ಪಾಡೇನು?

ಪಾಡೇನು?

ಕವನ

ಉರಿಬೇಸಿಗೆಯಲ್ಲಿ

ಜನರು

ನೀರಿಲ್ಲದೆ

ಕಂಗೆಡುತ್ತಿರುವಾಗ

ಮಳೆ ಬಾರದೆ ಹೋದರೆ

ಜಗದ ಪಾಡೇನು?

   ಸುರಿವ ಮಳೆ

   ಎಂದೂ ನಿಲ್ಲದೆ ಇದ್ದರೆ

   ಏರುವ ಬೆಲೆ

   ಎಂದೂ ಏರುತ್ತಲೇ ಹೋದರೆ

   ಜಗದ ಪಾಡೇನು?

ಈ ಜಗತ್ತಿನಲ್ಲಿ

ಇರುಳು ಇರುಳಾಗಿಯೇ

ಹಗಲು ಹಗಲಾಗಿಯೇ

ಉಳಿದಿದ್ದರೆ

ಪರಿವರ್ತನೆಯೆಂಬುದು

ಇಲ್ಲದೇ ಹೋದರೆ

ಎಲ್ಲರ ಪಾಡೇನು?

 

Comments