ಹೆಂಗೆಂಗ್ ಇದ್ದೋರೆಲ್ಲ- ಏನೇನಾದ್ರು?-ಮೀಸೆ ಎತ್ತಿ ಮೆರ್ದೊರೆಲ್ಲ?

ಹೆಂಗೆಂಗ್ ಇದ್ದೋರೆಲ್ಲ- ಏನೇನಾದ್ರು?-ಮೀಸೆ ಎತ್ತಿ ಮೆರ್ದೊರೆಲ್ಲ?

 ಜಾಮೀನು ಅರ್ಜಿ ಸಲ್ಲಿಸಿ  'ಧೈನ್ಯತೆಯೇ  ಮೈ ತಳೆದು ಬಂದಂತೆ  ಕೋರ್ಟಿನ ಕಟಕಟೆಯಲ್ಲಿ ನಿಂತಿರುವ !!' ಆರೋಪಿತನ ಕಡೆ ನೋಡುತ್ತಾ 'ನ್ಯಾಯಾಧೀಶರು' ಚಾವಟಿ ಬೀಸಿದಂತೆ  ಹೇಳುತ್ತಾರೆ, ನಿಮ್ಮ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ.

 

 ಒಂದು ವೇಳೆ ನಿಮಗೆ ಜಾಮೀನು  ನೀಡಿದರೆ 'ಸಾಕ್ಷಿ ನಾಶಕ್ಕೆ'  ಪ್ರಯತ್ನಿಸಬಹುದು. ಆರೋಪಿ  ಸ್ಥಾನದಲ್ಲಿದ್ದವರ  ಮುಖ 'ಕಪ್ಪಿಟ್ಟು' ಅದೆಷ್ಟು ತಡೆದರೂ 'ಕಣ್ಣೀರು' ಬಳ-ಬಳ ಉದುರುತ್ತವೆ.  ತಮ್ಮ  ಕೆಲವೇ ದಿನಗಳ ಹಿಂದಿನ 'ರಾಜ  ವೈಭೋಗ- ಸ್ವಾತಂತ್ರ್ಯದ-ಸ್ವೇಚ್ಚಚ್ಚಾರದ ಐ  ಡೋಂಟ್ ಕೇರ್ ಜೀವನ '   ನೆನಪಿಸ್ಕೊಂಡು ಮತ್ತು ಈಗಿನ ಸದಾ ಜೈಲು ಕೋಣೆಯೊಳಗೆ ದುಸ್ಟಾತಿ   ದುಸ್ಟರೊಡನೆ  ರೂಮಲ್ಲಿ  ಜಾಗ ಹಂಚಿಕೊಳ್ಳೋದೇ ನೆನೆದರೆ  ಮೈ ಕೊತ ಕೊತ ಕುದಿಯುತ್ತದೆ ..

 

ಆದರೆ 'ಮಾಡಿದ್ದುಣ್ಣೋ ಮಜರಾಯ-ಮಹರಾಯ' ಅವರ್ಗೆ ಈಗ ಗೊತ್ತಾಗುತ್ತಿದೆ. ಸ್ವಾತಂತ್ರ್ಯ ಬಂದಾಗ-ಬಂದಾದ ಮೇಲೆ  ಸ್ವಾತಂತ್ರ್ಯ ಮತ್ತು ಸಾಮಾನ್ಯ ಜನರ ಅಸಹಾಯಕತೆ-ತಿಳುವಳಿಕೆ ಕೊರತೆ  ಹೆಂಗೆಂಗೋ ಉಪಯೋಗಿಸಿಕೊಂಡು  ಅಡ್ಡ ದಿಡ್ಡಿ -ಅಡ್ಡ ದಾರಿಯಲ್ಲಿ ಹಣ  ಸಂಪಾಸಿದ 'ಆ ಪಾಪಿ ಹಣ - ಎಂತೆಂಥ ಘಟಾನುಘಟಿ  ಲಾಯರುಗಳ  ಯಾವೊಂದು ಪ್ರಯತ್ನವೂ'  ಫಲಕಾರಿಯಾಗದೆ ಕೃಷ್ಣನ ಜನ್ಮಸ್ಥಾನವೇ  ಶಾಶ್ವತವಾಗುವ ಕಲ್ಪನೆಯೇ   ಅವರೆಲ್ಲರನ್ನ ಹುಚ್ಚು ಹಿಡಿಸುತ್ತಿದೆ!!

Comments