’ಎಣ್ಣೆ ತೀರಿದ ಮೇಲೆ ದೀಪ ಕತ್ತಲೆಯ ಸ್ವತ್ತು’
’ಎಣ್ಣೆ ತೀರಿದ ಮೇಲೆ ದೀಪ ಕತ್ತಲೆಯ ಸ್ವತ್ತು’
( ಹೊಸ ಮಯೂರ -ಅಕ್ಟೋಬರ್ ೨೦೧೧-ದ ವಿಶೇಷಗಳು
ಹೊಸ ಮಯೂರ -ಅಕ್ಟೋಬರ್ ೨೦೧೧ ತಿಂಗಳಿನದು ಪೇಟೆಯಲ್ಲಿದೆ . ನೋಡಿದಿರಾ? ಗಾಂಧೀ ಜಯಂತಿ ವಿಶೇಷ ಎಂದು ಪತ್ರಕರ್ತ ಮತ್ತು ಲೇಖಕನಾಗಿ ಗಾಂಧಿ ಹೇಗಿದ್ದರು ಎಂಬ ಕುತೂಹಲಕರ ವಿವರಗಳಿವೆ. ಅವರು ಎಷ್ಟು ಬರೆಯುತ್ತಿದ್ದರು , ಎಷ್ಟು ಓದುತ್ತಿದ್ದರು , ಅವರ ಶೈಲಿ ಹೇಗೆ , ಪತ್ರಕರ್ತನಾಗಿ ಅವರ ನೀತಿ ಏನು, ಅವರು ವಹಿಸುತ್ತಿದ್ದ ಎಚ್ಚರ ಎಲ್ಲ ಇಲ್ಲಿ ತಿಳಿಯಬಹುದು.
ಹಿಂದಿನ ಮೈಸೂರು ದಸರಾ ಸಮಯದಲ್ಲಿ , ಮಹಾರಾಜರ ದರ್ಬಾರು ನಡೆಯುತ್ತಿದ್ದ ರೀತಿ ಕುರಿತು ಒಳ್ಳೆಯ ಬರಹ ಇಲ್ಲಿದೆ.
ಕವನಗಳನ್ನು ನಾನು ಸಾಮಾನ್ಯವಾಗಿ ಓದುವುದಿಲ್ಲವಾದರೂ - ( ಅವುಗಳನ್ನು ಓದಲು ಬೇಕಾದ ವ್ಯವಧಾನ ಮತ್ತು ಧ್ಯಾನಸ್ಥ ಸ್ಥಿತಿ ನನ್ನಲ್ಲಿಲ್ಲ ) ’ಎಣ್ಣೆ ತೀರಿದ ಮೇಲೆ ದೀಪ ಕತ್ತಲೆಯ ಸ್ವತ್ತು’ ಕವನದ ಶೀರ್ಷಿಕೆ ನನ್ನನ್ನು ಆಕರ್ಷಿಸಿತು.
ಕರ್ನಾಟಕದಲ್ಲಿ ಒಂದು ಜನಪದ ವಿಶ್ವವಿದ್ಯಾಲಯ ಶುರುವಾಗಲಿದೆ ಅಂತೆ . ಎಲ್ಲೋ ನನಗೆ ಗೊತ್ತಿಲ್ಲ. ಆದರೆ ಆ ಬಗ್ಗೆ ಇಲ್ಲಿ ಒಂದು ಬರಹ ಇದೆ.
’ಸರ್ವಮಂಗಳಾ’ -ಚದುರಂಗರ ಕಾದಂಬರಿ ಆಧಾರಿತ ಹಳೆಯ ಸಿನಿಮಾ . ನೀವೂ ನೋಡಿರಬಹುದು . ಅದರಲ್ಲಿ ರಾಜ್‍ಕುಮಾರ್ ಮತ್ತು ಕಲ್ಪನಾ ಇದ್ದರು. ಕೆ. ಎಸ್. ನರಸಿಂಹಸ್ವಾಮಿ ಅವರ ’ತಾರೆಗಳ ಮೀಟುವೆವು ಚಂದಿರನ ದಾಟುವೆವು’ ಪ್ರಣಯಕವನ ಅಲ್ಲದೆ ಇನ್ನೊಂದು ಹಾಡು ಅದರಲ್ಲಿದೆ. ಅದು ಪಿ.ಬಿ.ಶ್ರೀನಿವಾಸ್ ದನಿಯಲ್ಲಿ ಪ್ರತಿಧ್ವನಿ ಬರುವಂತಿದ್ದು ಶೋಕ ಮಡುಗಟ್ಟಿದೆ. ’ ಜವರಾಯ ಬರುವಾಗ ಬರಿಗೈಲಿ ಬರಲಿಲ್ಲ’ ಇದೇ ಆ ಹಾಡು. ಈ ಜನಪದ ಗೀತೆಯ ಸಂಪೂರ್ಣ ಸಾಹಿತ್ಯ ಮತ್ತು ಅದರ ಬಗ್ಗೆ ಒಂದು ಬರಹ ಇಲ್ಲಿದೆ.
ಮಹಾಭಾರತದಲ್ಲಿ ಕೃಷ್ಣ-ಅರ್ಜುನ, ದುರ್ಯೋಧನ-ಕರ್ಣ, ಧರ್ಮರಾಯ-ವಿರಾಟ ಮತ್ತು ದ್ರೌಪದಿ-ಕೃಷ್ಣ ಇವರುಗಳ ಸಂಬಂಧ ಕುರಿತೂ ಒಂದು ಬರಹ ಇದೆ.
ಮಯೂರದಲ್ಲಿ ನಾನು ಓದಿದ , ಗಮನಿಸಿದ ಕೆಲವು ವಿಶೇಷಗಳನ್ನು ಮಾತ್ರ ತಿಳಿಸಿದ್ದೇನೆ ಇನ್ನೂ ಏನೇನಿದೆ ನೀವೇ ಕೊಂಡು ಓದಿ.
Comments
ಉ: ’ಎಣ್ಣೆ ತೀರಿದ ಮೇಲೆ ದೀಪ ಕತ್ತಲೆಯ ಸ್ವತ್ತು’