ಸಿಟ್ನಾ ಬಿಟ್ಟ್ ನೋಡ್ರಿ ಒಮ್ಮೆ

ಸಿಟ್ನಾ ಬಿಟ್ಟ್ ನೋಡ್ರಿ ಒಮ್ಮೆ

ಸಿಟ್ನಾ ಬಿಟ್ಟ್ ನೋಡ್ರಿ ಒಮ್ಮೆ


ಇವತ್ತು ಮನಸ್ಸು ಭಾಳ ಹಗುರ ಅನ್ಸಲಿಕತ್ತೇತ್ರಿ, ಹಾಡ್ ಕೇಳ್ಕೊಂತ, ಅದರ್ ಮ್ಯುಸಿಕ್ ಗೆ ಮನಸ್ಸು, ಮೈ  ತನ್ನಿಂದ್ ತಾನ ನನಗ ಗೊತ್ತಿಲ್ದಂಗ ತಾಳಾ ಹಾಕ್ಲಿಕತ್ತಿದ್ವು. ನನ್ನ ರೂಮ್ ಪಾರ್ಟ್ನರ್ ಇದನ್ನ ನೋಡಿ ಏನ್ ಸುಮಾ ಫುಲ್ ಹವಾದಾಗ ಅದಿ ಇವತ್ತ  ! ಏನ್ ಸ್ಪೆಶಲ್ವಾ ಅಂದ್ಲು!!. ನಾನಕಿಗೆ ನನ್ನ ಜೊತಿ ಆದ ಅನುಭವಾ ಹೇಳ್ಕೊಂಡ್ಯಾ ನಿಮಗು ಹೇಳಬೇಕು ಅನ್ಸತು. ಇಷ್ಟಾ ಆದ್ರ ಗುಡ್ ಅನ್ರಿ ಇಲ್ದಿದ್ರ ಸಜ್ಜೆಶನ್ ಕೊಡ್ರಿ.


ಮೊನ್ನೆ ನನ್ನ ಚಿಕ್ಕಮ್ಮ ಬೈದಿದ್ರು, ನನ್ನ ಒೞೆದಕ್ಕ ಹೇಳಿದ್ ಮಾತ್ರಿ ಆದ್ರ ನಂಗ್ಯಾಕೋ ಬೇಜಾರಾಗಿ ಮನಿಗೆ ಫೋನೆ ಹಚ್ಚಿರ್ಲಿಲ್ಲಾ. ಇವತ್ತ ಫೋನ್ ಮಾಡಿದ್ಯಾ ಚಿಕ್ಕಮ್ಮಾನ ಮಾತಾಡಿದ್ರು ಮತ್ತು ಮೊನ್ನೆ ಬೈದಿದ್ದಕ್ಕ ಬೇಜಾರಾಗ್ಬೇಡವಾ ನಿನಗ ಸಿಟ್ಟು ಬಂದಿದ್ರ ತಪ್ಪಾತು ಅಂತಾ ಒಂದ್ ಮಾತ ಅಂದ್ರು ನೋಡ್ರಿ ಕಣ್ಣಾಗಿಂದ ಗಂಗೆ, ಯಮುನೆ ಬ್ರಮ್ಹಪುತ್ರೆ ಎಲ್ಲಾರು ಉಕ್ಕಿ ಹರಿದು ಬಂದ್ರು .  ಅವಾಗಾ ನಾನ ಅವರಿಗೆ "ನಂದ ತಪ್ಪಾಗೇತಿ, ನೀವು ನನ್ನೊೞೆದಕ್ಕ ಹೇಳಿದಿರಿ ನನ್ನಹತ್ರಾ ತಪ್ಪಾತು ಅಂತಾ ಕೇಳಬ್ಯಾಡ್ರಿ, ನೀವು ನನಗಿಂತ ದೊಡ್ಡವರು ಅಂದೆ". ಚಿಕ್ಕಮ್ಮಗು ಖುಷಿ ಆತು ಮತ್ತ ಚೆಂದಂಗ ಮಾತಾಡಿದ್ರು. ಎರಡ್ ದಿವಸಾ ಮನಸ್ಸು ಭಾರಾ ಅನ್ಸಿದ್ದು ತಪ್ಪಾಗೇತಿ ಅಂತಾ ಕೇಳ್ಕೊಂಡ್ ತಕ್ಷಣಾ ಏನೋ ಒಂಥರಾ ಮೈಯಾಗಿನ್ ದೆವ್ವಾ ಬಿಟ್ಟ್ ಹೋದಂಗಾತ್ರಿ. ಮತ್ತು ಮನಸ್ನ್ಯಾಗ ತಪ್ಪ ಮಾಡಿದ್ಯಾ ಅನ್ನು ಭಾವನೆನು ಓಡಿಹೋತು. ಇವತ್ತ ನಾ ಕಲ್ತಿದ್ದ ದೊಡ್ಡ ಪಾಠಾ ನೋಡ್ರಿ ಇದು.


