ಹೀಗೊಬ್ಬ ಮಹನೀಯರ ಒಂದು ಭಾಷಣವು !!

ಹೀಗೊಬ್ಬ ಮಹನೀಯರ ಒಂದು ಭಾಷಣವು !!


ಭಾರತ ಸರಕಾರದ ಒಂದು ದೊಡ್ಡ ಹುದ್ದೆಯಲ್ಲಿರುವ ಒಬ್ಬ ಮಹನೀಯರು ಮಾಡಿದ ಭಾಷಣದ ಪ್ರತಿಯೊಂದನ್ನು ನೋಡಿದೆ.  ಏಳು ಪುಟಗಳ ಭಾಷಣ ಅದು.


ಶುರುವಾಗೋದು ಹೀಗೆ.

ಶ್ರೀ ..... ಯವರನ್ನು ಸ್ವಾಗತಿಸಲು ನನಗೆ ಸಂತೋಷ ಆಗುತ್ತದೆ. ಅವರು  ಈಗ "...." ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಇದು ಅವರು ಇತ್ತೀಚೆಗೆ ಬರೆದಿರುವ ಪುಸ್ತಕ "...." ದ ಬಗ್ಗೆ ಇರಬಹುದೆಂದು ನಾನು ತಿಳಿದುಕೊಂಡಿದ್ದೇನೆ.

(ಆಮೇಲೆ  ಅವರ ಪರಿಚಯ )  
" ಅವರು ಇತ್ತೀಚೆಗೆ ಬರೆದ ಪುಸ್ತಕದಿಂದ ತುಂಬ ಪ್ರಸಿದ್ಧಿ ಪಡೆದಿದ್ದಾರೆ. ನಾನು ಆ ಪುಸ್ತಕ ಓದಿಲ್ಲವಾದರೂ  ನಾನಿರುವ ಹುದ್ದೆಯ ಕಾರಣದಿಂದ ಪುಸ್ತಕಗಳನ್ನು ಓದದಿದ್ದರೂ ಅವುಗಳ ಬಗೆಗೆ ಮಾತನಾಡಬಹುದಾಗಿದೆ.  ಆದರೆ ನಾನು ಈ ಪುಸ್ತಕದ ಬಗೆಗೆ ಓದಿಕೊಂಡಿದ್ದೇನೆ. ಆದ್ದರಿಂದ  ಈ ಪುಸ್ತಕದಲ್ಲಿನ ಅವರ ಸಿದ್ಧಾಂತದ ಕುರಿತು ನಾನು ಇನ್ನು ಮಾತನಾಡುತ್ತೇನೆ."


ಇದೀಗ ಮೂರನೇ ಪುಟಕ್ಕೆ ಬಂದೆ.

"ಶ್ರೀಯುತ .... ರ ಸಿದ್ಧಾಂತದಲ್ಲಿ ಮೂರು ಅಂಶಗಳಿವೆ......
೧)...
೨)...
೩)...
"ಶ್ರೀಯುತ .... ರ ನಿರ್ಣಯಗಳು ವಿವಾದಾಸ್ಪದವಾಗಿದ್ದು ಪ್ರಶ್ನಾರ್ಹವಾಗಿವೆ......
೧)...
೨)...
೩)...
"ಶ್ರೀಯುತ .... ರ ತರ್ಕ ಮತ್ತು ನಿರ್ಣಯಗಳು ಅನೇಕ ಕಾರಣಗಳಿಂದ ಒಪ್ಪಲರ್ಹವಾಗಿವೆ.
೧)...
೨)...
೩)...

ಆದರೆ ಅದೇ ಕಾಲಕ್ಕೆ ಕೆಲವು ಸಮಸ್ಯೆಗಳಿವೆ. ಕೆಲವನ್ನು ಪಟ್ಟಿ ಮಾಡಬೇಕೆಂದರೆ
೧)...
೨)...
೩)...
೪)...
೫)...
೬)...

"ನಾನು ಅನೇಕ ಪ್ರಶ್ನೆಗಳನ್ನು ಎತ್ತಿದ್ದೇನೆ ಅಂತ  ಅನಿಸುತ್ತದೆ.  ಆದರೆ ಈ ವಿಷಯದ ಬಗ್ಗೆ ನನ್ನ ಕೆಲವು ಅನಿಸಿಕೆಗಳನ್ನು  ನಿಮ್ಮೊಂದಿಗೆ ಹಂಚಿಕೊಳ್ಳುವದರೊಂದಿಗೆ  ನನ್ನ ಮಾತನ್ನು ಮುಗಿಸಬಯಸುತ್ತೇನೆ"
ಈಗ ಆರನೇ ಪುಟದಲ್ಲಿದ್ದೇನೆ.

೧)...
೨)...
೩)...
೪)...
೫)...

ಈ ವಿಷಯದ ಬಗ್ಗೆ ಶ್ರೀಯುತರ ಮಾತುಗಳನ್ನು ಕೇಳುವುದರಿಂದ ನಮ್ಮ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ ಎಂದು ನನಗೆ ಖಾತರಿ ಇದೆ.
ಈಗ ಶ್ರೀಯುತರನ್ನು ವೇದಿಕೆಗೆ ಸ್ವಾಗತಿಸೋಣ ಬನ್ನಿ.

ಇದು ಏಳನೆಯ ಮತ್ತು ಕಡೆಯ ಪುಟ!.

Comments