ಕನ್ನಡವನ್ನು ಅನ್ಡ್ರಾಯ್ಡ್ ಮೊಬೈಲ್ನಲ್ಲಿ ಹೇಗೆ ಓದೋದು ಮತ್ತು ಬರಿಯೋದು.

ಕನ್ನಡವನ್ನು ಅನ್ಡ್ರಾಯ್ಡ್ ಮೊಬೈಲ್ನಲ್ಲಿ ಹೇಗೆ ಓದೋದು ಮತ್ತು ಬರಿಯೋದು.

ಸೂಪರ್.. ಕೊನೆಗೂ ಸಂಪದದಲ್ಲಿ ಮೊಬೈಲ್ನಿಂದ ನೇರವಾಗಿ ಬರಿತಾ ಇದೀನಿ.  ಅಂದ್ರೆ ಸಂಪದದಲ್ಲಿ ನನ್ನ ಮೊಬೈಲ್ ಬ್ಲಾಗಿಂಗ್ ಶುರು. ವಿಶಯ ಏನು ಬರಿಬೇಕು ಅಂತ ಯೋಚುಸ್ತಾ ಇದ್ದಾಗ.. ಕನ್ನನಡವನ್ನ ಮೊಬೈಲ್ನಲ್ಲ್ಲಿ  ಹೇಗೆ  ಓದೋದು ಮತ್ತು ಬರಿಯೋದು ಅನ್ನೋದರ ಬಗ್ಗೇನೆ ಬರಿಯೋಣ ಅಂತ ಈ ಬರಹ. .............. ನಾನು ಅಂಡ್ರಾಯ್ಡ ಮೊಬೈಲ್ ಬಳಸಕ್ಕೆ ಶುರು  ಮಾಡಿ ಸುಮಾರು  ಒಂದೆರಡು ತಿಂಗಳುಗಳೆ ಆಯ್ತು..   ನನ್  ಮೊಬೈಲ್ ತಗೊಂಡ ಮೊದಮೊದಲು ಹುಡಕಿದ್ದೇ ಕನ್ನಡ ಹೇಗೆ ಬರಿಯೋದು , ಓದೋದು ಅಂತ. ಒಪೆರ ಮಿನಿ ಬ್ರವ್ಸರ್ನಲ್ಲಿ 'ಮಾತ್ರ' ಕನ್ನಡ ಹೇಗೆ 'ಓದೋದು' ಅಂತ ಗೊತ್ತಾದ್ರೂ  … ಹೇಗೆ  'ಬರಿಯೋದು' ಅಂತ ಮಾತ್ರ ಗೊತ್ತಾಗಿರ್ಲಿಲ್ಲ. ಇನ್ ಫ್ಯಾಕ್ಟ್ , ಆಂಡ್ರಾಯ್ಡ್ ನಲ್ಲಿ ಕನ್ನಡದ ಯುನಿಕೋಡ್ ಫಾಂಟ್ ಸಪೋರ್ಟ ಇರಲೇ  ಇಲ್ಲ.  ಈಗ್ಲೂ ಇಲ್ಲ. ಎರಡು ಮುಖ್ಯ ಕಾರಣಗಳಿಂದ ಕನ್ನಡವನ್ನು ಅನ್ಡ್ರಾಯ್ಡ್ ಮೊಬೈಲ್ಗಳಲ್ಲಿ ಓದಕ್ಕೆ ಆಗಲ್ಲ. 1. ಈ ಮೊಬೈಲ್ಗಳಲ್ಲಿ ಕನ್ನಡ ಫಾಂಟ್ ಗಳಿರಲ್ಲ. 2. ಮತ್ತು ಈ ಮೊಬೈಲ್ಗಳಲ್ಲಿ complex font rendering capability ಇರಲ್ಲ. ನಮ್ಮ ಮೊಬೈಲ್ನಲ್ಲಿ  ಕನ್ನಡ ಫಾಂಟ್ಗಳಿರಲ್ಲ ಅನ್ದ್ರೆ ಅವುನ್ನ ಹಾಕೊಳ್ಳಿ  ಅನ್ತ ನೀವು ಹೇಳಬಹುದು. ಅದು ನಿಜವೇ... ಆದರೆ ಇಲ್ಲೊಂದು  ಸಣ್ಣ ತೊಂದರೆ ಇದೆ. ಮೋಬೈಲ್ನಲ್ಲಿ ಈ ಪಾಂಟ್ಗಳು   /system/fonts ಅನ್ನೋ ಫೋಲ್ಡರ್  ನಲ್ಲಿರ್ತವೆ. ಸಾಮಾನ್ಯ ಮೋಬೈಲ್ ಬಳಕೆದಾರನಿಗೆ ಈ ಫೋಲ್ಡರ್  ನ edit permissions ಇರಲ್ಲ. ಹಾಗಾಗಿ ನಾವು ಕನ್ನಡ ಫಾಂಟ್ಗಳನ್ನ ಈ ಫೋಲ್ಡರ್ ಗೆ ಸುಕಾಸುಮ್ಮನೆ ಹಾಕಕ್ಕೆ ಬರಲ್ಲ. ಮೊದಲು ಈ ಫೋಲ್ಡರ್ನ edit permissions ತಗೋಬೇಕು. ಮೋಬೈಲ್ನಲ್ಲಿನ ಅನ್ಡ್ರಾಯ್ಡ್ ಓಎಸ್  ನ Root permissions (ಅತ್ವ administrator rights) ತಗೊಂಡ್ರೆ ನಾವು ಆ ಫೊಲ್ಡರ್ಗೆ ನಮಗೆ ಬೇಕಿರೋ ಕನ್ನಡ ಫಾಂಟ್ಗಳನ್ನ ಹಾಕಬಹುದು. ಸಾಮಾನ್ಯ ಬಳಕೆದಾರರಾದ ನಮಗೆ ನಮ್ಮ ಮೊಬೈಲ್ ಓ ಎಸ್  ವ್ಯವಸ್ತೆಯ superuser ಆಗಕ್ಕೆ ತಾಳ್ಮೆಯಾಗಳಿ, ತಿಳುವಳಿಕೆಯಾಗಳಿ ಇರಲ್ಲ. ಹಾಗಾಗಿ ಕಮ್ಪನಿಯವರೇ ಸ್ವತಹ ನಮಗೆ ಕನ್ನಡ ಫಾಂಟ್ಗಳನ್ನ ನಮ್ ಮೊಬೈಲ್ಗೆ ಹಾಕ್ಕೊಡೊ ವರೆಗೂ ನಾವು ಕನ್ನಡ ಓದಂಗಿರಲ್ಲ. ಇತ್ತೀಚೆಗೆ ಕೆಲ ಸ್ಯಾಮ್ಸಂಗ್, ಸೋನಿ ಎರಿಕ್ಸನ್ನ ಹ್ಯಾಂಡ್ಸೆಟ್ ಗಳು flipfont ಗಳನ್ನ ಸಪೋರ್ಟ ಮಾಡ್ತವೆ. ಅರ್ತಾತ್ ಅವುಗಳಲ್ಲಿ flipfont library ಇರುತ್ತೆ. ಇಂತ ಮೊಬೈಲ್ಗಳಲ್ಲಿ  ನಾವು ಕನ್ನಡ ಓದಬಹುದು. (ಇಲ್ಲ ಅಂದ್ರೆ ನಿಮ್ಮ ಮೊಬೈ ಲನ್ನು  root ಮಾಡ್ಬೇಕಾಗುತ್ತೆ.) ................. ಕನ್ನಡ ಓದಲು. ನಿಮ್ಮ ಮೊಬೈಲ್ನಲ್ಲಿ   flip font facility ಇದ್ರೆ, ನೇವು fonts for galaxy sp ಅನ್ನೊ  ಆಂಡ್ರಾಯ್ಡ್ ಅಪ್ಲಿಕೇಶನ್ ಹಾಕೊಂಡು  ಅದರ ಮೂಲಕ akshar.ttf (akshar.apk) ಅನ್ನೊ ಫಾಂಟ್ಸಗಳನ್ನ ‘ಇನ್ಸ್ಟಾಲ್ ‘ ಮಾಡ್ಕೋಬೇಕು.  ಮೊದಲು  ಈ ಅಪ್ಲಿಕೇಶ ನ್  ಹಾಕೊಳ್ಳಿ. https://market.andr… ಇನ್ಸ್ಟಾಲ್ ಮಾಡಿದ ಮೇಲೆ ಈ ಅಪ್ಲಿಕೇಶ ನ್ ತೆರೆದರೆ.. ಒಳಗೆ ಕೆಲವೊಂದು  ಫಾಂಟ್ ಗಳಿಗೆ  ಕೊಂಡಿಗಳಿರೋದು  ಕಾಣುತ್ತೆ. ( ಸೂಚನೆ..