ನಿಮಗು ಅದನ್ನ ಹೇಳುದು, ಯಾರರ ನಿಮಗ ಬೈದು ಬುಧ್ಧಿ ಮಾತ ಹೇಳಿದ್ರಾಗ್ಲಿ , ಏನರ ಸುಧಾರಣೆ ಮಾಡ್ಕೊೞಾಕ ಹೇಳಿದ್ರಾಗ್ಲಿ, ತಪ್ಪು ತಿದ್ದಕೋ ಅಂತಾ ಹೇಳಿದ್ರಾಗ್ಲಿ ಅಂಥವರ್ ಮ್ಯಾಲೆ ಸಿಟ್ಟ ಮಾಡಕೊೞದ, ಸ್ವಲ್ಪ್ ಹೊತ್ತ ಒಬ್ಬರ ಕುಂತ ವಿಚಾರಾ ಮಾಡ್ರಿ. ಅವರ್ಯಾಕ ನಿಮಗ ಹೇಳಿದ್ರು? ಅಂತಾ. ಅವಾಗ ನಿಮಗ ಅನ್ಸುತ್ರಿ ಅವರು ನಿಮ್ಮ ಓೞೆದಕ್ಕ ಹೇಳ್ಯಾರ , ನಿಮ್ಮ ಭವಿಷ್ಯ ಚೊಲೋ ಆಗ್ಲಿ ಅಂತ ಹೇಳ್ಯಾರ. ಜೀವನದಾಗ ನಾವ ಸುಧಾರ್ಸಿದ್ರ್ ಎಲ್ಲಾರು ಮರ್ಯಾದಿ ಕೊಡ್ತಾರ ಅನ್ನುದ ಅರ್ಥ ಅಕ್ಕೈತ್ರಿ. ಅದು ಬಿಟ್ಟ ಅವರ ಮ್ಯಾಲೆ ಸಿಟ್ಟ ಮಾಡ್ಕೊಂಡ್ರ ಹಾಳಾಗುದು ನಮ್ದ ಭವಿಷ್ಯಾ. ನೀವು ಯಾರರ ಮ್ಯಾಲೆ ಸಿಟ್ಟ ಮಾಡ್ಕೊಂಡಿದ್ರ ಹೋಗಿ ತಪ್ಪಾತು ಅಂತ ಕೇಳ್ಕೊಂಡ್ ಬಿಡ್ರಿ, ಆಮ್ಯಾಲೆ ನೀವ ನೋಡ್ರಿ ಚಮತ್ಕಾರಾ . ಮನಸಿಗೆ ಒಥರಾ ಖುಷಿ ಇರ್ತೈತ್ರಿ, ಮೈ ಎಲ್ಲಾ ಹಗರ್ ಅನ್ಸುತ್ತ, ಕೆಲ್ಸಾ ಮಾಡಕ ಹುಮ್ಮಸ್ ಬರ್ತೈತ್ರಿ. ತಪ್ಪಾಗೇತಿ ಅಂತ ಕೇಳಿದ್ರ ನಿಮ್ಮ ವ್ಯಾಲ್ಯು ಕಡಿಮಿ ಅಕ್ಕೈತಿ ಅಂತ ತಿಳಿಬ್ಯಾಡ್ರಿ. ಅವರು ನಿಮಗಿಂತ ದೊಡ್ಡವರಿದ್ರ ಕೇಳ್ಕೊೞುದ್ರಾಗ ಯಾವುದ ರೀತಿ ತಪ್ಪಿಲ್ಲ. ಅದರ್ ಬದಲಾಗಿ ನಮ್ಮ ಬಗ್ಗೆ ಅವರ ಮನಸ್ನ್ಯಾಗು ಒೞೆ ಅಭಿಪ್ರಾಯಾ ಉಳಿತೈತಿ. ಅಲ್ದ ಅವರ ಹೇಳಿದ್ ಮಾತಗಳನ್ನ ನಿಮ್ಮ ಜೀವನದಾಗ ಅಳವಡಿಸಿ ನೋಡ್ರಿ ಒಮ್ಮೆ, ಆಹಾ! ಅದ್ರಾಗ ಇರು ಮಜಾನ ಬ್ಯಾರೆ. ಎನೋ ಸಾಧಿಸಿದ್ ಅನುಭವಾ ಅಕ್ಕೇತ್ರಿ ನಿಜಾ ಇದು ನನ್ನ ಅನುಭವಾ.


