ಪೆನ್ಸಿಲ್ ನ ಸ್ವಗತ.......!

ಪೆನ್ಸಿಲ್ ನ ಸ್ವಗತ.......!

ಕವನ

ನಾನೊಂದು ಪೆನ್ಸಿಲ್........

ಬರೆಯಲಾರೆ ನಾ ನನ್ನಷ್ಟಕ್ಕೆ

ಸೃಜನಶೀಲನ ಕೈಯ್ಯಲ್ಲಿ ಸಿಕ್ಕಾಗ

ನನಗೊಂದು ಬೆಲೆ..!

ನನ್ನನ್ನು ಹೆರೆಯುವರು ಕೊರೆಯುವರು..!

ಅದೆಲ್ಲ ....ನನ್ನ ಸರಿ ಗುರುತು ಮೂಡಿಸಲು

ಎಂದರಿತಿದ್ದೇನೆ......!

ಬೇಕಾದಂತಹ ಸ್ಥಳದಲ್ಲಿ ಬರೆಯಲು ನಾನು ಸಿಧ್ಧ !

ನನ್ನ ಬಾಹ್ಯ ಸೌಂದರ್ಯಕ್ಕಿಂತ....

ಒಳಗಿರುವ ಭಾಗಕ್ಕೆ  ಬೆಲೆ ಹೆಚ್ಚೆಂದು

ನನಗೆ ಗೊತ್ತು...!

ಇರುವವರೆಗೆ ನಾನು...!

ನನ್ನ ಹೆಜ್ಜೆಗುರುತು ಚೆನ್ನಾಗಿ ಮೂಡಿಸುವ ಹಂಬಲ..

ಮಾನವಗೆ ನನ್ನ ಬದುಕೊಂದು ಸಂದೇಶ...!

ಅಲ್ಲವೇ.....?

 ಚಿತ್ರ ಕೃಪೆ : ಅಂತರ್ಜಾಲ

Comments