ವಿಸ್ಮಯ ಚಿಂತನ ಮಿಲನ - 4
ಕರ್ನಾಟಕದ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿರುವ ಮೈಸೂರಿನ ವಿಸ್ಮಯ ಪ್ರಕಾಶನವು ಕಳೆದ ಮೂರು ತಿಂಗಳುಗಳ ಹಿಂದೆ ಅಂದರೆ ಜೂನ್ ನಲ್ಲಿ "ಚಿಂತನ ಮಿಲನ"ಹೆಸರಿನಲ್ಲಿ ಮೈಸೂರಿನಲ್ಲಿ ಚಿಂತನಾ ವೇದಿಕೆಯೊಂದನ್ನು ಆರಂಭಿಸಿತು. ಈ ಸಂವಾದದಲ್ಲಿ ಚಿಂತನಶೀಲರಾದ ಎಲ್ಲರೂ ಭಾಗವಹಿಸಬಹುದು.
ಈಗಾಗಲೇ, ಮೂರು ಸಂವಾದಗಳನ್ನು ಯಶಸ್ವಿಯಾಗಿ ಏರ್ಪಡಿಸಿರುವ ಈ ವೇದಿಕೆ, ನಾಲ್ಕನೆಯ ಚಿಂತನ ಮಿಲನದಲ್ಲಿ ಪ್ರೊ.ಜಿ.ಬಿ.ಶಿವರಾಜು ಅವರು ಬರೆದಿರುವ "ಜನಲೋಕಪಾಲಕ ಅಣ್ಣಾ ಹಜಾರೆ"ಕ್ರುತಿಯನ್ನು ಲೋಕಾರ್ಪಣೆ ಮಾಡಲಿದ್ದು, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಶ್ರೀಮತಿ ಪೋಷಿಣಿಯವರು "ಮಾಹಿತಿ ಹಕ್ಕು ಕಾಯ್ದೆ:ಪರಿಚಯ ಮತ್ತು ಬಳಕೆ" ಕುರಿತು ಮಾತನಾಡಲಿದ್ದಾರೆ. ವಿವರಗಳು ಈ ಬರೆಹದೊಂದಿಗೆ ಲಗತ್ತಿಸಿರುವ ಕರೆಯೋಲೆಯಲ್ಲಿ ನಮೂದಾಗಿದೆ. ಆಸಕ್ತರು ಈ ಸಂವಾದದಲ್ಲಿ ಪಾಲ್ಗೊಂಡು ಇಂದಿನ ಕಾಲದ ಅತ್ಯಂತ ಜರೂರು ಸಂಗತಿಯಾದ ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ತಿಳಿವಳಿಕೆಯನ್ನು ಪಡೆಯಬಹುದು.
ಈ ಮೊದಲು ವಿಸ್ಮಯ ಚಿಂತನ ಮಿಲನದಲ್ಲಿ ಕ್ರಮವಾಗಿ ಪ್ರೊ. ಜಿ. ಚಂದ್ರಶೇಖರ್ ಅವರ ಮೇಧಾ ಪಾಟ್ಕರ್, ಶ್ರೀ ಎ.ಪಿ.ಚಂದ್ರಶೇಖರ ಅವರ ಫುಕುವೊಕ, ಡಾ.ಎಚ್.ಎಸ್.ಅನುಪಮ ಅವರ ಬಾನಿನಲ್ಲಿ ಮಹಿಳೆ: ಸುನೀತ ವಿಲಿಯಮ್ಸ್ ಕ್ರುತಿಗಳು ಬಿಡುಗಡೆಯಾಗಿದ್ದು, ಜನ್ ಲೋಕ್ ಪಾಲ್ ಮಸೂದೆ, ಕುಲಾಂತರಿ(ಬಿ.ಟಿ) ಅವಾಂತರ, ವಿಜ್ಞಾನ ಮತ್ತು ಮಹಿಳೆ ವಿಷಯಗಳ ಬಗ್ಗೆ ಡಾ.ಆರ್. ಬಾಲಸುಬ್ರಮಣ್ಯಮ್, ಶ್ರೀ ಕ.ನಾ.ರಾಮಚಂದ್ರ ಮತ್ತು ಶ್ರೀ ಕೊಳ್ಳೇಗಾಲ ಶರ್ಮ ಅವರು ಮಾತನಾಡಿದ್ದಾರೆ.
"ಚಿಂತನ ಮಿಲನ" ಪ್ರತಿ ತಿಂಗಳ ನಾಲ್ಕನೇ ಭಾನುವಾರಂದು ನಡೆಯುತ್ತದೆ.
Comments
ಉ: ವಿಸ್ಮಯ ಚಿಂತನ ಮಿಲನ - 4