ಅದೆಷ್ಟು ಚೆನ್ನ !
ಕವನ
ನೀಲಿ ಆಗಸದಲಿ ಉದಯಿಸಿದ
ಕೆಂಪು ಸೂರ್ಯ ಅದೆಷ್ಟು ಚೆನ್ನ
ಕಪ್ಪನೆ ರಾತ್ರಿಯಲಿ ಕಂಗೊಳಿಸುವ
ಬಿಳಿಯ ಚಂದಿರ ಅದೆಷ್ಟು ಚೆನ್ನ !
ಜುಳು-ಜುಳು ಹರಿಯುವ ನೀರಿನಲ್ಲಿ
ಈಜಾಡುವ ಮೀನುಗಳು ಅದೆಷ್ಟು ಚೆನ್ನ
ಹದಬಿಸಿಲಿನಲಿ ಸುರಿಯುವ ಮಳೆಗೆ
ಹೊಳೆವ ಕಾಮನಬಿಲ್ಲು ಅದೆಷ್ಟು ಚೆನ್ನ
ಬೀಸುವ ಗಾಳಿಗೆ ತಲೆದೂಗುವ
ಭತ್ತದ ತೆನೆಗಳು ಅದೆಷ್ಟು ಚೆನ್ನ
ಸೆಗಣಿ ಸಾರಿಸಿದ ಆ ನೆಲದಲಿ
ಬಿಡಿಸಿದ ರಂಗೋಲಿ ಅದೆಷ್ಟು ಚೆನ್ನ
ಧೋ ಎಂದು ಸುರಿಯುವ ಮಳೆಯ
ಸೊಬಗನ್ನು ಸವಿಯುವುದು ಅದೆಷ್ಟು ಚೆನ್ನ
ಚಳಿಗಾಲದ ಮುಂಜಾವಿನಲಿ ಭುವಿಯ
ತಬ್ಬಿದ. . . ಇಬ್ಬನಿ ಅದೆಷ್ಟು ಚೆನ್ನ
ಜೀವನದಲಿ ಎದೆಗುಂದದೆ ಮುನ್ನಡೆ
ಎಂಬ 'ಅಪ್ಪ'ನ ಧೈರ್ಯದ ಮಾತು ಅದೆಷ್ಟು ಚೆನ್ನ
ಬೇಸತ್ತ ಮನಸಿಗೆ ಮುದ ನೀಡುವ
'ಅಮ್ಮ'ನ ಹಿತನುಡಿ ಅದೆಷ್ಟು ಚೆನ್ನ !
Comments
ಉ: ಅದೆಷ್ಟು ಚೆನ್ನ !
In reply to ಉ: ಅದೆಷ್ಟು ಚೆನ್ನ ! by ನಂದೀಶ್ ಬಂಕೇನಹಳ್ಳಿ
ಉ: ಅದೆಷ್ಟು ಚೆನ್ನ !