ವಿಶ್ವ ಗೋ ಸಮ್ಮೇಳನ -ಶ್ರೀ ರಾಮಚ೦ದ್ರಾಪುರ ಮಠ, ಹೊಸನಗರ,ಶಿವಮೊಗ್ಗ ಜಿಲ್ಲೆ
ಜಗದೊಳಿತಾಗಿ ಜಗನ್ಮಾತೆಯ ಜಾಗತಿಕ ಹಬ್ಬ "ವಿಶ್ವ ಗೋ ಸಮ್ಮೇಳನ" ಎಪ್ರೀಲ್ ತಿ೦ಗಳ 21 ರಿ೦ದ 29, 2007 ರವರೇಗೆ ಶ್ರೀ ರಾಮಚ೦ದ್ರಾಪುರ ಮಠ, ಶಿವಮೊಗ್ಗ ಜಿಲ್ಲೆ, ಕರ್ನಾಟಕ ಇಲ್ಲಿ ಶ್ರೀಮಜ್ಜಗದ್ಗುರು ಶ೦ಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸ೦ಕಲ್ಪ ಮತ್ತು ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿಶ್ವ ಗೋ ಸಮ್ಮೇಳನ ಜಗದೆಲ್ಲೆಡೆಯ ಗೋ ಪ್ರೇಮಿ ತಜ್ನರು, ವಿಜ್ನಾನಿಗಳು, ಗೋಪಾಲಕರು, ಕೃಷಿಕರು, ನೇತಾರರು, ಯೋಜಕರು, ಸಾಧು ಸ೦ತರು ಸಮ್ಮಿಳಿತಗೊಳ್ಳಲಿರುವ ಕ೦ಡು ಕೇಳರಿಯದ ಅತಿದೊಡ್ಡ ಐತಿಹಾಸಿಕ ಹಬ್ಬ. ಗೋವಿನ ಕುರಿತು ಏನೆಲ್ಲ ಹೇಳಬಹುದೋ, ಏನೆಲ್ಲ ತೋರಿಸಬಹುದೋ, ಏನೆಲ್ಲ ಸೇವೆ ಮಾದಬಹುದೋ ಅವೆಲ್ಲವೂ ಗೋ ಸಮ್ಮೇಳನದಲ್ಲಿವೆ.
" ಪುಣ್ಯಕೋಟಿಯುಳಿಸುವ...ಕೋಟಿಪುಣ್ಯಗಳಿಸುವ.."
ಗಾವೋ ರಕ್ಶ೦ತಿ ರಕ್ಶಿತಾ: