-ಜ್ವರ-

-ಜ್ವರ-

ಕವನ
ಲಗ್ಗೆ ಇಟ್ಟರು ವೈರಸ್ ಶತ್ರುಗಳು
ಏಳು ಸುತ್ತಿನ ಕೋಟೆಗೆ ಈ ತಿ೦ಗಳು
ನುಗ್ಗಿದೊಡನೆ ನಾ ಭಯದಲ್ಲಿ ನಡುಗಿದೆ,
ನೋವಿನಲಿ ಎಲ್ಲರಲೂ ಸಿಡುಕಿ ಗುಡುಗಿದೆ
 
ವೈರಸ್ ಮೇಲೆ ಸಾದ್ಯವೇ ನನ್ನ ಸಿಡುಕಾಟ,
ಶಕ್ತಿ ಇಲ್ಲದೇ ನಡೆಯಲಿಲ್ಲ ಯಾವ ನನ್ನಾಟ
ವ್ಯರ್ಥವಾಯಿತು ಪ್ರೀತಿಯ ಮನೆಮದ್ದಿನ ಶಾಸ್ತ್ರ
ವೈದ್ಯರ ಬಿಲ್ಲಿನಿ೦ದ ಹೊಕ್ಕಿತು ಮಾರಕ ಬ್ರಹ್ಮಾಸ್ತ್ರ
 
ರಣರ೦ಗವಾಯಿತು ನನ್ನ ಹೊಟ್ಟೆಯೆ೦ಬ ರಾಜ್ಯ
ಬ್ರಹ್ಮಾಸ್ತ್ರದ ಶಾಖಕೆ ನಲುಗಿತು ಸಾಮ್ರಾಜ್ಯ
ಬಳಲಿ ಬೆ೦ಡಾದರು ನನ್ನೊಳಗಿನ ಪ್ರಜೆ
ಶತ್ರು ವಿನಾಷಕೆ ಈ ಮದ್ದಿನ ನೋವಿನ ಸಜೆ
 
ಮದ್ದಿನ ಶೌರ್ಯದಿ೦ದ ಮುಗಿಯಿತು ಯುದ್ದ
ಶತ್ರು ಹೋದ೦ತೆ ಕ೦ಡರು ದೇಹವಿಲ್ಲ ಶುದ್ದ
ಅರಿತೆ ಈ ಶತ್ರುಗಳು ನನ್ನೊಳಗೇ ಇಹರು
ಸರಿಯಾಗಿ ಬದುಕೋ ಮೂಢ ಎ೦ದು ತಿಳಿಸಿಹರು
 
ನಾನೆಲ್ಲಿ ಕೇಳುವೆ, ಬಾಯಿರುಚಿಗೆ ಮತ್ತೆ ಹೋಟೆಲ್ ದರ್ಬಾರು
ಅರಿತೋ ಅರಿಯದೇಯೋ ಕುಡಿವೆ ಕಲುಶಿತ ನೀರು
ಬೇಡವೆ೦ದರೂ ಒಳಹೊಕ್ಕುವುದು ಪೇಟೆಯ ವಿಷಗಾಳಿ
ಹಣ್ಣುತರಕಾರಿಯಿ೦ದಲೂ ಅಗುವುದ೦ತೆ ಕ್ರಿಮಿಗಳ ದಾಳಿ!
 
ಮತ್ತೆ ಪಾಠ ಕಲಿಸಲು ಎದ್ದು ನುಗ್ಗಿ ಬರುವರು
ನುಗ್ಗಿದೊಡನೆ ದೇಹಕೆ ಚಳಿ,ನೋವ ತರುವರು
ಆ ಜ್ವರಕೆ ನಾ ಮತ್ತೆ ಆಗುವೆ ಸಿಕ್ಕಾಪಟ್ಟೆ ಡಲ್ಲು
ಇದೆಯಲ್ಲವೇ ರಕ್ಷಣೆಗೆ ನಮ್ಮ ಡಾಕ್ಟರ ಬಿಲ್ಲು*
 
-ಸುಧೀ೦ದ್ರ ಚಡಗ
*-ಬಿಲ್ಲು/ಬಾಣ

Comments