ಬೆಂಗಳೂರು ,ಅದೊಂದು ಮಧ್ಯಮ ವರ್ಗದವರೇ ಹೆಚ್ಚಾಗಿ ವಾಸಿಸುವ ಏರಿಯಾ ಆಲ್ಲಿನ ಮನೆಯೊಂದರ , ರೂಮಲ್ಲಿ ಬರುತ್ತಿದೆ ಹಾಡು.....
ಕಾಲೇಜ್ ಗೇಟಲ್ಲಿ ಚೋಮ್ಬೇಶ್ವರ............ತನ ಡೂನ ಡೂನ ಡೂನ...........
ಮೊಬೈಲ್ ರಿಂಗ್ ತಾರಕ ಸ್ವರದಲ್ಲಿ ಅರಚುತ್ತಿದ್ದರೂ ಫೋನ್ ಎತ್ತದೆ 'ಆರಾಮಾಗಿ' ಮಲ್ಕೊಂಡಿರೋ ಮಗರಾಯನ ಬಗ್ಗೆ ಗೊಣಗುತ್ತಲೇ ಅವನ ಬೆಡ್ ರೂಮಿಗೆ ಅಡಿ ಇಕ್ಕಿದ ತಾಯಿ ಹೇಳ್ತಾರೆ 'ಲೋ ಘಂಟೆ ಏಳು ಕಾಲು ಆಯ್ತು ಕಣೋ, ಏಳೋ ನನ್ ಪುಟ್ಟಾ'
ಅವ್ನು ಮಲಗಿದಲ್ಲೇ ಹೊದಿಕೆನ ಸರಿಸದೆ ಹೇಳ್ತಾನೆ 'ಅಮ್ಮ ಇವತ್ತು ಇರೋದು ಲ್ಯಾಬ್, ಲೇಟ್ ಆಗ್ ಹೋದರೂ ನಡೆಯುತ್ತೆ..
ತಾಯಿ ಕೋಪದಿಂದ 'ಆ ಫೋನ್ ಎತ್ ಅದ್ಯಾರು-ಏನು ಅಂತ ಕೇಳೋಕೆ ಏನ್ ದಾಡಿ ನಿಂಗೆ? ಒಳ್ಳೆ ಕುಂಭ ಕರ್ಣನಂಗೆ ಮಲಗಿದೀಯ, ಸದಾ ನಿದ್ದೇದೆ ಚಿಂತೆ ನಿಂಗೆ' ...
ಅಮ್ಮ ಆ ಫೋನ್ ಎತ್ಬೇಡ 'ಅದು ಖಂಡಿತ ಅವಳೇ ಮಾಡಿರಬೇಕು ಆಮೇಲೆ, ಬೆಳಮ್ಬೇಳಗ್ಗೆ ಅವಳತ್ರ ಸಹಸ್ರ ನಾಮಾರ್ಚನೆ ಮಾಡಿಸ್ಕೊಬೇಕಾಗ್ತೆ' ಅವಳ್ಗೆ ಲ್ಯಾಬ್ ಆದರೂ ಕ್ಲಾಸೇ ಆದರೂ ನಾ ಅಲ್ಲಿರಲೇಬೇಕು,...
ಆದರೂ ತಾಯಿ ಅವನ ಮಾತು ಕಿವಿಗೆ ಬಿದ್ದಿಲ್ಲ ಎಂಬಂತೆ ಆ ಫೋನ್ ಎತ್ತಿ 'ಹಲ್ಲೋ ಹಾಂ ಹೌದು, ಅದಾ ಅಯ್ಯೋ ಅದು ನಿನ್ಗೊತ್ತಿರೋದೆಯ.
ಏನು? ಹಾಂ ಇನ್ನು ಒಂದು ಘಂಟೆಲಿ ಅವ್ನು ಕಾಲೇಜ್ ಹತ್ರ ಇರ್ತಾನೆ,
ಹೌದ? ಇರು ಕೊಡ್ತೀನಿ ನೀನೆ ಮಾತಾಡು ಅವನ ಹತ್ರ.
ಏ ಪುಟ್ಟಾ ತಗೊಳ್ಳೋ, ಅವ್ಳು ನಿಂಜೊತೆ ಅದೇನೋ ಮಾತಾಡಬೇಕಂತೆ!!
