ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ?

ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ?

" ಗಝಲ್ ಕಿಂಗ್"  ಎಂದು ಪ್ರಖ್ಯಾತರಾಗಿದ್ದ ಹಾಗೂ ಇಂದು ಮುಂಜಾನೆ ನಿಧನರಾದ ಜಗಜೀತ್ ಸಿಂಗ ಅವರ ದಿವ್ಯಾತ್ಮಕ್ಕೆ, ಆ ದೇವರು  ಮುಕ್ತಿಯನ್ನು ದಯಪಾಲಿಸಲಿ!

ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ
ಅದ್ಯಾವ ನೋವ ಮರೆಮಾಚುತಿರುವೆ
 
ಮಂಜಾದ ಕಣ್ಣು ತುಟಿಯಲ್ಲಿ ನಗುವು
ಏನಿಹುದು ಏನ ನೀ ತೋರುತ್ತಿರುವೆ 
ಅದ್ಯಾವ ನೋವ ಮರೆಮಾಚುತಿರುವೆ
ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ


ವಿಷವಾಗಿ ನಿನ್ನನ್ನೇ ಮುಗಿಸಬಹುದು
ಕಣ್ಣೀರ ನೀನು ಏಕೆ ಕುಡಿಯುತ್ತಿರುವೆ
ಕಾಲವೇ ಮಾಗಿಸಿಹ  ಘಾಯಗಳನೆಲ್ಲಾ
ಇಂದ್ಯಾಕೆ  ನೀನು ಹಸಿಗೊಳಿಸುತಿರುವೆ
ಅದ್ಯಾವ ನೋವ ಮರೆಮಾಚುತಿರುವೆ
ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ
 

Rating
No votes yet

Comments