ಕಾಲೇಜ್ ‍‍ ಕನವರಿಕೆ!

ಕಾಲೇಜ್ ‍‍ ಕನವರಿಕೆ!

ಕವನ

ಇಷ್ಟು ಬೇಗ ಏಳಬಾರದೆಂದುಕೊಂಡೆ ,
ಹಂಗೂ-ಹಿಂಗೂ time ನೋಡಿದೆ ಕಣ್ಮುಚ್ಚಿಕೊಂಡೆ!
ಗಂಟೆ ಎಂಟಾಗಿತ್ತು, ಇನ್ನು ಕತ್ತಲಾಗಿತ್ತು
MorningO,EveningO ಸ್ವಲ್ಪ ಲೇಟಾಗಿ ಗೊತ್ತಾಯ್ತು
ರಾತ್ರಿ cooling glass ತೆಗೆಯೋದು ಮರೆತುಹೋಗಿತ್ತು.

ಚಳಿ ತುಂಬಾ ಇದ್ರು ಸ್ನಾನಕ್ಕೆ ಬಿಸಿ ನೀರಿಲ್ಲ
ಬಿಸಿ ಕಾಫಿ ಕುಡಿದ್ರು ತುಟಿ ಯಾಕೋ ಸುಡಲೇ ಇಲ್ಲ
Books ಇಲ್ದಿದ್ರೂ ,bag ತಗೊಂಡು ಕಾಲೇಜ್ ಗೆ ಹೋದೆ
Exam-hall ನಲ್ಲಿ answer ನ ಕದಿಯೋಕೆ ನೋಡ್ದೆ !!

Theory ಅಂತೆ -practicle  ಅಂತೆ ನಾನೆಲ್ಲ ಮರೆತಾಗಿತ್ತು
Spicey ಪಾನಿಪುರಿ ನೆನೆದು ಬಾಯಲ್ಲಿ ನೀರು ಬರ್ತಿತ್ತು.
A ,B ,C ,D ಬಿಟ್ರೆ ಬೇರೆ ಪ್ರಶ್ನೆ ನನಗೆ ಕಾಣಿಸಲಿಲ್ಲ
ಮೂಲೆಯಲ್ಲಿ supervisor  ನಗ್ತಿದ್ದ ಈ ವರ್ಷ ನೀನು Pass ಆಗಲ್ಲ!!!

ಮನೆಗೆ ಬಂದು sad ಆಗಿ ಕಥೆ ಹೇಳಿದೆ
ಅಮ್ಮ ಕೆನ್ನೆಗೆ ಹೊಡೆದಾಗ ಕಣ್ಬಿಟ್ಟು ಕನವರಿಸಿದೆ
ಕನಸಲ್ಲೂ ಕಾಲೇಜು - Exam ಭೂತ
ಎಲ್ಲರಿಗು ಇದು common चलो चलता !!!!