ಜನಿಸಿದೆ ನಿನಗೆ ಮಗುವಾಗಿ,ಈ ದೇಶಕೆ ಸತ್ ಪ್ರಜೆಯಾಗುವೆನೆ?
ಜನಿಸಿದೆ ನಿನಗೆ ಮಗುವಾಗಿ,ಈ ದೇಶಕೆ ಸತ್ ಪ್ರಜೆಯಾಗುವೆನೆ?
ನೂರಾರು ಕನಸ ಕಂಡ ಕಣ್ಣ್ ಗಳ ರಕ್ಷಣೆಗೆ ರೆಪ್ಪೆಯಾಗುವೆನೆ?
ದೇಶವಿದು ವಿವಿಧತೆಯಲಿ ಐಕ್ಯತೆ ಸಾರುತಿಹುದು ಕವಿತೆಗಳಲಿ
ಭ್ರಸ್ಟತೆ,ಮತಾಂಧತೆಗಳೆ ಕೆಕೆ ಹಾಕುತಿಹವು ನೈಜತೆಯಲಿ
ಜನನದ ಮೊದಲು ನೀನು ಹೇಳಿದ ದೇಶಭಕ್ತಿ ಕವಿತೆಗಳು,ಕಥೆಗಳು ನಿಜವೆ?
ಈಗ ನಾನು ಕಾಣುತಿಹ,ಆ ನಿನ್ನ ಕನಸಿನ ರಾಮ ರಾಜ್ಯದ ದೇಶ ಮಾಯವಾಗಿದೆಯೆ?
ಕಡು ಬಡತನದಲಿ ,ನನ್ನಂತಹ ಸಾವಿರಾರು ಹಸುಗುಸುಗಳ ಜನನ ನಿತ್ಯ
ಇಂತಹ ನರಕದ ಮಾರಣ ಕೂಪಕ್ಕೆ ಬೇಕಿತ್ತೇ ನಿನ್ನ ತಾಯಿತನದ ಔಚಿತ್ಯ?
ನಿನ್ನ ಗರ್ಭದಲಿ ನಲಿದು ಕುಣಿದೆ, ಭಾರತಾಂಬೆಯ ಮಡಿಲಲಿ ಜನಿಸಲು ನಾನು
ಭ್ರಸ್ಟ ರಾಜಕಾರಣಿಗಳೆಂಬ ರಕ್ಕಸರ ಮುಸ್ಠಿಯಲಿ ನಲುಗುತಿರಲು ಭಾರತಾಂಭೆ
ಏನು ಮಾಡುವುದು ತೋಚದೆ ಕಂಬನಿ ಮಿಡಿಯುತ್ತಾ ಕೈ ಕಟ್ಟಿ ಕುಳಿತಿರುವೆ ನಾನು
ತಾಯಿತನದ ಸಂಭ್ರಮವ ಸಂಭ್ರಮಿಸದಿರು ನೀನು,ನನ್ನ ಭವಿಷ್ಯ ಈ ವಿಷಮ
ಸ್ಥಿತಿಯಲ್ಲಿ ನೀ ಕಾಣಿಸಿದ ಕನಸಿನ ಹಾಗೆ ನಿರೂಪಿಸಲು ಶಕ್ಯವೇನು ?
ಗಾಂಧಿ,ನೆಹರು,ಸುಭಾಸ,ಅಣ್ಣ ಜನಿಸಿದ ಅಮೋಘ ದೇಶವಿದು ಎಂದು ಕೊಚ್ಚಿಕೊಂಡೆ ಅಂದು ನೀನು?
ಭ್ರಸ್ಟತೆ,ಅರಾಜಕತೆಯ ತಾಣವಾಗಿರಲು ಇಂದು,ಘ್ಹೊರ ಸುಳ್ಳು ಹೇಳಿ ನನಗೆ ಜನ್ಮವಿತ್ತ ಪರಿ ಸರಿಯೆನು?
ಧರ್ಮಸಹಿಸ್ಣುತೆ, ಆಜಾತ ಶತ್ರುಗಳ ನಾಡಿನಲಿ ಜನ್ಮವಿಯುತ್ತಿರುವ ನೀನು ಧನ್ಯವೆಂದು ಕೊಂಡಾಡಿದೆ ನೀನು
ಧರ್ಮದ ಹೆಸರಿನಲಿ ನೆಡೆಯುವ ಕ್ರೌರ್ಯ,ಉಗ್ರವಾದದ ಮಧ್ಯ ನಿನ್ನ ತಾಯಿತನಕ್ಕಾಗಿ ನನ್ನ ಬಲಿಕೊಟ್ಟಿರುವೆ ನೀನು
ಜನನವಾಗಿದೆ ವೀರ ಭೂಮಿಯಲಿ,ಹಿಂದೆ ಸರಿಯುವ ಮಾತಿಲ್ಲ
ದೇಶಕ್ಕಾಗಿ ಹೊರಾಡುವೆ ನಿತ್ಯ, ವೀರ ಮರಣವಾಗಲಿ ಮರುಗದಿರು ನೀನು
ನಿನ್ನ ಕಂದನಾಗಿ ಜನಿಸಿದ ನಾನು ಭಾರತಾಂಬೆಯ ಮಗನಾಗಿ ಸಾಯುವೆ
ನೀನು ಕಂಡ ರಾಮ ರಾಜ್ಯದ ಕನಸು ನನಸಾಗುವವರೆಗು ಹೋರಾಡುವೆ.
ಭ್ರಸ್ಟತೆ,ಅರಾಜಕತೆ ಹಿಮ್ಮೆಟ್ಟಿಸಿ ನಿನ್ನ ಕನಸು ನನಸುಮಾಡಿಯೇ ನಗೆಬಿರುವೆ
ಸ್ನೇಹದಿಂದ
ಮಹಾಂತೇಶ(ಮಾನು)
Comments
ಉ: ಜನಿಸಿದೆ ನಿನಗೆ ಮಗುವಾಗಿ,ಈ ದೇಶಕೆ ಸತ್ ಪ್ರಜೆಯಾಗುವೆನೆ?