ಯಾರ ತಪ್ಪು
ನನಗೆ ಸಂಪದದ ಪರಿಚಯವಾಗಿದ್ದೇ ಸತೀಶ್ ಸಾರ್ ಅವರಿಂದ ಅವರಿಗೆ ಒಂದು ಒಳ್ಳೆಯ ಸ್ನೇಹಿತ ಅಂದರೆ ನನ್ನ ಪ್ರಕಾರ ಈ ಸಂಪದ. ನನಗೆ ತುಂಬಾನೆ ಇಷ್ಟ ಸಂಪದದಲ್ಲಿ ನೀವೆಲ್ಲಾ ಬರೆಯುವ ಕವನ, ಲೇಖನ, ನುಡಿಮುತ್ತು ವೈಯಕ್ತಿಕ ಅನುಭವಗಳು ಎಲ್ಲಾ ತುಂಬಾ ಇಷ್ಟ ಎಲ್ಲರ ಬರಹಕ್ಕೂ ಪ್ರತಿಕ್ರಿಯೆ ನೀಡಬೇಕು ಅಂತ ನನಗೆ ಬಹಳ ಇಷ್ಟ ಆದರೆ ನನ್ನ ಕೆಲಸದ ಮದ್ಯೆ ನನಿಗೆ ನೋಡೋಕೆ ಆಗುತ್ತೆ ಆದರೆ ಪ್ರತಿಕ್ರಿಯೆ ಕೊಡೋದಕ್ಕೆ ಆಗ್ತಾ ಇಲ್ಲ. ಇಲ್ಲಿ ಎಲ್ಲರಿಗೂ ಒಳ್ಳೆಯ ಒಂದು ವೇದಿಕೆ ಇದೆ ಯಾರಿಗೆ ಯಾರು ಪರಿಚಯ ಇಲ್ಲ ಅದರೆ ಎಲ್ಲರೂ ನಮ್ಮ ಅನುಭವನ ಮಾತ್ರ ಹಂಚಿಕೊತಿವಿ.
ನಾನು ನನ್ನ Friend ಬಗ್ಗೆ ಹೇಳಬೇಕು ಅಂತ ಇವತ್ತು ಇಲ್ಲಿ ಕೂತಿದ್ದೀನಿ. ನನಿಗೆ ಬಹಳ ಅತ್ಮೀಯ ಗೆಳತಿ ಅವಳು. ಅವಳ ಪ್ರತಿಯೊಂದು ವಿಷಯನೂ ನನ್ನ ಹತ್ತಿರ ಹಂಚಿಕೋತಾಳೆ ಆದರೆ ಅವಳ ಸಮಸ್ಯೆಗೆ ನಾನು ಪರಿಹಾರ ಹೇಳೋದಕ್ಕೂ ಅಗ್ತಾ ಇಲ್ಲ. ಸಹಾಯ ಮಾಡೋಕು ಅಗ್ತಾ ಇಲ್ಲ ಯಾಕೆ ಅಂದರೆ ನಾನು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರೋವಾಗ ಅವಳಿಗೆ ಹೇಗೆ ಸಹಾಯ ಮಾಡಲಿ. ಅದಕ್ಕೆ ನಿಮ್ಮಲ್ಲಿ ಅವಳಿಗೆ ಏನಾದರು ಸಲಹೆ ಇದ್ದರೆ ಹೇಳಿ ಸಹಾಯದ ಅವಶ್ಯಕತೆ ಇಲ್ಲ.
