ಕಂಡೆ ನಾ ಗೋವಿಂದ

ಕಂಡೆ ನಾ ಗೋವಿಂದ

ಕವನ

 

ಕಂಡೆ ನಾ ಗೋವಿಂದನ ತಿರುಮಲಗಿರಿಯ

ಆನಂದ ನಿಲಯದಿ ಕಂಡೆ ನಾ ಗೋವಿಂದನ

ಕಂಡೆ ನಾ ಗೋವಿಂದನ ತಿರುಮಲಗಿರಿಯ

ಆನಂದ ನಿಲಯದಿ ಕಂಡೆ ನಾ ಗೋವಿಂದನ

 

ವೃಷಭಾದ್ರಿಅಂಜನಾದ್ರಿ ನೀಲಾದ್ರಿ,ಗರುಡಾದ್ರಿ

ಶೇಷಾದ್ರಿ, ನಾರಾಯಣಾದ್ರಿ ವೆಂಕಟಾದ್ರಿ ಎಂಬ

ಏಳು ಬೆಟ್ಟಗಳ ಮೇಲೆ ನಿಂತಿರುವ ಕಲಿಯುಗ ದೈವ

ಅನಾಥರಕ್ಷಕ ಗೋವಿಂದನ ನಾ ಕಂಡೆ..

 

ಕರಗಳಲ್ಲಿ ಶಂಖ ಚಕ್ರವ ಹಿಡಿದು

ವಕ್ಷಸ್ಥಳದಿ ಶ್ರೀದೇವಿ ಭೂದೇವಿಯರು ನೆಲೆಸಿರುವ

ಅಭಯ ಹಸ್ತವ ನೀಡುತ ನಿಂತಿರುವ

ಪ್ರಸನ್ನಮೂರ್ತಿ ಗೋವಿಂದನ ನಾ ಕಂಡೆ..

 

ಬೇಡಿ ಬರುವ ಭಕ್ತಜನರ ಮೊರೆಗಳ ಆಲಿಸುತ

ಕಷ್ಟಗಳ ಕಳೆದು ಸಂತೋಷವ ನೀಡುತ

ಆನಂದ ನಿಲಯದಿ ನಿಂತಿರುವ ಕರುನಾಸಾಗರ

ಗೋವಿಂದನ ನಾ ಕಂಡೆ...

Comments