ಬೀchi ಜೋಕುಗಳು (೬): ತಿಂಮ್ಮ ಹುಟ್ಟಿದ್ದು.......?!

ಬೀchi ಜೋಕುಗಳು (೬): ತಿಂಮ್ಮ ಹುಟ್ಟಿದ್ದು.......?!

      ನಮ್ಮ ತಿಮ್ಮ ತನಗೆ ಇಲ್ಲ-ಸಲ್ಲದ ರೋಗಗಳ ಬಗ್ಗೆ ಕಲ್ಪಿಸಿಕೊಳ್ಳುತ್ತ, ಒಬ್ಬ ಡಾಕ್ಟರ್ರಿ೦ದ ಮತ್ತೊಬ್ಬ ಡಾಕ್ಟರ್ರ ಬಳಿಗೆ ಚಿಕಿತ್ಸೆಗಾಗಿ ಓಡುತ್ತಿದ್ದ. ಅವನನ್ನು ಪರೀಕ್ಷಿಸಿದ ವೈದ್ಯರೆಲ್ಲರೂ ಅವನಿಗೆ ಏನು ಖಾಯಿಲೆಯಿಲ್ಲವೆಂದೂ; ಸುಮ್ಮನೆ ಕಂಗಾಲಾಗ ಬೇಡವೆಂದು ಎಷ್ಟೇ ತಿಳಿಹೇಳಿದರೂ ಅವರನ್ನು ಮತ್ತೆ ಮತ್ತೆ ಕಂಡು ಕಿರುಕುಳ ಕೊಡುತ್ತಿದ್ದ. ಏನಾದರೂ ಖಾಯಿಲೆ ಇದ್ದರೆ ತಾನೆ ಅದನ್ನು ಗುಣಪಡಿಸುವುದು; ಹಾಗಗಿ ತಿಮ್ಮನ ಉಪಟಳದಿಂದ ಆ ಊರಿನಲ್ಲಿದ್ದ ವೈದ್ಯರುಗಳೆಲ್ಲಾ ರೋಸಿಹೋದರು. ಕಡೆಕಡೆಗೆ ತಿಮ್ಮನ ತಲೆ ಕಂಡ ಕೂಡಲೇ ಏನೋ ಒಂದು ನೆಪ ಮಾಡಿಕೊಂಡು ಅವನಿಂದ ತಪ್ಪಿಸಿಕೊಳ್ಳಲು ಉಪಕ್ರಮಿಸಿದರು. ಅಂಥಾದ್ದರಲ್ಲಿ ಆ ಊರಿಗೊಬ್ಬ ಹೊಸ ಡಾಕ್ಟರ್ ಬಂದ. ಅವನ ಹತ್ತಿರವೂ ತಿಮ್ಮ ತನ್ನ ಮಾಮೂಲಿ ವರಾತ ಷುರು ಹಚ್ಚಿಕೊಂಡ ಮತ್ತು ಅವರನ್ನು ಕಂಡಾಪಟ್ಟೆ ಹೊಗಳಲು ಪ್ರಾರಂಭಿಸಿದ. "ಡಾಕ್ಟ್ರೇ ಈ ಊರಿನಲ್ಲಿರುವ ಎಲ್ಲಾ ಆಸ್ಪತ್ರೆಗಳನ್ನೂ ನೋಡಿದ್ದೇನೆ, ಆದರೆ ನಿಮ್ಮಂಥ ವೈದ್ಯರನ್ನು ಎಲ್ಲೂ ಕಾಣಲಿಲ್ಲ" ಎಂದು ಕೊರದದ್ದನ್ನೇ ಮತ್ತೆ ಮತ್ತೆ ಕೊರೆದು ಆ ಡಾಕ್ಟರ್ರಿಗೂ ತಲೆ ಚಿಟ್ಟು ಹಿಡಿಸಿದ. ಇವನ ಕೊರೆತದಿಂದ ತಪ್ಪಿಸಿಕೊಳ್ಳಲು ಡಾಕ್ಟ್ರ್ರು ತಿಮ್ಮನನ್ನು ಒಂದು ಪ್ರಶ್ನೆ ಕೇಳಿದರು, "ಈ ಊರಲ್ಲಿರುವ ಎಲ್ಲಾ ಆಸ್ಪತ್ರೆಗಳನ್ನು ನೋಡಿದ್ದೇನೆ ಎಂದೆಯೆಲ್ಲಾ; ಈ ಊರಲ್ಲಿ ಇರುವ ಹೆರಿಗೆ ಆಸ್ಪತ್ರೇಗೂ ಹೋಗಿದ್ದೆಯಾ?" "ಓ ಅದೇನ್ ಸ್ವಾಮಿ ಹಂಗ್ ಕೇಳ್ತೀರಾ! ನಾನು ಹುಟ್ಟಿದ್ದು ಅಲ್ಲೇ!!!!" ಎಂದು ತಿಮ್ಮನೆಂದಾಗ ಆ ಡಾಕ್ಟರ್ ತಲೆಸುತ್ತಿ ಕೆಳಗೆ ಬಿದ್ದ.
 

Comments