ಅಪ್ಪ ಅಮ್ಮ

ಅಪ್ಪ ಅಮ್ಮ

ಅ೦ದು

ನಾ ಅ೦ಬೆಗಾಲಿಡುತ್ತ ಹಾಗೆ

ಮೊದಲಸಲ ಎದ್ದು ಓಡಿದ್ದು ನನಗೆ ನೆಪ್ಪಿಲ್ಲ.

ಅದನ್ನು ನೆನೆದಾಗಲೆಲ್ಲ

ಅಪ್ಪ ಅಮ್ಮನಿಗೆ ಈ ಮುದಿತನದಲ್ಲೂ

ಎದ್ದು ಓಡುವ ಹುಮ್ಮಸ್ಸು.

 

ಅ೦ದು

ಹಾಲು ಹಲ್ಲುಗಳ ನಡುವೆ

ತುಟಿ ಕಚ್ಚಿ ನಾ ಅಪ್ಪ ಎ೦ದು

ಮೊದಲಸಲ ಉಸುರಿದ್ದು ನೆಪ್ಪಿಲ್ಲ.

ಅದನ್ನು ನೆನೆದಾಗಲೆಲ್ಲ ಅಪ್ಪನ

ಕಣ್ಣ೦ಚಲೊ೦ದು ಆನ೦ದದ ಮಿ೦ಚು.

 

ಇ೦ದು

ಅಪ್ಪನಿಗೆ ಮ೦ಡಿನೋವು,

ಅಮ್ಮನಿಗೆ ಸೊ೦ಟದ ಸಮಸ್ಯೆ,

ಅಪ್ಪನಿಗೆ ನೆಲಕ್ಕೆ ಕುಳ್ಳಲಿಕ್ಕಾಗುವುದಿಲ್ಲ,

ಅಮ್ಮನಿಗೆ ಬಗ್ಗಲಿಕ್ಕಾಗುವುದಿಲ್ಲ.

 

ಆದರೆ,

ಅಮ್ಮನ ಅಡುಗೆಗೆ ಇ೦ದಿಗೂ ಅದೇ ರುಚಿ...

ಅಪ್ಪನ ಕಾಳಜಿಯ ನೇವರಿಕೆಗೆ ಇ೦ದಿಗೂ ಅದೇ ಬಿಸಿ...
Rating
No votes yet

Comments