ನನ್ನ ಅನುಭವದ್ ಪ್ರಕಾರಾ ಯಾರ್ ನಮಗ ಬೈದು ಬುಧ್ಧಿ ಹೇಳ್ತಾರೋ ಅವರ ನಿಜವಾದ ಹಿತೈಷಿಗಳು, ನಮ್ಮ ಜೀವನಾ ಸುಧಾರನೆ ಮಾಡಾಕ ಅವರ ಹೇಳತಾರಾ. ನಮ್ಮ್ಯಾಲಿರೋ ಖಾಳಜಿಗೆ ಹೇಳ್ತಾರ ಅಂದ್ಮ್ಯಾಲೆ ಅವರ್ ಮ್ಯಾಲೆ ಸಿಟ್ಟಾದ್ರ ಜೀವನಾ ಯಾರ್ದ್ ಹಾಳಗುತ್ತಂತ ನೀವ ವಿಚಾರಾ ಮಾಡ್ರಿ.


ನನಗ ಜೀವನದಾಗ ಸುಧಾರನೆ ಮಾಡ್ಕೊಲಿಕ್ಕ ಹೇಳ್ದವರಿಗೆ ನಾನು ಚಿರಋಣಿ............


(ನೋಟ್ - ಎಲ್ಲಾ ಬೈಗಳುಗಳು ಸುಧಾರಣೆಗೆ ಇರುವುದಿಲ್ಲ. ಕೆಲವರಿಗೆ ಎಲ್ಲರನ್ನು ಟೀಕೆ ಮಾಡುವುದೇ ಕೆಲಸಾ ಆಗಿರುತ್ತದೆ. ಅಂಥವರಿಂದಾ ಎಚ್ಚರವಾಗಿರಿ. ಟೀಕೆಕಾರರಿಗು ಮತ್ತು ಹಿತೈಷಿಗಳಿಗು ವ್ಯತ್ಯಾಸಾ ಕಂಡು ಹಿಡಿಯುವುದು ನಿಮಗೆ ಬಿಟ್ಟಿದ್ದು).


                 


                                                     ಪ್ರೀತಿಯಿಂದಾ ನಿಮ್ಮ ಸುಮಂಗಲಾ


 

Rating
No votes yet

Comments