ಪ್ರಶಸ್ತಿಗೆ ಒಡಕುದನಿ

ಪ್ರಶಸ್ತಿಗೆ ಒಡಕುದನಿ

ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿ ಸಂದಿರುವ ಬಗ್ಗೆ ನಾಡು-ನುಡಿಯ ಬಗ್ಗೆ ಹೆಮ್ಮೆಪಡುವವರಿಗೆ ಸಹಜವಾಗಿಯೇ ಸಂತೋಷವಾಗಿದೆ. ಚಂದ್ರಶೆಖರ ಕಂಬಾರರಿಗೆ ಈ ಪ್ರಶಸ್ತಿ ಸಂದಿರುವ ಈ ಸಂತೋಷಕ್ಕೆ ಸರ್ವಾನುಮತವಿಲ್ಲದೆ ಒಡಕು ದನಿಯೂ ಕೇಳಿಸಿದೆ. ಹಾಲಿಗೆ ಹೆಪ್ಪು ಕೊಡುವ ಬದಲು ಹುಳಿ ಹಿಂಡುವ ವೆನಿಗರ್ ಮನಸ್ಸು, ಇದು. ಚಂದ್ರಶೇಖರ ಕಂಬಾರರಿಗೆ ಪ್ರಶಸ್ತಿ ಬಂತೆಂದರೆ, ಕನ್ನಡದಲ್ಲಿ ಇನ್ನಾರೂ ಆ ಮಟ್ಟದ ಸಾಹಿತ್ಯ ಸಾಧಕರು, ರಂಜಕರೂ ಇಲ್ಲವೇ ಇಲ್ಲವೆಂದು ಅರ್ಥೈಸಿ ಜಗಳಕ್ಕಿಳಿಯುವ ಅಗತ್ಯವಿಲ್ಲ. ಸಾಹಿತ್ಯವಾಗಲೀ ಇತರ ಯಾವ ಕಲೆಯೇ ಆಗಲಿ ನವನವೋನ್ಮೇಷಿಯಾದದ್ದು. ಹೊಸತನದ ಸ್ವಂತಿಕೆ ಇದರ ಜೀವಾಳ. ’ಯುಗಪುರುಷ’ - Trend setter - ಎನ್ನಬಹುದಾದವರಿಗೆ ಸಂದಾಯವಾಗಿ ಸಾರ್ಥಕವಾಗುವಂಥದು, ಪ್ರಶಸ್ತಿ. ಜಾನಪದ ಕತೆ, ವಸ್ತು, ಶೈಲಿ, ಪ್ರಕಾರ, ಮತ್ತು ಪರಂಪರೆಗೆ ಹೊಸ ಸತ್ವವಿತ್ತು ಸ್ವಂತಿಕೆ ನೀಡಿ ಸಜೀವಗೊಳಿಸಿರುವುದು ಕಂಬಾರರ ಸಾಹಿತ್ಯಿಕ ಸೃಜನಶೀಲತೆ. ಮಡಿವಂತ ಕೃತಕಿಗಳಿಗೆ ಜಾನಪದವೆನ್ನುವುದೇ "ಶೂದ್ರ" ಎನಿಸಬಹುದು. ಕನ್ನಡದ ಅಂಥ ಶೂದ್ರತ್ವದ ಅಸ್ತಿತ್ವ, ಸಾಮರ‍್ಥ್ಯ, ಸಾರ್ಥಕ್ಯಗಳನ್ನು ಕಾಣ್ವರುಗಳಿಗೆ ತೋರಿಸಿಕೊಟ್ಟವರು ಕಂಬಾರ, ತೇಜಸ್ವಿ, ದೇವನೂರು ಇತ್ಯಾದಿಗಳು. ಕನ್ನಡಕ್ಕೆ ಒಂಭತ್ತನೇ ಜ್ಞಾನಪೀಠ ಬರುವುದೇ ಆದರೆ ಅದು, ದೆವನೂರು ಮಹದೇವರಿಗೆ ಸಲ್ಲಬೇಕು!

Rating
No votes yet

Comments