ಅವಳ Family ನಲ್ಲಿ ಅವಳ ಇಬ್ಬರು ಅಣ್ಣಂದಿರು, ಅವಳಿಗೆ ಇಬ್ಬರು ಅಕ್ಕಂದಿರು, ಅಮ್ಮ ಅಪ್ಪ ಎಲ್ಲಾ ಇದ್ದರು ಸ್ವಲ್ಪ ಮಟ್ಟಿಗೆ ಒಳ್ಳೆ ಅನುಕೂಲವಾಗಿದ್ದ ಕುಟುಂಬ ಅಪ್ಪ ಸರ್ಕಾರಿ ನೌಕರಿಯಲ್ಲಿದ್ದರು. ಅಮ್ಮ ಚೆನ್ನಾಗಿದ್ದರು. ಆದರೆ ಅವಳು Final year BA ಮಾಡೋವಾಗ ಅವಳ ದೊಡ್ಡ ಅಣ್ಣನಿಗೆ ಉಷಾರಿಲ್ಲದೆ ಮಲಗಿದ. ಅಮ್ಮನು ಹಾಸಿಗೆ ಇಡಿದರು. ಅಪ್ಪ ನಿವೃತ್ತಿ ಹೊಂದಿ ಮನೆಗೆ ಬಂದರು ಬಂದ ಹಣ ಎಲ್ಲಾ ಅಸ್ಪತ್ರೆಗೆ ಹೋಯಿತು. ಉಳಿದ ಹಣದಲ್ಲಿ ಹೇಗೊ ಒಬ್ಬಳು ಅಕ್ಕನಿಗೆ ಮದುವೆ ಆಯ್ತು. ಸ್ವಲ್ಪ ಸಮಯದಲ್ಲಿ ಅವಳ ದೊಡ್ಡಣ್ಣ ತೀರಿಹೋದ. ಅಮೇಲೆ ಇನ್ನೊಬ್ಬ ಅಣ್ಣನಿಗೆ ಮದುವೆನು ಆಯ್ತು. ಏನಾಯ್ತೊ ಗೊತ್ತಿಲ್ಲ ಅವಳ ಅಣ್ಣ ಮದುವೆ ಆಗಿ ಸ್ವಲ್ಪನೇ ದಿನದಲ್ಲಿ ಅಮ್ಮ ಹಾಸಿಗೆ ಇಡಿದು ಬಿಟ್ಟರು ಅಮೇಲೆ ಅವರು ಮತ್ತೆ ಈ ಪ್ರಪಂಚ ನೋಡಲೇ ಇಲ್ಲ. ಅಮ್ಮ ಹೋಗಿ ಕೇವಲ 3 ತಿಂಗಳಲ್ಲಿ ಅಣ್ಣ ಹೋಗಿಬಿಟ್ಟ. ನಾನು ನಿಮಗೆ ಹೇಳೋದು ಮರೆತೆ ಅವಳ ಅಪ್ಪ ಮಹಾನ್ ಬೇಜವಾಬ್ದರಿ ಮನುಷ್ಯ ಅವಳ ಅಮ್ಮ ಹೇಗೋ ಮನೆ ನಿಬಾಯಿಸಿಕೊಂಡು ಹೋಗುತ್ತಿದ್ದರು. ಅಣ್ಣ ಹೋದ ಮೇಲೆ ಅವಳು ಬಾಳು ಪಾಪ ಅನ್ಸುತ್ತೆ ಇನ್ನು ಮದುವೆ ಆಗೋ ಒಬ್ಬ ಅಕ್ಕೆ ಇದಾಳೆ ಅಪ್ಪ ಎಲ್ಲೂ ಹುಡುಗನ್ನ ಹುಡುಕೋದಿಲ್ಲ. ಇವಳೇ ಯಾರನ್ನಾದರು ಕೇಳಿ ಮನೆಗೆ ಹುಡುಗನ್ನ ಕಡೆವರನ್ನ ಕರೆಸಿದರೆ ಮನೆಯಲ್ಲಿ ಜಗಳ ಮಾಡ್ತಾರೆ. ಬೇಡ ಬದುಕು ಅನ್ನಿಸುತ್ತಾ ಅವರ ರಿಲೇಷನ್ ನಲ್ಲಿ ಎಲ್ಲಾ ಹೇಗಿದ್ದರು ನಿಮ್ಮ ಅಪ್ಪ ನಿಮಗೆಮದುವೆ ಮಾಡೋದಿಲ್ಲ ನೀವೇ ಯಾರನ್ನಾದರು ನೋಡ್ಕೋಂಡು ಮದುವೆ ಮಾಡ್ಕೊಳ್ಳೋದು ಅಷ್ಟೆ ಅಂತ ವ್ಯಂಗ್ಯವಾಗಿ ಮಾತಾಡ್ತಾರೆ. ಇಲ್ಲಿ ಅವಳ ತಪ್ಪು ಏನು ಅಂತ ನನಿಗೆ ಗೊತ್ತಾಗಲೇ ಇಲ್ಲ ಅವಳಿಗೆ ಯಾರನ್ನು ಪ್ರೀತಿಸಬೇಕು ಅಂತ ಅನ್ನಿಸಲಿಲ್ಲ . ಅಮ್ಮನಿಗೆ ಅಣ್ಣನಿಗೆ ಅವಳ ಮದುವೆ ಮಾಡೋಕೆ ಅಯಸ್ಸು ಇಲ್ಲ. ಅಪ್ಪನಿಗೆ ಅಸಕ್ತಿ ಇಲ್ಲ. ಹೇಗೋ ಮದುವೆ ಆಗೋಕೆ ಅವಳಿಗೆ ಇಷ್ಟ ಇಲ್ಲ. ಇಲ್ಲಿ ಯಾರ ತಪ್ಪು ಗೊತ್ತಿಲ್ಲ. ನೀವೇ ಹೇಳಿ
Comments
ಉ: ಯಾರ ತಪ್ಪು