ಬೀchi ಜೋಕುಗಳು (೭): ಬೀchi ಕಣ್ಣಲ್ಲಿ ನ್ಯಾಯವಾದಿಗಳು ಉರುಫ್ ವಕೀಲರು

ಬೀchi ಜೋಕುಗಳು (೭): ಬೀchi ಕಣ್ಣಲ್ಲಿ ನ್ಯಾಯವಾದಿಗಳು ಉರುಫ್ ವಕೀಲರು

                                                                          ಪ್ರಾಮಾಣಿಕ ಲಾಯರ್
    ತಿಮ್ಮ ತನ್ನ ಮಗಳನ್ನು ಕೇಳಿದ, ಅವಳಿಗೆ ಎಂಥಾ ವರಬೇಕೆಂದು. ಮಗಳು ಹೇಳಿದಳು, "ಅಪ್ಪಾ, ನಾನು ಪ್ರಾಮಾಣಿಕ ಲಾಯರ‍್ನನ್ನು ಮದುವೆಯಾಗ ಬೇಕೆಂದಿದ್ದೇನೆ". ತಿಮ್ಮ, "ತಪ್ಪಮ್ಮಾ ತಪ್ಪು, ಹಾಗೆಲ್ಲಾ ಇಬ್ಬಿಬ್ಬರನ್ನು ಮದುವೆಯಾಗಬಾರದು"
                                                                                    ****

                                                                      ಸತ್ಯವನ್ನೇ ಹೇಳುವ ಸಾಕ್ಷಿಗಳು
    ತಿಮ್ಮ ತನ್ನ ಗುರುಗಳಿಗೆ ಒಂದು ಧರ್ಮ ಸಂದೇಹವನ್ನು ಮುಂದಿಟ್ಟ. "ಗುರುಗಳೇ, ಕೋರ್ಟಿನಲ್ಲಿ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ತಾನು ಯಾವಾಗಲೂ ಸತ್ಯವನ್ನೇ ನುಡಿಯುತ್ತೇನೆಂದು ಹೇಳುವ ಸಾಕ್ಷಿಗಳು ಬರೇ ಸುಳ್ಳನ್ನೇ ಹೇಳುತ್ತಾರಲ್ಲ, ಇದು ಸರಿಯೇ?" ಗುರುಗಳು, "ಯಾರು ಹೇಳಿದ್ದು ನಿನಗೆ ಅವರು ಸುಳ್ಳು ಹೇಳುತ್ತಾರೆಂದು, ಅವರು ಯಾವಾಗಲೂ ಲಾಯರ್ ಹೇಳಿಕೊಟ್ಟ ಸತ್ಯವನ್ನೇ ಹೇಳುವುದು, ಆ.......ಹ್ಞ್!"
                                                                                   ****

                                                                ತಿಮ್ಮ ಗೆಳೆಯನನ್ನು ಪತ್ತೆ ಹಚ್ಚಿದ್ದು
    ತಿಮ್ಮ ತನ್ನ ಸ್ನೇಹಿತನೊಬ್ಬನನ್ನು ಕಾಣಲೆಂದು ಬೆಂಗಳೂರಿಗೆ ಬಂದ. ಅವನ ಸ್ನೇಹಿತ ಧಾರವಾಡದ ಕಡೆಯ ಲಾಯರ್ ಒಬ್ಬನ ಮನೆಯೊಳಗೆ ಇಳಿದುಕೊಂಡಿದ್ದಾನೆಂಬ ಮಾಹಿತಿಯಷ್ಟೇ ಇತ್ತು. ಅವನನ್ನು ಹುಡುಕುವುದು ಹೇಗೆ ಎಂದು ಆಲೋಚಿಸುತ್ತಿದ್ದಾಗ ದಾರಿಹೋಕನೊಬ್ಬ ಒಂದು ಏರೀಯಾದ ಹೆಸರನ್ನು ಕೊಟ್ಟು ಬಹುತೇಕ ಎಲ್ಲಾ ಲಾಯರುಗಳೂ ಅಲ್ಲೇ ಮನೆ ಮಾಡಿರುತ್ತಾರೆಂದೂ ಅಲ್ಲಿ ಹೋಗಿ ವಿಚಾರಿಸಿದರೆ ವಿಷಯ ಗೊತ್ತಾಗ ಬಹುದೆಂದು ಹೇಳಿದ. ಆ ಏರೀಯಾಗೇ ಹೋದವನೇ ತಿಮ್ಮ ಸ್ವಲ್ಪ ಹೊತ್ತಿನಲ್ಲೇ ತನ್ನ ಗೆಳೆಯನೊಂದಿಗೆ ಹೊರಬಂದ. ತಿಮ್ಮನ ಬುದ್ಧಿವಂತಿಕೆಗೆ ಆ ಗೆಳೆಯನಿಗೆ ಆಶ್ಚರ್ಯವಾಗಿ ಇಷ್ಟೊಂದು ಜನ ವಕೀಲರಿರುವ ಈ ಗಲ್ಲಿಯಲ್ಲಿ ಅದು ಹೇಗೆ ನಮ್ಮ ಲಾಯರ‍್ನ ಮನೆ ಪತ್ತೆ ಹಚ್ಚಿದೆ ಎಂದ? ಆಗ ತಿಮ್ಮ ಹೇಳಿದ ಅದು ಬಹಳ ಸುಲಭ ಏಕೆಂದರೆ "ಹಳೇ ಮೈಸೂರಿನ" ಲಾಯರುಗಳೆಲ್ಲಾ "ಅಡ್ವೋಕೇಟ್" ಅಂತಾ ತಮ್ಮ ಹೆಸರಿನ ಕೆಳಗೆ ಹಾಕ್ಕೋತಾರೆ ನಮ್ಮ ಉತ್ತರ ಕರ್ನಾಟಕದ ಮಂದಿ "ಎಡ್ವೋಕೇಟ್" ಅಂತಾ ಬರ್ಕೋತಾರೆ!
 

Comments