ಬಯಲು ಮತ್ತು ಚೆಲುವು

ಬಯಲು ಮತ್ತು ಚೆಲುವು

ಮಲೆನಾಡಿನಲ್ಲಿ ಈಗ ಭತ್ತದ ಸಸಿಗಳ ನಾಟಿ ಕೆಲಸ ಮುಗಿದು ಗದ್ದೆಗಳೆಲ್ಲ ಹಸಿರಿನಿಂದ ನಳನಳಿಸುತ್ತಿದೆ. ಹಸಿರಿನ ನಡುವೆ ಅಲ್ಲಲ್ಲಿ ಬೆಳ್ಳಕ್ಕಿಯ ಹಿಂಡು ಭತ್ತದ ಗದ್ದೆಯ ನಿಂತ ನೀರಿನ ನಡುವೆ ಪುಡಿ ಮೀನಿನ ಶಿಕಾರಿಯಲ್ಲಿ ತೊಡಗಿವೆ.ಇತ್ತ ಈ ಕೆಳಗಿನ ಗದ್ದೆಯಲ್ಲಿ ಹೆಣ್ಣಾಳುಗಳು ಬಣ್ಣಬಣ್ಣದ ಮಳೆಚೀಲವನ್ನು ಹಾಕಿಕೊಂಡು ಕಳೆ ಕೀಳುವಲ್ಲಿ ನಿರತರಾಗಿದ್ದಾರೆ. ಈ ಬಯಲು ಪ್ರದೇಶ ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಹಿಂದೊಮ್ಮೆ ಬಟ್ಟಬಯಲಾದ ಪ್ರದೇಶ ಮಳೆಗಾಲ ಬಂದೊಡನೆ ಬೇಸಾಯ ಮಾಡುವ,ಬದು ಕೆತ್ತುವ,ನೀರು ಕಟ್ಟುವ,ಸಸಿ ನೆಡುವ ಹೀಗೆ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತದೆ.ನೋಡನೋಡುತ್ತಿದಂತೇ ಬಯಲಲ್ಲಿ ನಿಧಾನಕ್ಕೆ ಹಸಿರು ನಳನಳಿಸುತ್ತದೆ,ಭತ್ತ ಬಲಿತು ಗಾಳಿಗೆ ತೆನೆ ತೂಗತೊಡಗುತ್ತದೆ.ಸದಲ್ಲಿ ತೊಡಗಿಸಿಕೊಂಡಿರುತ್ತದೆ.ನೋಡನೋಡುತ್ತಿದಂತೇ ಬಯಲಲ್ಲಿ ನಿಧಾನಕ್ಕೆ ಹಸಿರು ನಳನಳಿಸುತ್ತದೆ,ಭತ್ತ ಬಲಿತು ಗಾಳಿಗೆ ತೆನೆ ತೂಗತೊಡಗುತ್ತದೆ. ತೆನೆ ತುಂಬಿದ ಗದ್ದೆಯಿಂದ ಗಾಳಿಗೆ ಒಂದು ರೀತಿಯ ಸದ್ದು ಕೇಳಿ ಬರುತ್ತಿರುತ್ತದೆ.ಅಷ್ಟಕ್ಕೆ ಮುಗಿಯುವುದಿಲ್ಲ. ಹಸಿರಿನ ಭತ್ತದ ಸಸಿ ಹಳದಿ ಬಣ್ಣಕ್ಕೆ ತಿರುಗಿದಾಗ ಕಟಾವಿನ ಕೆಲಸ ಶುರು. ಕುಯ್ಯುವುದು,ಸಣ್ಣ ಸಣ್ಣ ಹೊರೆಯನ್ನಾಗಿ ಮಾಡುವುದು.ಒಕ್ಕಲಾಟ ಮಾಡಿ ಭತ್ತವನ್ನು ಬೇರ್ಪಡಿಸುವುದು,ಮೂಟೆಗೆ ತುಂಬಿಸುವುದು ಹೀಗೆ. ಬಯಲು ಹಸಿರಾದದ್ದು,ಮತ್ತೆ ಬಯಲಾಗಿ ಬಿಡುತ್ತದೆ.ಆಗ ಕಾಣಸಿಗುವುದು ಅಲ್ಲಲ್ಲಿ ಬಿದ್ದ ಭತ್ತದ ಕಾಳನ್ನು ಹೆಕ್ಕಲು ಬರುವ ವಿವಿಧ ಬಗ್ಗೆಯ ಹಕ್ಕಿಗಳು, ಬದ್ದುವಿನಲ್ಲಿ ಬೆಳೆದ ಹುಲ್ಲನ್ನು ತಿನ್ನಲು ಬರುವ ದನಗಳ ಹಿಂಡು ಮಾತ್ರ. ದಿನ ಕಳೆದಂತೆ ಆ ಬಯಲು ಹಳ್ಳಿಯ ಮಕ್ಕಳ ಕ್ರಿಕೆಟ್ ಆಟದ ಕ್ರೀಡಾಂಗಣವು ಆಗುವುದುಂಟು.ಒಟ್ಟಿನಲ್ಲಿ ರೈತ ಅನ್ನವನ್ನು ಬೆಳೆಯುವುದರ ಜೊತೆಗೆ ಬಣ್ಣವನ್ನು,ಚೆಲುವನ್ನು ಬೆಳೆಯುತ್ತಾನೆ.ಜೊತೆಗೆ ಏಡಿ,ಮೀನು,ಹಕ್ಕಿಗಳನ್ನು ಜೊತೆಗೆ ಸಲಹುತ್ತಾನೆ.

Comments