ಮುನಿಸಿಕೊಂಡ ಹುಡುಗಿಗೊಂದು ಪತ್ರ.

ಮುನಿಸಿಕೊಂಡ ಹುಡುಗಿಗೊಂದು ಪತ್ರ.

ನನ್ನ ಪ್ರೀತಿಯ ಹುಡುಗಿ,

ನಿನಗಾಗಿ ಒಂದು ಪತ್ರ ಬರೆಯುವ ಆಸೆಯಿಂದ ಏನೇನೋ ಗೀಚುತ್ತಿದ್ದೇನೆ. ನಿನ್ನ ಮೇಲಿರುವ ಪ್ರೀತಿ ನಿನಗೆ ತೋರ್ಪಡಿಸುವ ಜರೂರತ್ತು ನನಗೆ ಬರುತ್ತದೆಂದು ಕನಸಿನಲ್ಲು ಅನಿಸಿರಲಿಲ್ಲ. ಇರಲಿ, ನೀ ಕೇಳಿದ್ದು ಒಂದು ಫೋನ್ ಕಾಲ್. ಅದೋಂದು ನಮ್ಮ ಪ್ರೀತಿಗೆ ಮಾನದಂಡವೇ? ನಮ್ಮ ಪ್ರೀತಿ ಸುಪ್ತವಾಗಿ ಹರಿಯುವ ಗುಪ್ತಗಾಮಿನಿ ಇದ್ದಂತೆ ಇರಬೇಕು. ಯಾವುದೇ ಒಂದು ಮಾತುಗಳು, ಅಥವಾ ವಸ್ತುಗಳು, ಫೋನ್ ಕಾಲ್, ಇಸ್ಯಾವುದು ನಮ್ಮ ಪ್ರೀತಿಯನ್ನು ಅಳೆಯಬೇಕಾಗಿಲ್ಲ. ನಮ್ಮಿಬ್ಬರ ನಡುವೆ ಇರುವುದು ಒಂದು ನಿಷ್ಕಲ್ಮಶ, ಶುಭ್ರವಾದ ಪ್ರಿತಿ ಬಿಟ್ಟರೇ ಬೇರೆ ಎನು ಇರಬಾರದು ಅಂತ ನಾ ಅನ್ಕೊಂಡಿದ್ದೆ. ಆದರೆ ಇದಕ್ಕು ಒಂದು ಅಳತೆ, ಮಾನದಂಡ, ಇಡ್ತಿದಿಯಾ ಅಂತ ಅಂದ್ರೆ ಇದು ನನ್ನ ಬ್ಯಾಡ್ ಲಕ್ ಅಲ್ವಾ? ಯಾವುದೇ ಒಂದು ವಿಷಯಕ್ಕೆ ಫೋನ್ ಮಾಡೋಕೆ ಆಗಿರಲ್ಲ, ಹಾಗಂತ ನಿನ್ನ ಮೇಲೆ ಪ್ರೀತಿ ಕಡಿಮೆ ಆಯ್ತು ಅಂತ ನಿಂಗ್ಯಾಕೆ ಅನಿಸುತ್ತೆ? ಪ್ರೀತಿಯೆನ್ನುವುದು ಇನ್ನೊಬ್ಬರಿಗೆ ಆದರ್ಶವಾಗಬೇಕೆ ಹೊರತು ನಮ್ಮ ಕಡೆಗೆ ಬೆರಳು ಮಾಡಿ ತೋರಿಸುವಂತಾಗಬೆಕೆಂದು ನನ್ನ ಆಸೆ. ದೇವರ ದಯೆಯಿಂದ ಇದು ನಿನಗೆ ಬೇಗ ಅರ್ಥ ಆಗಿ ನನ್ನ ಹತ್ರ ಓಡಿ ಬರ್ತಿಯಾ ಅಂತ ನಂಬಿರುವ.

                                                                                      ನಿನ್ನವ

Rating
No votes yet