ಅಗೋ ನೋಡು ಚಂದ್ರ ಬಿಂಬ!

ಅಗೋ ನೋಡು ಚಂದ್ರ ಬಿಂಬ!

ಕವನ

ನಮ್ಮ ಹೈಸ್ಕೂಲಿನಲ್ಲಿ ಗಣಿತದ ಮೇಷ್ಟ್ರು ಯಾರಾದರೂ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದಿದ್ದರೆ ಒಂದು ಕವನವನ್ನು ವಾಚಿಸುತ್ತಿದ್ದರು. ನಾನು ತಿಳಿದಂತೆ ಅದರ ಸಾರಾಂಶ ಹೀಗೆ ಉತ್ತರಿಸಿದರೆ ಪರೀಕ್ಷೆಯಲ್ಲಿ ನಿನಗೆ ಸೊನ್ನೆ ಬರುವುದೆಂದು ಸೂಚ್ಯವಾಗಿ ತಿಳಿಸುತ್ತಿದ್ದರೆಂದುಕೊಳ್ಳುತ್ತೇನೆ. ಆ ಕವನ ಹೀಗಿದೆ:

ಅಗೋ ನೋಡು ಚಂದ್ರ ಬಿಂಬ,
ಇಗೋ ನೋಡು ಲಾಂದ್ರ ಕಂಬ,
ತಗೋ ಕೈಗೆ ತಾಂಬ್ರ ಚೊಂಬ.

(ವಿ. ಸೂ: ಈ ಪದ್ಯಕ್ಕೆ ಬೇರೆಯೇನಾದರೂ ಅರ್ಥವಿದ್ದರೆ ದಯವಿಟ್ಟು ತಿಳಿಸಿ)

Comments