ಇವೆಲ್ಲ ಮಾರ್ಕೆಟ್ ಆಚೆಗಿನ ಕೊಂಡಿಗಳಾದ್ದರಿಂದ > settings > applications ಗೆ ಹೋಗಿ ಅಲ್ಲಿ unknown resources ಅನ್ನು ಟಿಕ್ ಮಾಡಬೇಕು. ) A ಮುಂದೆ akshar.ttf ಗೆ ಕೊಂಡಿ  ಇದೆ. K ಮುಂದೆ ಇತರ ಐದು ಕನ್ನಡ ಫಾಂಟ್ಗಳಿಗೆ ಕೊಂಡಿಗಳಿವೆ. ನಿಮಗೆ ಯಾವ ಫಾಂಟ್ ಬೇಕೋ ಅದನ್ನ ಇಳಿಸಿಕೊಂಡು ಇನ್ಸಟಾಲ್ ಮಾಡಿಕೊಳ್ಳಿ. ನಂತರ settings ಗೆ ಹೋಗಿ ನನ್ತರ >display >screen display ನಲ್ಲಿ >font style ಗೆ ಹೋಗಿ. ಇಲ್ಲಿ ನಿಮ್ಮ ಮೊಬೈಲ್ ನಲ್ಲಿರೋ ಫಾಂಟ್ಸುಗಳು ಕಾಣ್ತವೆ. ಇವುಗಳಲ್ಲಿ ನೀವು ಹೊಸದಾಗಿ  ಇನ್ಸ್ಟಾಲ್  ಮಾಡಿರುವ ಕನ್ನಡ ಫಾಂಟ್ ಆಯ್ಕೆ ಮಾಡಿ,ಮಾಡಿ ಹೊರಬನ್ನಿ. ಈಗ sampada.net ಅನ್ನ ಅತ್ವ ನಿಮ್ ಮೊಬೈಲ್ನಲ್ಲಿರೋ ಯಾವುದೇ ಕನ್ನಡದಲ್ಲಿರೋ ಕಡತ ತೆಗೆದು ನೋಡಿ. ನಿಮಗೆ ಕನ್ನಡ ಓದಲು ಸಾಧ್ಯ ಆಗುತ್ತೆ. ಇಲ್ಲಿ ನಾವು ಏನು ಗಮನಿಸ್ಬೇಕು ಅಂದ್ರೆ … ಇನ್ನೂ ಯಾವ ಆಂಡ್ರಾಯ್ಡ್ ಸೆಟ್ಗಳಲ್ಲೂ complex font rendaring capability ಇಲ್ಲ. ಹಾಗಾಗಿ ನಾವು ಒತ್ತಕ್ಷರಗಳನ್ನಾ ಸರಿಯಾಗಿ ಬರೆಯಲಿ ಅಗಲ್ಲ. .................. ಕನ್ನಡ ಬರೆಯಲು. ಇದಿಶ್ಟೂ ಕನ್ನಡ ಓದೋದ್ರ ಬಗ್ಗೆ ಅಯ್ತು. ಇನ್ನು ಕನ್ನಡ ಟೈಪು  ಮಾಡಕ್ಕೆ ನಮ್ಮ ಕನ್ನಡದ ಹುಡುಗ್ರೇ  ಎರಡ್ಮೂರು ಕನ್ನಡ ಕಿಪ್ಯಾಡ್ ಮಾಡಿದ್ದಾರೆ. ಅವುನ್ನ ನಿಮ್ಮ ಮೊಬೈಲ್ಗೆ ಹಾಕಿಕೊಂಡ್ರೆ ಅಯ್ತು. ಸದ್ದಯಕ್ಕೆ ಈ ಕೆಳಗಿನ ಕನ್ನಡ ಕಿಬೋರ್ಡ ಗಳು  ಆಂಡ್ರಾಯ್ಡ ಮಾರ್ಕೆಟ್ ನಲ್ಲಿವೆ. 1. Kannada for anysoftkeyboard 2. Panini kannada keyboard 3. Kannada-hindi keyboard ಮೂರನ್ನೂ ಟ್ರೈ ಮಾಡಿದ ನನಗೆ “kannada for anysoftkeyboard” ಅನ್ನೋ ಕಿಬೋರ್ಡ್  ಇದ್ಟ ಆಯ್ತು. ಇದನ್ನೇ ಬಳಸಿ ಈ ಬ್ಲಾಗ್ ಬರಿತಾ ಇದೀನಿ. ಇಲಿದ ಕಿಬೋರ್ಡ್ ಗಳನ್ನ ನೀವು ಬಳಸಿ ಯಾವುದು ಇಶ್ಟ ಆಗುತ್ತೋ ಅದನ್ನ ಬಳಸಕ್ಕೆ ಶುರು ಮಾಡಿ. ಈ ಕಿಬೋರ್ಡು ಬಳಸಲು ಕೆಳಗಿನ ಸೂಚನೆ ಪಾಲಿಸಿ. 