ನಾನೇಕೆ ಹೀಗಾದೆ?

ನಾನೇಕೆ ಹೀಗಾದೆ?

ನಾನೇಕೆ ಹೀಗಾದೆ?

 

ನೇರವಾಗಿರಬೇಕೆಂದುಕೊಂಡಿದ್ದೆ,

ಆದರೀಗ, ಡೊಂಕಾಗಿ ಹೋಗಿದ್ದೇನೆ!

 

ನಿಜವನ್ನೇ ನುಡಿಯಬೇಕೆಂದುಕೊಂಡಿದ್ದೆ,

ಆದರೀಗ, ಸುಳ್ಳಿಗೆ ಶರಣಾಗಿದ್ದೇನೆ ...

 

ಜಗತ್ತನ್ನೇ ಪ್ರೀತಿಸಬೇಕೆಂದುಕೊಂಡಿದ್ದೆ,

ಆದರೀಗ, ಸುತ್ತ ಮುತ್ತಲಿನವರನ್ನೇ ಸಹಿಸಲಾರದವನಾಗಿದ್ದೇನೆ ...

 

ಇದ್ದುದದರಲ್ಲೇ ತೃಪ್ತನಾಗಿರಬೇಕೆಂದುಕೊಂಡಿದ್ದೆ,

ಆದರೀಗ, ಸಿಕ್ಕಿದ್ದೆಲ್ಲವನ್ನೂ ಬಾಚಿಕೊಳ್ಳುತ್ತಿದ್ದೇನೆ ...

 

ಎಲ್ಲರ ಜೀವನ ಸರಳವಾಗಿರಬೇಕೆಂದುಕೊಂಡಿದ್ದೆ,

ಆದರೀಗ, ನಾನೇ ಸಂಕೀರ್ಣತೆಯ ಸುಳಿಗಾಳಿಗೆ ಸಿಲುಕಿದ್ದೇನೆ ...

 

 ಬದುಕಿನಲ್ಲಿ ಏನನ್ನೋ  ಸಾಧಿಸಬೇಕೆಂದುಕೊಂಡಿದ್ದೆ, 

ಆದರೀಗ, ಅದೇನೆಂದೇ ಮರೆತಿದ್ದೇನೆ!

 

 

Rating
No votes yet

Comments