ಅವ್ನು ಗೊಣಗುತ್ತಲೇ ಫೋನ್ ಹಿಡಿದು ಹಲೋ - ಹಾಂ ,ಹೇಳೇ ಅಂದದ್ದೇ ತಡ
ಅವಳು ,'ಲೋ ಗೂಬೆ!' ಇವತ್ತೂ ಲೇಟಾ?
ತಥ್, ನೀ ಈ ಜನ್ಮದಲ್ ಸುಧಾರಿಸೋಲ್ಲ ಕಣೋ...
ಈಗೇನು ಇನ್ ಅರ್ಧ ಘಂಟೆಲಿ ಇಲ್ ಬರ್ತೀಯೋ ಇಲ್ಲ ,ನಾನೇ ಆಲ್ ಬರ್ಲಾ?
ಇವಂಗೆ ರೇಗಿ ಹೋಯ್ತು ' ಅಲ್ಲ ಆ ದರಿದ್ರ ಲ್ಯಾಬ್ ಇದೆ ಇವತ್ತು , ಅದಕ್ಯಾಕೆ ಇವಳು ತಲೆ ಮೇಲೆ ಆಕಾಶ ಬಿದ್ದ ಹಾಗ್ ಆಡ್ತಾಳೆ? ಅಂತ ಮನಸಲ್ಲೇ ಅನ್ಕಂಡು ,
ಅಮ್ಮ ತಾಯಿ ನೀ ಇಲ್ ಬರೋದು ಬೇಡ , ನಾನೇ ಅಲ್ಗೆ ಬರ್ತೀನಿ ಕ್ಯಾಂಟೀನ್ ನಲ್ಲಿ ಕಾಫೀ ಕುಡೀತ ಆರಾಮಾಗಿರು. ಬೈ ಅಂದವನೆ ಫೋನ್ ಕಟ್ ಮಾಡಿದ.
ಅಬ್ಬ! ದೇವ್ರೇ ಸಧ್ಯ ಬದುಕ್ಕೊಂಡೆ , ದೀರ್ಘ ಉಸಿರು ತೆಗೆದುಕೊಂಡ್ ಉಫ್ಫ್! ಅಂದ ,ಮಗನ ಕಡೆ ನೋಡ್ತಾ ಮುಗುಳ್ ನಗುತ್ತಲೇ ತಾಯಿ ಬೆಳಗಿನ ತಿಂಡಿ ತಯಾರಿಸಲು ಅಡುಗೆ ಮನೆಗೆ ನಡೆದರು.
ತರಾತುರಿಯಲ್ಲಿ ಹಲ್ಲುಜ್ಜಿ- ಸ್ನಾನವನ್ನ 'ಯುದ್ಧಕ್ಕೆ' ಹೊರಟವನಂತೆ ಮುಗಿಸಿ, ತಲೆ ಕೂದಲಿಂದ ಇನ್ನು ತೊಟ್ಟಿಕ್ಕುತ್ತಿರುವ ನೀರನ್ನು ಒರೆಸಿಕೊಳ್ಳದೆ ತನ್ನ ರೂಮ್ಗೆ ಹೋಗ್ತಾ 'ಅಮ್ಮ ತಿಂಡಿ ರೆಡಿನಾ? ಬಾಕ್ಸ್ ಗೆ ಹಾಕಿದ್ಯ? ಬೇಗ ಅದ್ನ ನನ್ ಬ್ಯಾಗಿಗೆ ಹಾಕು.
ತಾಯಿ- ಇರೋ ಏನೋ ಅಸ್ಟು ಅರ್ಜೆಂಟು? ಬಾ ತಿಂಡಿ ತಿನ್ನು ಬಾ ..
ಅದಕ್ಕವನು, ಅಯ್ಯೋ ಅಮ್ಮ ಅವ್ಳು ಅಲ್ಲಿ ಅದಾಗಲೇ ಅರ್ಧ ಘಂಟೆಯಿಂದ ಕಾಯ್ತಿದಾಳೆ, ನಾನೆನಾರ ಇನ್ನರ್ಧ ಘಂಟೆಲಿ ಅಲ್ಲಿ ಹೋಗದಿದ್ದರೆ ನನ್ ಕಥೆ ಅಸ್ಟೇ!!.
ಬಾಕ್ಸ್ ನ ಬ್ಯಾಗಿಗೆ ಹಾಕು ಅಲ್ಲೇ ತಿಂತೀನಿ..