1. https://market.andr… ಈ ಅಪ್ಲಿಕೇಅನ್ ಅನ್ನು ಮೊದಲು ನಿಮ್ಮ ಮೊಬೈಲ್ನಲ್ಲಿ ಹಾಕಿಕೊಲಳ್ಳಿ. 2. ನಂತರ ಈ ಕೆಳಗಿನ ಕನ್ನಡ ಪ್ಲಗಿನ ಕಿಬೋರ್ಡ್ ಹಾಕೊಳ್ಳಿ. https://market.andr… ಎಲ್ಲ ಅದ್ಮೇಲೆ, ನಿಮ್ಮ ಮೊಬೈಲ್ನಲ್ಲಿ  > settings > Languages and keyboards ಒಳಗೆ any soft keyboard ಅನ್ನು ಟಿಕ್ ಮಾಡಿ. ಇದರ ನನ್ತರ, ಅಲ್ಲೇ ಕೆಳಗಿರಿವ anysoftkeyboard settings ಒಳಗೆ ಹೋಗಿ external add ons ನಲ್ಲಿ ಮತ್ತೆ keyboard ಒಳಗೆ ಹೋಗಿ. ಇಲ್ಲಿ ಕನ್ನಡ ವನ್ನು ಎನೇನಲ್ ಮಾಡಿ ಹೊರಬನ್ನಿ. ಈಗ ಕಿಬೋರ್ಡ್ ಹಾಕೊಂಡಾಯ್ತು.  ಟೈಪು ಮಾಡೋದಶ್ಟೇ ಉಳಿದಿರೋದು. ಇದಕ್ಕೆ  ನೀವು  ಎಲ್ಲಿ ಟೈಪು ಮಾಡಬೇಕು  ಅನ್ತ ಇದಿರೋ  ಅಲ್ಲಿ  ನಿಮ್ಮ ಬೆರಳನ್ನ ಸ್ವಲ್ಪ ಹೊತ್ತು  ಒತ್ತಿ ಹಿಡಿದಿಕೋಳ್ಳಿ. ಆಗ ಚಿತ್ರದಲ್ಲಿರುವಂತೆ ಒನ್ ದು ಪಾಪಪ್ ತೆರೆ ಬರುತ್ತೆ. ಅದರಲ್ಲಿ input method ಅಯ್ಕೆ ಮಾಡಿಕೊಂಡು ನನಂತರ ಅದರೊಳಗೆ  anysoft keyboard ಆಯ್ಕೆ ಮಾಡಿಕೊಳ್ಳಿ ...  ಈಗ ನೋಡಿ ನಿಮ್ಮ ಮೊಬೈಲ್ನಲ್ಲಿ  ಕನ್ನಡ ಕಿಬೋರ್ಡ ಹಾಜರ್... ಮತ್ತೆ ಇನ್ಯಾಕೆ ತಡ.. ಕನ್ನಡದಲ್ಲಿ ಬರಿಯಲು ಶುರುಹಚ್ಕೊಳ್ಳಿ. ............. ಒಂದು ಬಿಟ್ಟಿ ಸಲಹೆ...... ಸಮ್ಪದದಲ್ಲಿ ಅತ್ವ ಇನ್ಯಾವ ನೆಟ್ಗೆ ಕನೆಕ್ಟ್ ಆಗಿರೋ ಸೈಟ್ನಲ್ಲಿ ನೇರವಾಗಿ ಟೈಪು  ಮಾಡೋ ಬದಲು, ಬೇರೆ ಯಾವುದಾದ್ರೂ offline ನಲ್ಲಿರೋ ನೋಟ್ ಪ್ಯಾಡ್ನಲ್ಲಿ ಬರೆದು ನನಂತರ ಬ್ಲಾಗಿಗೆ ಪೇಸ್ಟ್ ಮಾಡೋದು ಉತ್ತಮ. ನಾನು  ಇದಕ್ಕೆ  evernote ಅಪ್ಲಿಕೇಶ ನ್ ಬಳಸ್ತಾ ಇದೀನಿ.
Rating
No votes yet

Comments