದಕ್ಕೆ ನನ್ನಾಕೆ "ಸೀರೆ ನಮ್ಮ ಸಂಪ್ರದಾಯ ನನಗೆ ಅದನ್ನು ಉಡುವುದು ಖುಷಿಯ ಸಂಗತಿ. ಅದು ಅಲ್ಲದೆ ನನಗೆ ಅದು ಆರಾಮದಾಯಕ ಕೂಡ ಹಾಗೆಯೇ ನಮ್ಮ ಮನೆಯಲ್ಲಿ ಯಾರಿಗೂ ಅಭ್ಯಂತರವಿಲ್ಲ. ಹಾಗಿದ್ದಲ್ಲಿ ನನಗೇಕೆ ಬೇಸರ ಎಂದು ಉತ್ತರಿಸಿದಳಂತೆ.ಇದೇನು ಸ್ವಾಮಿ ಸೀರೆ ಉಟ್ಟರೆ ಅದು ತಪ್ಪೇ? ಎಲ್ಲಿಗೆ ಬರುತ್ತಿದೆ ನಮ್ಮ ಸಂಸ್ಕೃತಿ?

Rating
No votes yet

Comments