ಸಂಕೋಲೆಗಳು
ನಸುನಗೆ ತುಸುಲಜ್ಜೆ ಜೊತೆಗಿನಿತು ದಿಗಿಲು
ತಿರುಗಿಸಿದ ಮೊಗ ಮತ್ತೆ ಅರಗಣ್ಣ ನೋಟಗಳು
ಮಚ್ಚರದ ಮಾತುಗಳು ಜಗಳಗಳು ಬೆಡಗುಗಳು
ಪರಿಪರಿಯ ಬಗೆಯಲ್ಲಿ ಸಂಕಲೆಯೇ ಹೆಣ್ಣುಗಳು!
ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ):
ಸ್ಮಿತೇನ ಭಾವೇನ ಚ ಲಜ್ಜಯಾ ಭಯಾ
ಪರಾಙ್ಮುಖೈರರ್ಧ ಕಟಾಕ್ಷ ವೀಕ್ಷಣೈಃ |
ವಚೋಭಿರೀರ್ಷ್ಯಾ ಕಲಹೇನ ಲೀಲಯಾ
ಸಮಸ್ತ ಭಾವೈಃ ಖಲು ಬಂಧನಂ ಸ್ತ್ರೀಯಃ ||
-ಹಂಸಾನಂದಿ
ಕೊ: ಇದು ಶೃಂಗಾರ ಶತಕದ ಎರಡನೇ ಪದ್ಯ. ಆಸಕ್ತರಿಗೆ ಶೃಂಗಾರ ಶತಕದ ಮೊದಲ ಪದ್ಯದ ಅನುವಾದ ಇಲ್ಲಿದೆ ಮತ್ತೆ ಮೂರನೆ ಪದ್ಯದ ಅನುವಾದ ಇಲ್ಲಿದೆ.
ಕೊ.ಕೊ: ಯೋಗರಾಜ ಭಟ್ಟರಿಗೂ ಈ ಅನುವಾದಕ್ಕೂ ಯಾವುದೂ ಸಂಬಂಧವಿಲ್ಲ ಅನ್ನೋದನ್ನ ಒಮ್ಮೆ ಸ್ಪಷ್ಟ ಪಡಿಸಿಬಿಡುತ್ತೇನೆ !
Rating