ಅವಳು ನೆನ್ನೆ ತಾನೇ 'ಈ ಪ್ಯಾಂಟು ನಿನಗೆ ಚೆನ್ನಾಗಿ ಒಪ್ಪುತ್ತೆ ಕಣೋ' ಅಂತೇಳಿ ಮಲ್ಲೇಶ್ವರಂ ಬಿಗ್ ಬಜಾರಿನಲ್ಲಿ ಕೊಡಿಸಿದ್ದ , ಆ ಲೋ ವೆಸ್ಟ್ ಜೀನ್ಸ್ ನಲ್ಲಿ ಒಂದು ಕಾಲು ತೂರಿಸಿ, ಇನ್ನೊಂದರಲ್ಲಿ ಕಾಲು ಹಾಕಬೇಕು ಅಂತ ಸರ್ಕಸ್ ಮಾಡ್ತಿರ್ಬೇಕಾದ್ರೆ ಬ್ಯಾಲನ್ಸ್ ತಪ್ಪಿ ದೊಪ್ಪನೆ ಬೆಡ್ ಮೇಲೆ ಬಿದ್ದ.
ತಥ್! ಇದೊಂದು ದರಿದ್ರ ಜೀನ್ಸ್ ಈಗಲೇ ಲೇಟು, ಇದು ಬೇರೆ ಇಸ್ಟೊಂದು ಟೈಟ್ ಇದ್ದು, ಕಾಲು ತೂರಿಸಲೇ ಆಗ್ತಿಲ್ಲವಲ್ಲಪ್ಪ , ಇದನ ಹಾಕೊಳ್ಳದೆ ಕಾಲಿಜಿಗೆ ಹೋದ್ರೆ ಅವ್ಳು 'ರೇಗೋದು'ಆಗೋದು ಖಾತ್ರಿ.
ಅದೆಂಗೋ ಕಸ್ಟಪಟ್ಟು ಆ ಜೀನ್ಸ್ ನ ಹಾಕ್ಕೊಂಡು 'ಜಸ್ ಬಿ ಕೂಲ್ ' ಎಂಬ ಬರಹ ಇರವ ಟೀ-ಶರ್ಟನ ಹಾಕೊಂಡು ಅಡುಗೆ ಮನೆಯಲ್ಲಿದ್ದ ತಾಯಿಗೆ ಹೇಳಿದ ,ಅಮ್ಮ ನಾ ಹೋಗ್ತಿದೀನಿ,
ತಾಯಿ -ಇರೋ ಪುಟ್ಟಾ ಬಂದೆ, ಮಗನ ಬಳಿ ಸಾರಿ ಅವನ ಮುಂಗುರುಳು ಮೇಲಕ್ಕೆತ್ತಿ ,ಹಣೆಗೆ ಮುತ್ತ್ತನ್ನಿತ್ತು, 'ಪಾಕೆಟ್ ಮನಿ' -ಪೆಟ್ರೋಲು ಖರ್ಚು ಅಂತ ,ಐದು ನೂರರ ನೋಟೊಂದನ್ನು ಅವನ ಕೈಯಲ್ಲಿ ಇಟ್ಟರು....
ತನ್ನ ತಾಯಿ,ತಂದೆಯೊಡನೆ ಮುನಿಸಿಕೊಂಡು, ಅವನು ಪೀ ಯೂ ಸಿ ಯಲ್ಲಿ ಕಾಲೇಜಿಗೆ ಪ್ರಥಮನಾಗಿ ಬಂದಾಗ ತೆಗೆಸಿಕೊಟ್ಟ ಯಮಹ ಎಫ್ ಜೆದ್ ಸ್ಟಾರ್ಟ್ ಮಾಡಿ ರಸ್ತೆಗೆ ನುಗ್ಗಿಸಿದ , ಯಥಾ ಪ್ರಕಾರ 'ಗೇಟೂ' ಹಾಕಲಿಲ್ಲ!!
ಅವನ ಹಿಂದೆಯೇ ಬಂದ ತಾಯಿ ,ಆ ಗೇಟನ್ನು ಹಾಕುತ್ತಾ,
'ಪುಟ್ಟಾ' ಹುಷಾರಾಗಿ ಹೋಗು, ಜೋಪಾನ ,ಗಾಡೀನ ಜೋರಾಗಿ ಓಡಿಸಬೇಡ.
