ಚೊಂಬೇಶ್ವರನು ಹೋದಾ ಬೆಂಚೇಶ್ವರನು ಹೋದಾ ಈಗ ಬಂದಾ ನೋಡಿ ವೆಂಕಟೇಶ್ವರಾ

ಚೊಂಬೇಶ್ವರನು ಹೋದಾ ಬೆಂಚೇಶ್ವರನು ಹೋದಾ ಈಗ ಬಂದಾ ನೋಡಿ ವೆಂಕಟೇಶ್ವರಾ

ಭಕ್ತಿಯಿಂದಾ ದರುಶನಕ್ಕೆ  ಸನ್ನಿಧಿಗೆ ಬಂದವರ ಕಾಪಾಡೋ ವೆಂಕಟೇಶ್ವರಾ


ಬೋಳಾದ ತಲೆಯು ರೌಂಡಾಗಿ ಕಾಣುವುದು ಏನ್ಮಾಡ್ಲಿ  ಮಾಡ್ಲಿ ವೆಂಕಟೇಶ್ವರಾ ಆಆಆ


 


ಹೊರಗೊಬ್ಬ  ಒಬ್ಬ ಒಬ್ಬ ಒಬ್ಬ ಭಕ್ತಾತ್ಮಾ 


ಪ್ರಸಾದ ಕೊಡು ಕೊಡು ಕೊಡು ಅಂತಾನೆ


ನಮ್ಮಪ್ಪ ಅಪ್ಪ ಅಪ್ಪ ಅಪ್ಪ ತಿಮ್ಮಪ್ಪ


ಕ್ಯೂನಲ್ಲಿ  ನಿಲ್ಲು ನಿಲ್ಲು ನಿಲ್ಲು ಅಂತಾನೆ


ಕ್ಯೂ ನಲ್ಲಿ ಕಾಯ್ದೆ ಇರೋಕಾಗತ್ತಾ ವೆಂಕಟೇಶ್ವರಾ


ಪ್ರಸಾದಾ ಇಲ್ದೆ ಹೇಗೆ ಹೋಗ್ಲಿ ಒಂದೆ ಸಲಾ 


ತನ ಡೂನ ಡೂನ  ಡೂನ ಡೂನ ಡೂ ಡೂನ


 


ತಿರುಪತಿ ತಿಮ್ಮಪ್ಪಾ ನಮ್ಮನ್ನಾ ಕಾಯಪ್ಪಾ ಸುಖವಾಗಿ ಇಡಪ್ಪಾ ಅಂತಾ ಬೈ ಹಾರ್ಟು ಮಾಡು


ಓ ಮಾಯ್ ಗಾಡ್ ತಿಮ್ಮಪ್ಪಾ ಏನ್ ಬೇಡಕೇನಪ್ಪಾ


 


ಹೈಯಸ್ಟು ಫಂಡು ಕೊಟ್ಟೋರ್ದೆ ಟ್ರೆಂಡು


ಅವ್ರನ್ನ ಕಂಡು ಆಗೋದ್ವಿ ಗುಂಡು


 


ಹಣೇ ಬರಹಾನೆ ಸರಿಇಲ್ಲಾ ವೆಂಕಟೇಶ್ವರಾ


ಇನ್ನೆಷ್ಟು ದುಡಿಬೇಕು ಕತ್ತೆ ತರಾ ತರಾ ತರಾ ತರಾ


ಟ್ರೈ ಮಾಡ್ತೇನೆ ಏನಾದ್ರು ಬ್ಯಾರೆ ತರಾ


ಹಿಂಬರ್ಕಿ ಏರ್ತೇನೆ ಹುಣಸೆ ಮರಾ ಮರಾ ಮರಾ ಮರಾ


 


ತಿಮ್ಮಪ್ಪಾ ಹೊಡಿತೀನಿ ಸಾವೀರ್ ಬಸ್ಕಿ


ಕೊಟ್ಬಿಡು ಎಲ್ಲಾರ್ಗು ನನ್ ಸಾಲದ್ ಬಾಕಿ


 


ಅಡುಗೆ ಕೋಣೆಯಲ್ಲಿ ನನ್ನ ನನ್ನ ಹೆಣ್ಣಾತ್ಮಾ


ಮಾರ್ನಿಂಗ್ ಬೇಗ್ ಹೋಗಿ ಕಾಯ್ಪಲ್ಲೆ ತನ್ನಿ ಅಂತಾಳೆ


ಮನೆಯಲ್ಲಿ ನಾನು ಒಬ್ನೆ ಒೞೆ ಪುಣ್ಯಾತ್ಮಾ


ಪಕ್ಕದವರ ಹಿತ್ಲಲ್ಲೆ ಕದ್ದು ತಂದೆ ಈ ಬದನೆ


ಕೈಯಲ್ಲಿ ಕಾಸೇ ಇಲ್ಲಾ ವೆಂಕಟೇಶ್ವರಾ


ಆಗ್ಬಾರ್ದೇ ನಾನೊಮ್ಮೆ ಸ್ವಿಸ್ ಬ್ಯಾಂಕ್ ತರಾ


ತನ ಡೂನ ಡೂನ ಡೂನ ಡೂನ ಡೂ ಡೂನ


 


ತಲೆ ಬೋಳ್ಸುತ ಬೋಳ್ಸುತ ಬೋಳ್ಸುತಿರು


ಡೌಟಿದ್ರೆ ಹೆಂಡ್ತೀನ ಕೇಳು ಗುರು


ಗುಡಿಮುಂದೆ ಹೋಗ್ತಾರಾ ಶ್ರೀಮಂತರು


ಅವರ್ಗೆ ಚಳೆಳೆ ಹಣ್ಣು ತಿನಿಸೋಕೆ ಹಚ್ಗೊ ಶುರು


 


ಪುಗ್ಸಟ್ಟೆ ಗಳ್ಸೋರ್ಗೆ ಹಾಕ್ತಿರು ಟೋಪಿ


ನಿನ್ ಕೈಯಿಂದ ತಪ್ಪೀಸಿ ಕೊಂಡವರೆ ಪಾಪಿ


ನಿವ್ಸ್ ಪೇಪರ್ ಮಾರ್ತಿದ್ರು  ನಮ್ಮ ಅಬ್ದುಲ್ ಕಲಾಮಾ


ಪ್ರೆಸಿಡೆಂಟು  ಆಗಿ ಸರ್ಕಾರಾ ನಡೆಸಲಿಲ್ವೆ


ಅಂದುಕೊಂಡದನ್ನು ಸಾಧಿಸೋನೆ ಪುಣ್ಯಾತ್ಮಾ


ಸಾಧ್ಸೊಕೆ ಯಾರು ಸರಿಯಾದ ಕೆಲಸಾ ಕೊಟ್ಟಿಲ್ವೆ


 


ಸಿಸ್ಟೆಮ್ಮೆ ಸರಿ ಇಲ್ಲಾ ವೆಂಕಟೇಶ್ವರಾ 


ಅನಂತಪದ್ಮನಾಭನಾಗಿ ಬಿಡ್ಲಾ ಒಂದೇ ಸಲಾ!


 


ತನ ಡೂನ ಡೂನ ಡೂನ ಡೂನ ಡೂ ಡೂನಾ


 


ಹಣದ ಗೋಳು ಸ್ಯಾಸ್ವತಾ !!!!!!


                                            ನಿಮ್ಮ ಸುಮಂಗಲಾ


 


 


 


 

Rating
No votes yet

Comments