ಮಗ- ಅಮ್ಮ ನಾ ಜೋಪಾನವಾಗೆ ಹೋಗ್ತೀನಿ, ನಾ ಇದ್ವರ್ಗೂ ೫೦ರ ಮೇಲೆ ಸ್ಪೀಡಾಗ್ ಹೋಗಿಲ್ಲ ಗೊತ್ತಾ? ನೀ ವರಿ ಮಾಡಬೇಡ..
ಅದಾಗಲೇ ಇವ್ನು ಹೊರಗೆ ಬರೋದ್ನೆ ಕಾಯುತ್ತ ನಿಂತಂತಿದ್ದ 'ಎದುರು ಮನೆ ಹುಡುಗಿ' ಇವನತ್ತ 'ಒಂಥರಾ' ನೋಡ್ತಾ- ಹಲ್ಲು ಕಿರಿದಳು.. ಆದರೆ 'ಇವನೋ' ಅದ್ಯಾವುದನ್ನು ಯಥಾ ಪ್ರಕಾರ ಗಮನಿಸದೆ ತಾಯಿಗೆ ಬೈ ಹೇಳಿ ಬೈಕಿನ ಗೇರು ಚೇಂಜ್ ಮಾಡಿ ಸ್ಲೋ ಆಗ್ ಹೊರಟ. ತಮ್ಮ ಮನೆ 'ಕಣ್ಣಿಂದ ದೂರವಾಗುತ್ತಲೇ' ಬೈಕಿನ ವೇಗವನ್ನ ೬೦ಕ್ಕೆ ಹೆಚ್ಚಿಸಿ ಮುಖ್ಯ ರಸ್ತೆಗೆ ಇಳಿದ. ಅಲ್ಲಿಂದ ಕಾಲೇಜಿಗೆ ಕೇವಲ ಇಪ್ಪತ್ತು ನಿಮಿಷದಲ್ಲಿ ಬಂದು, ಬೈಕನ್ನ ಸ್ಟ್ಯಾಂಡಿಗೆ ಹಾಕಿ ಕ್ಯಾನ್ಟೀನಿನತ್ತ ಹೆಜ್ಜೆ ಹಾಕಿದ..
ಮುಂದಿನ ಭಾಗಗಳ ಲಿಂಕ್:
2.
http://sampada.net/%E0%B2%85%E0%B2%B5%E0%B2%B0%E0%B2%B5%E0%B2%B0-%E0%B2%AD%E0%B2%BE%E0%B2%B5%E0%B2%95%E0%B3%8D%E0%B2%95%E0%B3%86%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A8
3.
http://sampada.net/%E0%B2%85%E0%B2%B5%E0%B2%B0%E0%B2%B5%E0%B2%B0-%E0%B2%AD%E0%B2%BE%E0%B2%B5%E0%B2%95%E0%B3%8D%E0%B2%95%E0%B3%86%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A9
4.
http://sampada.net/%E0%B2%85%E0%B2%B5%E0%B2%B0%E0%B2%B5%E0%B2%B0-%E0%B2%AD%E0%B2%BE%E0%B2%B5%E0%B2%95%E0%B3%8D%E0%B2%95%E0%B3%86%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A9
Comments
ಉ: ಅವರವರ ಭಾವಕ್ಕೆ.................. (ಕಥೆ)
ಉ: ಅವರವರ ಭಾವಕ್ಕೆ.................. (ಕಥೆ)
In reply to ಉ: ಅವರವರ ಭಾವಕ್ಕೆ.................. (ಕಥೆ) by partha1059
ಉ: ಅವರವರ ಭಾವಕ್ಕೆ.................. (ಕಥೆ)
ಉ: ಅವರವರ ಭಾವಕ್ಕೆ... (ಕಥೆ)
In reply to ಉ: ಅವರವರ ಭಾವಕ್ಕೆ... (ಕಥೆ) by venkatb83
ಉ: ಅವರವರ ಭಾವಕ್ಕೆ... (ಕಥೆ)
In reply to ಉ: ಅವರವರ ಭಾವಕ್ಕೆ... (ಕಥೆ) by venkatb83
ಉ: ಅವರವರ ಭಾವಕ್ಕೆ... (ಕಥೆ)
ಉ: ಅವರವರ ಭಾವಕ್ಕೆ... (ಕಥೆ)